ರಾಜೀನಾಮೆ ಕೊಟ್ಟು ಬಂದವರಿಗೆ ಸ್ಥಾನ ಮಾನ ನೀಡಲು ಕಂಡೀಷನ್ !

By Suvarna News  |  First Published Jan 2, 2020, 12:35 PM IST

ಕರ್ನಾಟಕದಲ್ಲಿ ಉಪ ಚುನಾವಣೆ ಮುಕ್ತಾಯವಾಗಿ ತಿಂಗಳುಗಳೇ ಕಳೆದಿದೆ. ಆದರೆ ಇನ್ನೂ ಕೂಡ ಸಂಪುಟ ವಿಸ್ತರಣೆಯಾಗಿಲ್ಲ. ಹಾಗೇ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವುದೂ ಕೂಡ ಇನ್ನು ಪಕ್ಕಾ ಆಗಿಲ್ಲ. 


ಶಿವಮೊಗ್ಗ [ಜ.02]: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರನೆ ಬಗ್ಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ.ಸಂಕ್ರಾಂತಿ ನಂತರ ಆಗಲಿದೆಯಾ ಎನ್ನುವ ಬಗ್ಗೆ ಇನ್ನೂ ಖಚಿತವಾಗಿಲ್ಲ ಆದರೆ ರಾಜೀನಾಮೆ ಕೊಟ್ಟು ಬಂದವರಿಗೆ ಸೂಕ್ತ ಸ್ಥಾನ ಮಾನ ಸಿಗಲಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್  ಸಚಿವ ಕೆ ಎಸ್ ಈಶ್ವರಪ್ಪ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ರಾಜೀನಾಮೆ ನೀಡಿ ಗೆದ್ದು ಬಂದವರಿಗೆ ಸಚಿವ ಸ್ಥಾನ ನೀಡುವುದು ಮಾತ್ರ ಸಂಪುಟದ ಹಾಗೂ ಮುಖಂಡರಿಗೆ ಬಿಟ್ಟ ವಿಚಾರ ಎಂದರು. 

Tap to resize

Latest Videos

ಇನ್ನು ಪಕ್ಷೇತರರಾಗಿದ್ದ ಆರ್.ಶಂಕರ್  ಅನರ್ಹರಾಗಿ ಇದೀಗ ಬಿಜೆಪಿ ಸೇರಿದ್ದು, ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆಯೇ ಎನ್ನುವ ಬಗ್ಗೆ ಈಶ್ವರಪ್ಪ ತಿಳಿಸಿದ್ದಾರೆ.   ಆರ್.ಶಂಕರ್ ಕುರಿತು ಸುಪ್ರೀಂ ಕೋರ್ಟ್ ಕೆಲವು ನಿರ್ದೇಶನ ನೀಡಿದೆ.  6 ತಿಂಗಳಲ್ಲಿ ಶಾಸಕರಾಗಿ ಅಥವಾ ಎಂಎಲ್ ಸಿಗಳಾಗಿ ಬರಬೇಕೆಂಬ ನಿರ್ದೇಶನವಿದೆ. ಅದರಂತೆ ನಡೆದುಕೊಳ್ಳುವುದು ಸಹ ಪಕ್ಷದ ಹೈಕಮಾಂಡ್ ರಿಗೆ ಬಿಟ್ಟ ವಿಷಯ ಎಂದರು. 

ಗಡಿ ಖ್ಯಾತೆಗೂ ಪ್ರತಿಕ್ರಿಯೆ :  ಇನ್ನು ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿಯಲ್ಲಿ ಖ್ಯಾತೆ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಮಹಾರಾಷ್ಟ್ರ ಈ ರೀತಿ ನಡೆದುಕೊಳ್ಳುವುದು ಸರಿಯಿಲ್ಲ. ಈಗಾಗಲೇ ಈ ವಿಚಾರ ನ್ಯಾಯಾಲಯದಲ್ಲಿದೆ.  
 ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎಂಇಎಸ್ ಸಂಘಟನೆ ಗಡಿ ವಿಚಾರದಲ್ಲಿ ತಗಾದೆ ತೆಗೆದಿದೆ. ಇದನ್ನ ಖಂಡಿಸಲಾಗುವುದು.

ಗೆದ್ದ ಶಾಸಕರಿಗೆ ಶೀಘ್ರ ಮಂತ್ರಿಗಿರಿ : ಈ ತಿಂಗಳೇ ಅಧಿಕಾರ ಸ್ವೀಕಾರ..

 ಕಾನೂನುಬದ್ಧವಾಗಿ ಬಂದರೆ ಮಾತ್ರ ಗಡಿ ವಿಚಾರದಲ್ಲಿ ಹಿಂದೆ ಸರಿಯಬಹುದೇ ವಿನಃ ಬೇರೆಯಾವ ದುಷ್ಕೃತ್ಯಕ್ಕೆ ತಲೆಭಾಗಿ ನಡೆಯುವುದಿಲ್ಲ  ಎಂದು ಈಶ್ವರಪ್ಪ ಹೇಳಿದರು.

click me!