ಬೆಳಗಾವಿ: ದಂಪತಿಗೆ ಮಗು ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ

By Kannadaprabha NewsFirst Published Feb 4, 2024, 9:37 PM IST
Highlights

ಕೇರಳ ರಾಜ್ಯದ ದತ್ತು ಪೋಷಕರಿಗೆ ಮೂರುವರೆ ತಿಂಗಳ ಗಂಡು ಮಗುವನ್ನು ಹಸ್ತಾಂತರಿಸಿದ ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಮಗುವನ್ನು ಅತ್ಯಂತ ಕಾಳಜಿಯಿಂದ ಸಾಕಿ ಸಲಹುವಂತೆ ವಿನಂತಿಸಿದರು. ಮಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರದ ಅಭಿರಕ್ಷಣೆಯಲ್ಲಿ ಇರಿಸಲಾಗಿತ್ತು. ನಿಯಮಾವಳಿಯಂತೆ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಮಗುವನ್ನು ಹಸ್ತಾಂತರಿಸಲಾಯಿತು.

ಬೆಳಗಾವಿ(ಫೆ.04): ನಗರದ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರದ ಅಭಿರಕ್ಷಣೆಯಲ್ಲಿದ್ದ ಮಗುವನ್ನು ನಿಯಮಗಳಂತೆ ಆಯ್ಕೆಯಾದ ದಂಪತಿಗೆ ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಸ್ತಾಂತರಿಸಿದರು.

ಕೇರಳ ರಾಜ್ಯದ ದತ್ತು ಪೋಷಕರಿಗೆ ಮೂರುವರೆ ತಿಂಗಳ ಗಂಡು ಮಗುವನ್ನು ಹಸ್ತಾಂತರಿಸಿದ ಸಚಿವರು, ಮಗುವನ್ನು ಅತ್ಯಂತ ಕಾಳಜಿಯಿಂದ ಸಾಕಿ ಸಲಹುವಂತೆ ವಿನಂತಿಸಿದರು. ಮಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಮಿ ವಿವೇಕಾನಂದ ದತ್ತು ಸ್ವೀಕಾರ ಕೇಂದ್ರದ ಅಭಿರಕ್ಷಣೆಯಲ್ಲಿ ಇರಿಸಲಾಗಿತ್ತು. ನಿಯಮಾವಳಿಯಂತೆ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ ಮಗುವನ್ನು ಹಸ್ತಾಂತರಿಸಲಾಯಿತು.

ಬೆಳಗಾವಿ: ಫೆ.5 ಕ್ಕೆ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ

ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತೇಶ ಭಜಂತ್ರಿ, ಎಂ.ಕೆ.ಹೆಗಡೆ, ವಿಶೇಷಾಧಿಕಾರಿ ರವೀಂದ್ರ ರತ್ನಾಕರ, ಆರ್‌. ಆರ್‌. ನಾಡಗೌಡರ, ಸಚಿನ್ ಹಿರೇಮಠ ಮೊದಲಾದವರು ಇದ್ದರು.

click me!