ಪವಿತ್ರವಾದ ಗಣಪತಿಕೆರೆಗೆ ಕೊಳಚೆ ನೀರು ಬಿಟ್ಟು ಮಲಿನಗೊಳಿಸಿರುವ ಬಗ್ಗೆ ಕಾಂಗ್ರೆಸ್ ಪ್ರತಿಭಟನೆ ಮಾಡಿದರೆ ತಪ್ಪೇನು ? ಜನಪರ ಕಾಳಜಿಯಿಟ್ಟುಕೊಂಡು ವಿರೋಧ ಪಕ್ಷವಾಗಿ ಕಾಂಗ್ರೆಸ್ ಪ್ರತಿಭಟನೆ ಮಾಡಿದರೆ ಸಹಿಸಿಕೊಳ್ಳಲಾಗದ ಬಿಜೆಪಿಯವರು ಬೀದಿಗಿಳಿದು ಪ್ರತಿಭಟನೆ ಮಾಡಿರುವುದು ಹಾಸ್ಯಾಸ್ಪದ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಗೋಪಾಲ ಕೃಷ್ಣ ಬೇಳೂರು ಹೇಳಿದರು.
ಸಾಗರ (ಜ.27): ಪವಿತ್ರವಾದ ಗಣಪತಿಕೆರೆಗೆ ಕೊಳಚೆ ನೀರು ಬಿಟ್ಟು ಮಲಿನಗೊಳಿಸಿರುವ ಬಗ್ಗೆ ಕಾಂಗ್ರೆಸ್ ಪ್ರತಿಭಟನೆ ಮಾಡಿದರೆ ತಪ್ಪೇನು ? ಜನಪರ ಕಾಳಜಿಯಿಟ್ಟುಕೊಂಡು ವಿರೋಧ ಪಕ್ಷವಾಗಿ ಕಾಂಗ್ರೆಸ್ ಪ್ರತಿಭಟನೆ ಮಾಡಿದರೆ ಸಹಿಸಿಕೊಳ್ಳಲಾಗದ ಬಿಜೆಪಿಯವರು ಬೀದಿಗಿಳಿದು ಪ್ರತಿಭಟನೆ ಮಾಡಿರುವುದು ಹಾಸ್ಯಾಸ್ಪದ ಎಂದು ಮಾಜಿ ಶಾಸಕ, ಕೆಪಿಸಿಸಿ ವಕ್ತಾರ ಗೋಪಾಲ ಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆರೆಗೆ ಕೊಳಚೆ ನೀರು ಬರುತ್ತಿರುವುದರಿಂದ ಜನಪರ ಕಾಳಜಿಯಿಂದ ಕಾಂಗ್ರೆಸ್ ಪಕ್ಷದವರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ಶಾಸಕರು ನನ್ನ ವಿರುದ್ಧ ಕೆಟ್ಟದಾಗಿ ನಾಲಗೆ ಹರಿಬಿಟ್ಟಿದ್ದಾರೆ. ಶಿಸ್ತು, ತತ್ವ-ಸಿದ್ಧಾಂತ ಎಂದು ಹೇಳುವ ಪಕ್ಷದ ಶಾಸಕರು ಹೀಗೆ ಕೆಟ್ಟದಾಗಿ ಮಾತನಾಡಬಹುದೇ ಎಂದು ಪ್ರಶ್ನಿಸಿದರು.
Assembly election: ನಿರಾಣಿ ಹೇಳಿಕೆ ಹಿನ್ನೆಲೆ; ಕಲಬುರಗಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ!
ಗಣಪತಿಕೆರೆ ಪುನಶ್ಚೇತನಕ್ಕೆ ಈವರೆಗೆ ಎಷ್ಟುಹಣ ಮಂಜೂರಾಗಿದೆ. ಕೆರೆ ಕಾಮಗಾರಿಗೆ ಟೆಂಡರ್ ಆಗಿದೆಯೆ. ಗಣಪತಿ ಕೆರೆ ಒತ್ತುವರಿ ತೆರವಿಗೆ ನಿರ್ಲಕ್ಷ ್ಯಯಾಕೆ. ಕೆರೆ ಒತ್ತುವರಿ ದಾರರ ಪಟ್ಟಿಯಲ್ಲಿ ಶಾಸಕರ ಹೆಸರಿರುವುದು ಸುಳ್ಳೇ? ಕೆರೆ ಪಕ್ಕದಲ್ಲಿ ಶಾಸಕರು ಆಸ್ತಿ ಖರೀದಿಸಿದ್ದು ಸುಳ್ಳೇ. ಕೆರೆ ಮೂಲಸ್ಥಾನದಲ್ಲಿ ಧ್ವಜಸ್ತಂಭ ನಿರ್ಮಾಣಕ್ಕೆ ಎಷ್ಟುವೆಚ್ಚವಾಗಿದೆ. ಇದರ ನಿರ್ಮಾಣಕ್ಕೆ ಗುತ್ತಿಗೆ ಸಂಸ್ಥೆ ಯಾವುದು. ಈ ಎಲ್ಲ ಪ್ರಶ್ನೆಗಳಿಗೆ ಶಾಸಕರು ಸಾರ್ವಜನಿಕರಿಗೆ ಉತ್ತರ ನೀಡಲು ಸಿದ್ಧರಿದ್ದಾರೆಯೇ ಎಂದವರು ಸವಾಲು ಹಾಕಿದರು.
