
ಆಳಂದ(ಸೆ.03): ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಠಾತ್ತಾಗಿ ವಿದ್ಯುತ್ ಬೇಲಿಯ ತಂತಿ ತಗುಲಿ ಇಬ್ಬರು ರೈತರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಸಿದ್ಧರಾಮ ಪೂಜಾರಿ(58), ಅಮೃತರಾಯ ಚಿಂಚೋಳಿ(55) ಮೃತಪಟ್ಟವರು. ಕುಲಾಲಿ ರಸ್ತೆಯಲ್ಲಿರುವ ಸಿದ್ಧರಾಮ ಪೂಜಾರಿ ಎಂಬುವರಿಗೆ ಸೇರಿದ ಹೊಲಕ್ಕೆ ಅಮೃತನೊಂದಿಗೆ ಹೋಗಿದ್ದರು. ಹಂದಿಗಳ ಕಾಟ ತಡೆಯಲೆಂದು ಕಬ್ಬಿನ ಗದ್ದೆಯ ಸುತ್ತಲೂ ವಿದ್ಯುತ್ ಬೇಲಿ ಹಾಕಿದ್ದರು. ಈ ಬೇಳೆ ಗದ್ದೆಯ ಬಂದಾರಿನಲ್ಲಿ ಕೊಡಿಗೋಲು ಹಿಡಿದ ಇಬ್ಬರು ಕೆಲಸಕ್ಕೆ ಮುಂದಾಗಿದ್ದಾಗ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಲಬುರಗಿ ಶಾಕಿಂಗ್; ಬಾವಿಯಲ್ಲಿ ಮಹಿಳಾ ಹೆಡ್ ಕಾನ್ಸ್ಟೇಬಲ್ ಶವ ಪತ್ತೆ
ಈ ಕುರಿತು ಘಟನಾ ಸ್ಥಳಕ್ಕೆ ನಿಂಬರಗಾ ಪೊಲೀಸ್ ಠಾಣೆಯ ಪಿಎಸ್‌ಐ ಸುರೇಶ ಕುಮಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಆರಂಭಿಸಿದ್ದಾರೆ. ಈ ಕುರಿತು ನಿಂಬರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.