ಬಿಜೆಪಿ ಸರ್ಕಾರದ ರಚನೆಗೆ ಕಾರಣರಾದ 17 ಮಂದಿಗೂ ಸಚಿವ ಸ್ಥಾನ ನೀಡಲು ಮಂಡ್ಯದ ಗಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದ್ಧರಾಗಿದ್ದಾರೆ ಎಂದು ಶಾಸಕ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಪರೋಕ್ಷವಾಗಿ ಟಾಂಗ್ ಕೊಟ್ಟರು.
ಮಂಡ್ಯ(ಜ.26): ಬಿಜೆಪಿ ಸರ್ಕಾರದ ರಚನೆಗೆ ಕಾರಣರಾದ 17 ಮಂದಿಗೂ ಸಚಿವ ಸ್ಥಾನ ನೀಡಲು ಮಂಡ್ಯದ ಗಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದ್ಧರಾಗಿದ್ದಾರೆ ಎಂದು ಶಾಸಕ, ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಪರೋಕ್ಷವಾಗಿ ಟಾಂಗ್ ಕೊಟ್ಟರು.
ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಪುಟ್ಟರಾಜು, ನಮ್ಮ ಸಿಎಂ ಯಡಿಯೂರಪ್ಪರನ್ನು ಹಾಡಿ ಹೊಗಳುತ್ತೇನೆ. ಯಾಕೆಂದರೆ ಅವರು ಮಂಡ್ಯದ ಗಂಡು. ಕೊಟ್ಟಮಾತಿಗೆ ಯಾವತ್ತೂ ತಪ್ಪಲ್ಲ. ಹೇಳಿದಂತೆ ನಡೆದುಕೊಳ್ಳುತ್ತಾರೆ.
ಸರ್ಕಾರ ಉಳಿಸೋಕೆ ಸಚಿವ ಸ್ಥಾನ ತ್ಯಾಗಕ್ಕೆ ಮುಂದಾದ್ರಾ ಮಾಧುಸ್ವಾಮಿ..?
ಅದರಂತೆ 17 ಮಂದಿಗೂ ಸಚಿವ ನೀಡುತ್ತಾರೆ. ನಮ್ಮ ಪಕ್ಷ ಈ ಹಿಂದೆ ಅಧಿಕಾರ ಕೊಡದೇ ಇದ್ದಾಗ, ಮಾತಿಗೆ ತಪ್ಪಿದವರು ಅಂತಾ ಹೇಳಿಕೊಂಡು ಬಂದರು. ವಚನ ಭ್ರಷ್ಟರು ಎಂದರು. ಈಗ ಅದೇ ಯಡಿಯೂರಪ್ಪನವರು ಅಂತಹ ಅಪವಾದ ಹೊತ್ತುಕೊಳ್ಳಲು ಸಿದ್ಧರಿಲ್ಲ. ಅವರು ವಚನಭ್ರಷ್ಟರು ಎನಿಸಿಕೊಳ್ಳುವುದಿಲ್ಲ ಎಂಬ ಭರವಸೆ ನನಗೆ ಇದೆ ಎಂದು ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನದಂದೇ ಅಂಬೇಡ್ಕರ್‌ಗೆ ಕಿಡಿಗೇಡಿಗಳಿಂದ ಅವಮಾನ
ಸಿಎಂ ಯಡಿಯೂರಪ್ಪ ಅವರನ್ನು ಪುಟ್ಟರಾಜು ಅವರು ಹೊಗಳಿದ್ದು ಪರೋಕ್ಷವಾಗಿ ಮೂಲ ಬಿಜೆಪಿಗರು ಮತ್ತು ವಲಸಿಗ ಬಿಜೆಪಿಗರ ಮಧ್ಯೆ ಮತ್ತಷ್ಟುಕಂದಕ ಸೃಷ್ಟಿಮಾಡುವ ಧಾಟಿ ಅವರ ಮಾತಿನಲ್ಲಿತ್ತು.