ನಾನು ಶಾಸಕನಾಗಿದ್ದಾಗ ಏನೂ ಅಭಿವೃದ್ಧಿಯಾಗಿಲ್ಲ ಎಂದು ದೂರಿದ್ದಾರೆ. ಸಾಗರಕ್ಕೆ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರಿನ ಯೋಜನೆಗೆ ಹಣ ಮಂಜೂರು ಮಾಡಿಸಿದ್ದು ನಾನು. ನನ್ನ ಅವಧಿಯಲ್ಲಿಯೇ ಸಂಗಳದಲ್ಲಿ 16 ಎಕರೆ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇ ಘಟಕ ನಿರ್ಮಾಣವಾಗಿದೆ. ಹೊಸನಗರದಲ್ಲಿ ಎಲ್ಲ ಸರ್ಕಾರಿ ಕಟ್ಟಡಗಳೂ ಹಳೆಯದಾಗಿ ಕುಸಿದು ಬೀಳುವ ಹಂತದಲ್ಲಿದ್ದವು. ಬಹುತೇಕ ಕಟ್ಟಡಗಳನ್ನು ಹೊಸದಾಗಿ ನಿರ್ಮಿಸಲಾಗಿದೆ ಎಂದು ತಾವು ಮಾಡಿದ ಕೆಲಸಗಳನ್ನು ಸಮರ್ಥಿಸಿಕೊಂಡರು.
ಹಸಿರುಮಕ್ಕಿ ಸೇತುವೆ ಕಾಮಗಾರಿ ಸ್ಥಗಿತಗೊಂಡಿದೆ. ಸಂತೆ ಮಾರ್ಕೆಟ್ ಆರಂಭವಾಗಿಲ್ಲ. ಮೀನು ಮಾರ್ಕೆಟ್‌ಗೆ ಕಾಗೋಡರು ಹಣ ಮಂಜೂರು ಮಾಡಿಸಿದರೂ ಕಾಮಗಾರಿ ಆಗಿಲ್ಲ. ಪಾರ್ಕ್ಗಳ ನಿರ್ವಹಣೆಯಾಗುತ್ತಿಲ್ಲ ಎಂದು ದೂರಿದ ಬೇಳೂರು, ಕೋವಿಡ್ ಸಮಯದಲ್ಲಿ ಕಿಟ್ ನಲ್ಲಿ ಇವರು ಹಣ ಹೊಡೆದಿದ್ದಾರೆ. ರಾಷ್ಟ್ರಧ್ವಜದಲ್ಲೂ ಹಣ ಹೊಡೆದಿ ದ್ದಾರೆ. ಆಸ್ಪತ್ರೆ ಊಟದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುರೇಶ ಬಾಬು, ಪ್ರಮುಖರಾದ ಹೊಳಿಯಪ್ಪ, ಎನ್.ಲಲಿತಮ್ಮ, ದಿನೇಶ್, ರವಿ, ಮಹಾಬಲ ಕೌತಿ, ತಾರಾಮೂರ್ತಿ, ಅನ್ವರ್ ಬಾಷಾ, ಬಸವರಾಜ್, ಷಣ್ಮುಖ, ಸೋಮಶೇಖರ ಲಾವಿಗ್ಗೆರೆ ಮತ್ತಿತರರು ಹಾಜರಿದ್ದರು.
ಕಾಲುವೆ ಒತ್ತುವರಿ ಸಮಸ್ಯೆ: ಮಂಡಘಟ್ಟ ಗ್ರಾ.ಪಂ. ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ
ಹಾಲಪ್ಪ ವಿರುದ್ಧ ಬೇಳೂರು ವಾಗ್ದಾಳಿ
ನನಗೆ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಸಿಗುವುದಿಲ್ಲ. ಚುನಾವಣೆ ನಂತರ ಅವರು ಅಪ್ರಸ್ತುತರಾಗುತ್ತಾರೆ ಎಂದು ಹಾಲಪ್ಪ ಹೇಳಿದ್ದಾನೆ. ಟಿಕೆಟ್ ಕೊಡಲು ಇವನೇನು ಹೈಕ ಮಾಂಡಾ. ನಮ್ಮ ಕುಟುಂಬದಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಹೊಂದಾಣಿಕೆ ಇದೆ. ಬಿಜೆಪಿಯಲ್ಲೇ ಸಾಕಷ್ಟುಮಂದಿ ಟಿಕೆಟ್ ಆಕಾಂಕ್ಷಿಗಳಿದ್ದು, ಇವನಿಗೇ ಟಿಕೆಟ್ ಸಿಗುವುದಿಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.