ಆನೇಕಲ್ ಭೀಕರ ಅಪಘಾತ: ತುತ್ತಿನ ಚೀಲ ತುಂಬಿಸಿಕೊಳ್ಳಲು ಬಂದಿದ್ದ ಅಸ್ಸಾಂ ಮೂಲದ ಮೂವರ ದುರ್ಮರಣ

Published : Dec 13, 2022, 10:16 AM ISTUpdated : Dec 13, 2022, 10:26 AM IST
ಆನೇಕಲ್ ಭೀಕರ ಅಪಘಾತ: ತುತ್ತಿನ ಚೀಲ ತುಂಬಿಸಿಕೊಳ್ಳಲು ಬಂದಿದ್ದ ಅಸ್ಸಾಂ ಮೂಲದ ಮೂವರ ದುರ್ಮರಣ

ಸಾರಾಂಶ

ಬೆಂಗಳೂರು ಹೊರವಲಯದ ಆನೇಕಲ್ - ಅತ್ತಿಬೆಲೆ ರಸ್ತೆಯ ಮಾಯಾಸಂದ್ರ ಬಳಿ ನಡೆದ ಘಟನೆ. ಡಿಕ್ಕಿ ಹೊಡೆದ ರಭಸಕ್ಕೆ ಮೂವರು ದೇಹಗಳು ಮೂವತ್ತು ಅಡಿಗೂ ದೂರದಲ್ಲಿ ಬಿದ್ದಿವೆ. 

ವರದಿ: ಟಿ.ಮಂಜುನಾಥ ಹೆಬ್ಬಗೋಡಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಆನೇಕಲ್

ಆನೇಕಲ್(ಡಿ.13):  ಜಿಟಿ ಜಿಟಿ ಮಳೆಯಲ್ಲೇ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಪಾದಾಚಾರಿಗಳ ಮೇಲೆ ಕತ್ತಲಲ್ಲಿ ಬಂದು ಐಷರ್ ವಾಹನ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. 

ಬೆಂಗಳೂರು ಹೊರವಲಯದ ಆನೇಕಲ್ - ಅತ್ತಿಬೆಲೆ ರಸ್ತೆಯ ಮಾಯಾಸಂದ್ರ ಬಳಿ ಇಂದು(ಮಂಗಳವಾರ) ಘಟನೆ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮೂವರು ದೇಹಗಳು ಮೂವತ್ತು ಅಡಿಗೂ ದೂರದಲ್ಲಿ ಬಿದ್ದಿವೆ. ಇದನ್ನು ಗಮನಿಸಿದಾಗ ಟೆಂಪೋ ಚಾಲಕನ ಬೇಜವಾಬ್ದಾರಿ ಸ್ಪಷ್ಟವಾಗಿ ಕಾಣುತ್ತಿದೆ. ಅಪಘಾತ ನೋಡಿದ ದಾರಿ ಹೋಕರು ಬೆಚ್ಚಿ ಬಿದ್ದಿದ್ದಾರೆ. ಇನ್ನು ಮೃತಪಟ್ಟವರೆಲ್ಲಾ ಹೊಟ್ಟೆಪಾಡಿಗಾಗಿ ದೂರದ ಅಸ್ಸಾಂ ಮತ್ತು ಕೋಲ್ಕತ್ತದಿಂದ ಬಂದ ಕೂಲಿ ಕಾರ್ಮಿಕರಾಗಿದ್ದಾರೆ. 

ಸ್ನೇಹಿತನ ಪೋಸ್ಟ್‌ಮಾರ್ಟಮ್‌ ನಾನೇ ಮಾಡೋದು ಬಂತ್ರಿ: ಕಣ್ಣೀರಿಟ್ಟ ಜೇವರ್ಗಿ ಸಿಪಿಐ

ಮೃತ ಚಂದನ್ ದಾಸ್ (25) ಮಾಯಸಂದ್ರ ಪ್ಲಿಪ್‌ಕಾರ್ಟ್‌ನಲ್ಲಿ 7 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದ, ಆಸಿಮ್ ದೆಯರಿ (25) ಮಾಯಸಂದ್ರದ ಡಿಹೆಚ್ಎಲ್‌ನಲ್ಲಿ ಪ್ಯಾಕಿಂಗ್ ಕೆಲಸ ಮಾಡಿಕೊಂಡಿದ್ದ ಅಂತ ತಿಳಿದು ಬಂದಿದೆ. ಕರಣ್ ಬಿಸುಮತರಿ( 27) ಕೂಡ ಡಿಹೆಚ್ಎಲ್‌ನಲ್ಲಿ ಪ್ಯಾಕಿಂಗ್ ಕೆಲಸ ಮಾಡಿಕೊಂಡಿದ್ದು ಮೂವರು ಅಸ್ಸಾಂ ಮೂಲದವರಾಗಿದ್ದು ಮಾಯಸಂದ್ರದ ಚಂದ್ರಪ್ಪನ ಮನೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. 

ಮಾಯಸಂದ್ರಕ್ಕೆ ನಡೆದು ಬರುವ ವೇಳೆ ವೇಗವಾಗಿ ಬಂದ ಈಷರ್ ವಾಹನ ಮೂವರು ಯುವಕರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿಯೇ ಮೂವರು ಜೀವ ಬಿಟ್ಟಿದ್ದಾರೆ. ಸ್ಥಳದಿಂದ ಈಷರ್ ವಾಹನ ಪರಾರಿಯಾಗಿದ್ದು, ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಿನಾರಾಯಣ್ ಮತ್ತು ಅತ್ತಿಬೆಲೆ ಪಿಐ ಕೆ. ವಿಶ್ವನಾಥ್ ತಂಡ ಪರಿಶೀಲನೆ ನಡೆಸುತ್ತಿದ್ದು. ರಸ್ತೆ ಪಕ್ಕದ ಅಂಗಡಿ‌ ಮಳಿಗೆಗಳ ಸಿಸಿ ಕ್ಯಾಮೆರಾ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ.
 

PREV
Read more Articles on
click me!

Recommended Stories

Karnataka News Live: ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
112 ಹುದ್ದೆ ನೇಮಕಾತಿ ಮುಂದುವರಿಕೆಗೆ ಕೆಪಿಎಸ್ಸಿಗೆ ನೀಡಿದ್ದ ಅನುಮತಿ ವಾಪಸ್!