ಕೈಗೆ ದಕ್ಕಿದ ಅಧಿಕಾರ : ಬಹುಮತವಿದ್ದರೂ ತಂತ್ರದ ಮುಂದೆ ಸೋತು ಶರಣಾದ JDS

By Kannadaprabha News  |  First Published Sep 28, 2021, 12:23 PM IST
  • ಕೆ.ಆರ್‌. ನಗರ ತಾಲೂಕು ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಳಯಕ್ಕೆ
  • ಬಹುಮತವಿದ್ದರೂ ಅಧಿಕಾರ ಪಡೆದುಕೊಳ್ಳುವಲ್ಲಿ ವಿಫಲವಾದ ಜೆಡಿಎಸ್ 

ಕೆ.ಆರ್‌. ನಗರ (ಸೆ.28):  ತಾಲೂಕು ಕೃಷಿ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಹರದನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ (Congress) ಬೆಂಬಲಿತ ನಿರ್ದೇಶಕ ಕೆಡಗ ನಟರಾಜ್‌ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ (Election) ಕಾಂಗ್ರೆಸ್‌ ಬೆಂಬಲಿತರಾಗಿ ಕೆಡಗ ನಟರಾಜು ಮತ್ತು ಜೆಡಿಎಸ್‌ (JDS) ಬೆಂಬಲಿತರಾಗಿ ಆರ್‌. ಮಲ್ಲಿಕಾ ನಾಮಪತ್ರ ಸಲ್ಲಿಸಿದರು.

Latest Videos

undefined

ನಂತರ ನಡೆದ ಚುನಾವಣೆಯಲ್ಲಿ ಕೆಡಗ ನಟರಾಜು 9 ಮತಗಳನ್ನು ಪಡೆದು 6 ಮತಗಳಿಸಿದ ಮಲ್ಲಿಕಾ ಅವರನ್ನು 3 ಮತಗಳ ಅಂತರದಿಂದ ಪರಾಭವಗೊಳಿಸಿದರು.

ಚುನವಾಣಾ ಸಭೆಯಲ್ಲಿ ಉಪಾಧ್ಯಕ್ಷ ಚಂದ್ರಶೇಖರ, ನಿರ್ದೇಶಕರಾದ ಕೆ.ಆರ್‌. ಹಿರಣ್ಣಯ್ಯ, ಎಚ್‌. ಪ್ರಕಾಶ್‌, ಬಿ. ಗಾಯಿತ್ರಿ, ಎಚ್‌.ಸಿ. ಕೃಷ್ಣೇಗೌಡ, ಕುಪ್ಪಳಿ ಸೋಮು, ಬಿ.ಎಂ. ನಾಗರಾಜು. ಎಚ್‌.ಪಿ. ಅನಿಲ್‌ಕುಮಾರ್‌, ಎಚ್‌.ಎನ್‌. ನಾಗೇಂದ್ರ, ಸಿದ್ದಲಿಂಗಮ್ಮ, ಎಚ್‌.ಸಿ. ಪ್ರಶಾಂತ್‌, ದಾಕ್ಷಾಯಿಣಿ, ಜಿ.ಆರ್‌. ಸ್ವರೂಪ, ಕಾರ್ಯದರ್ಶಿ ಡಿ. ಮಹೇಶ್‌, ಸಹ ಕಾರ್ಯದರ್ಶಿ ಆರ್‌.ಆರ್‌. ವಾಸು, ಲೆಕ್ಕಾಧಿಕಾರಿ ಚಲುವರಾಜು ಇದ್ದರು.

ಲಿಂಗಾಯತರನ್ನ ಸೆಳೆಯಲು ಕಾಂಗ್ರೆಸ್‌ ಸಭೆ

 ಬಹುಮತವಿದ್ದರೂ ಅಧಿಕಾರ ಕಳೆದುಕೊಂಡ ಜೆಡಿಎಸ್‌

ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಸ್ಪಷ್ಟಬಹುಮತವಿದ್ದರೂ ಅಧಿಕಾರ ಉಳಿಸಿಕೊಳ್ಳುವಲ್ಲಿ ವಿಫಲವಾಗಿ ತೀವ್ರ ಮುಖಭಂಗ ಅನುಭವಿಸಿತು.

ಒಟ್ಟು 16 ನಿರ್ದೇಶಕ ಸ್ಥಾನಕ್ಕೆ ಪೈಕಿ 10 ಸ್ಥಾನಗಳನ್ನು ಹೊಂದಿದ್ದ ಜೆಡಿಎಸ್‌ ಮೂವರು ನಿರ್ದೇಶಕರನ್ನು ಹೊಂದಿದ್ದ ಕಾಂಗ್ರೆಸ್‌ (Congress) ಪಕ್ಷದ ತಂತ್ರದ ಮುಂದೆ ಸೋತು ಶರಣಾಯಿತು.

ಚುನಾವಣಾ ದಿನಾಂಕ ಪ್ರಕಟವಾಗುತ್ತಿದ್ದಂತೆ ಮುಡಾ ಮಾಜಿ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ. ದೇವೇಗೌಡರ ಕಟ್ಟಾಬೆಂಬಲಿಗ ಎಚ್‌.ಎನ್‌. ವಿಜಯಕುಮಾರ್‌ ಅವರ ರಂಗಪ್ರವೇಶದಿಂದ ಇಡೀ ಚುನಾವಣಾ ಚಿತ್ರಣ ಬದಲಾಯಿತು. ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಟಿ. ಹರೀಶ್‌ಗೌಡ ಅವರ ಮಾರ್ಗದರ್ಶನದಂತೆ ಅಖಾಡಕ್ಕಿಳಿದ ಮಿರ್ಲೆ ಜಿಪಂ ಕ್ಷೇತ್ರದ ಮಾಜಿ ಸದಸ್ಯರಾದ ಹರದನಹಳ್ಳಿ ಎಚ್‌.ಎನ್‌. ವಿಜಯ್‌ ರಾತ್ರೋರಾತ್ರಿ ಜೆಡಿಎಸ್‌ಗೆ ಠಕ್ಕರ್‌ ಕೊಟ್ಟು ಕಾಂಗ್ರೆಸ್‌ ಪಕ್ಷವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಕೆಡಗ ನಟರಾಜ್‌ ಅವರನ್ನು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌. ಮಹದೇವ್‌, ಉದಯಶಂಕರ್‌, ವಕ್ತಾರ ಸೈಯದ್‌ ಜಾಬೀರ್‌, ತಾಪಂ ಮಾಜಿ ಅಧ್ಯಕ್ಷ ಎಚ್‌.ಟಿ. ಮಂಜುನಾಥ್‌, ಮಾಜಿ ಸದಸ್ಯ ಅಂಕನಹಳ್ಳಿ ಎ.ಟಿ. ಗೋವಿಂದೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ. ಶಿವಣ್ಣ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜು, ಸದಸ್ಯ ಕೋಳಿ ಪ್ರಕಾಶ್‌, ತಾಲೂಕು ಕಾಂಗ್ರೆಸ್‌ ಮುಖಂಡ ದಿಡ್ಡಹಳ್ಳಿ ಬಸವರಾಜು ಮೊದಲಾದವರು ಅಭಿನಂದಿಸಿದರು.

click me!