ಕುಡುಕರಿಗೆ ಪ್ರವೇಶ ಇಲ್ಲ ಅಂತ ಮಠಾಧೀಶರು ಹೇಳಿಕೆ ನೀಡಲಿ: ಸಚಿವ ಶೆಟ್ಟರ್

By Suvarna NewsFirst Published May 9, 2020, 3:05 PM IST
Highlights

ಮದ್ಯ ನಿಷೇಧಿಸಿ ಎಂದು ಆಗ್ರಹಿಸುವವರಿಗೆ ಸಚಿವ ಜಗದೀಶ ಶೆಟ್ಟರ್ ತಿರುಗೇಟು| ಒಂದು ಸಲ ಬಿಹಾರ್‌, ಗುಜರಾತ್ ಹೋಗಿ ನೋಡಕೊಂಡು ಬನ್ನಿ, ಅಲ್ಲಿ ಏನು ನಡೆಯುತ್ತದೆ ಅಂತ ಇಲ್ಲಿ ಕೂತು ಚರ್ಚೆ ಮಡೋದಲ್ಲ ಎಂದು ಹೇಳುವ ಮುಲಕ ಗುಜರಾತ್‌ನಲ್ಲಿ ಮದ್ಯ ಮಾರಾಟ ಇದೆ ಅಂತ ಪರೋಕ್ಷವಾಗಿ ಒಪ್ಪಿಕೊಂಡ ಸಚಿವ‌ ಜಗದೀಶ್ ಶೆಟ್ಟರ್‌|

ಧಾರವಾಡ(ಮೇ.09): ಲಾಕ್‌ಡೌನ್ ಮುಂಚೆಯೇ ರಾಜ್ಯದಲ್ಲಿ ಮದ್ಯ ಮಾರಾಟ ಇತ್ತಲ್ಲ? ಅವಾಗ ಯಾಕೆ ಈ ಬಗ್ಗೆ ಚರ್ಚೆ ಆಗಲಿಲ್ಲ?, ವೈಯಕ್ತಿಕ ಅಭಿಪ್ರಾಯಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ಸರ್ಕಾರ ನಡೆಸುವುದು ಬೇರೆ ಅಭಿಪ್ರಾಯ ಹೇಳುವುದು ಬೇರೆಯಾಗಿರುತ್ತದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

ಮದ್ಯ ಮಾರಾಟ ನಿಷೇಧಕ್ಕೆ ಕೆಲವರ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲೆಲ್ಲಿ ಅಭಿಪ್ರಾಯ ಹೇಳಬೇಕು ಅಲ್ಲಿ ಹೇಳುತ್ತೇವೆ. ವೈಯಕ್ತಿಕವಾಗಿ ಜನರೇ ಮದ್ಯ ಬೇಡ ಎನ್ನಬೇಕು ಎಂದು ತಿಳಿಸಿದ್ದಾರೆ.

ಮದ್ಯ ಯಾಕೆ ಬಂದ್ ಮಾಡಿಸ್ತಿಲ್ಲ ಯಡಿಯೂರಪ್ಪಜ್ಜ ಉತ್ತರ ಕೊಡಿ ಎಂದ ಬಾಲಕಿ..!

ಜನ ಸಹಕಾರ ಕೊಟ್ಟಾಗ ಮಾತ್ರ ಲಾಕ್‌ಡೌನ್ ಯಶಸ್ಸು ಆಗುತ್ತದೆ. ಹಾಗೆಯೇ ಜನ‌ ಮದ್ಯಪಾನ ಮಾಡೋದಿಲ್ಲ ಅಂತಾ ನಿರ್ಣಯ ತಗೊಳ್ಳಿ, ಸಾವಿರ ಜನ ತಗೊಳ್ಳಿ, ಲಕ್ಷ ಜನ ನಿರ್ಧಾರ ತಗೊಳ್ಳಲಿ. ಆದರೆ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು. ಸರ್ಕಾರವೇ ಎಲ್ಲವನ್ನ ಮಾಡಬೇಕಾ? ಕುಡುಕರಿಗೆ ಪ್ರವೇಶ ಇಲ್ಲ ಅಂತ ಮಠಾಧೀಶರು ಹೇಳಿಕೆ ನೀಡಲಿ, ಈ ಸಂಬಂಧ ಸ್ವಾಮೀಜಿಗಳು, ಧರ್ಮಗುರುಗಳು, ಪ್ರಾರ್ಥನಾ ಮಂದಿರಗಳು ನಿರ್ಧಾರ ತೆಗೆದುಕೊಳ್ಳಲಿ. ಕುಡುಕರು ಯಾರೂ ಪ್ರವೇಶ ಮಾಡಬೇಡಿ ಅಂತಾ ಹೇಳಲಿ, ಈ ಮಠಕ್ಕೆ ಕುಡುಕರು ಬರಬೇಡಿ, ಈ ಪ್ರಾರ್ಥನಾ ಮಂದಿರಕ್ಕೆ ಕುಡುಕರ ಬರಬೇಡಿ ಅನ್ನಲಿ, ಇಲ್ಲಿ ಕುಡುಕರಿಗೆ ಪ್ರವೇಶ ಇಲ್ಲ ಅಂತಾ ನಿರ್ಧಾರ ಮಾಡಿ ಬಿಡಲಿ ಎಂದು ಆಗ್ರಹಿಸಿದ್ದಾರೆ. 

ಬಿಹಾರ್‌, ಗುಜರಾತ್‌ನಲ್ಲಿ ಮದ್ಯ ಮಾರಾಟ ನಿಷೇಧ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಒಂದು ಸಲ ಬಿಹಾರ್‌, ಗುಜರಾತ್ ಹೋಗಿ ನೋಡಕೊಂಡು ಬನ್ನಿ, ಅಲ್ಲಿ ಏನು ನಡೆಯುತ್ತದೆ ಅಂತ ಇಲ್ಲಿ ಕೂತು ಚರ್ಚೆ ಮಡೋದಲ್ಲ ಎಂದು ಹೇಳುವ ಮುಲಕ ಗುಜರಾತ್‌ನಲ್ಲಿ ಮದ್ಯ ಮಾರಾಟ ಇದೆ ಅಂತ ಸಚಿವ‌ ಜಗದೀಶ್ ಶೆಟ್ಟರ್‌ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
 

click me!