ನಮಗೆ ಕೊರೋನಾ ಪ್ರಭಾವ ಬೀರದಿರಲು ಆಯುರ್ವೇದ ಕಾರಣ: ಸಚಿವ ಈಶ್ವರಪ್ಪ

Kannadaprabha News   | Asianet News
Published : Sep 05, 2020, 11:25 AM IST
ನಮಗೆ ಕೊರೋನಾ ಪ್ರಭಾವ ಬೀರದಿರಲು ಆಯುರ್ವೇದ ಕಾರಣ: ಸಚಿವ ಈಶ್ವರಪ್ಪ

ಸಾರಾಂಶ

ಕಳೆದ 2 ತಿಂಗಳಿಂದ ಕುಟುಂಬ ಸದಸ್ಯರೆಲ್ಲರೂ ಆಯುರ್ವೇದ ಔಷಧ ತೆಗೆದುಕೊಳ್ಳುತ್ತಿದ್ದು, ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ| ಇದೇ ಕಾರಣಕ್ಕೆ ಕೊರೋನಾ ವೈರಾಣುವಿಗೆ ನಮ್ಮ ದೇಹದ ಮೇಲೆ ಪರಿಣಾಮ ಬೀರಿಲ್ಲ. ಎಲ್ಲರೂ ಇದನ್ನು ಬಳಸಬೇಕು ಎಂದು ಹೇಳಿದ ಈಶ್ವರಪ್ಪ|

ಶಿವಮೊಗ್ಗ(ಸೆ.05): ತಮಗೆ ಮತ್ತು ತಮ್ಮ ಪತ್ನಿ ಜಯಲಕ್ಷ್ಮೀಗೆ ಕೊರೋನಾ ಸೋಂಕು ತಗುಲಿದ್ದು, ತಾವು ವೈದ್ಯರ ಶಿಫಾರಸು ಮೇರೆಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದೇವೆ. ಆದರೆ ಇದುವರೆಗೆ ಯಾವುದೇ ರೋಗ ಲಕ್ಷಣಗಳು ಕಾಣಿಸದೆ ಗುಣಮುಖರಾಗುವ ಹಂತದಲ್ಲಿದ್ದೇವೆ. ಇದಕ್ಕೆ ಕಾರಣ ಶಿವಮೊಗ್ಗದಲ್ಲಿ ಕೋವಿಡ್‌ ಸುರಕ್ಷಾ ಪಡೆ ವಿತರಿಸಿದ ಆಯುರ್ವೇದ ಆರೋಗ್ಯ ಕಿಟ್‌ ಎಂದು ಪಂಚಾಯತ್‌ರಾಜ್‌ ಸಚಿವ ಕೆ. ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. 

ಈ ಕುರಿತು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಿಂದಲೇ ಶಿವಮೊಗ್ಗದ ನಾಗರಿಕರಿಗೆ ಸಚಿವ ಕೆ. ಎಸ್‌. ಈಶ್ವರಪ್ಪ ಪತ್ರವೊಂದನ್ನು ಬರೆದಿದ್ದಾರೆ. 

ಜೋಗ ಜಲಪಾತದ ಯೋಜನೆಯೊಂದನ್ನು ರದ್ದು ಮಾಡಿದ ಸರ್ಕಾರ

ಕಳೆದ 2 ತಿಂಗಳಿಂದ ಕುಟುಂಬ ಸದಸ್ಯರೆಲ್ಲರೂ ಆಯುರ್ವೇದ ಔಷಧ ತೆಗೆದುಕೊಳ್ಳುತ್ತಿದ್ದು, ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಇದೇ ಕಾರಣಕ್ಕೆ ಕೊರೋನಾ ವೈರಾಣುವಿಗೆ ನಮ್ಮ ದೇಹದ ಮೇಲೆ ಪರಿಣಾಮ ಬೀರಿಲ್ಲ. ಎಲ್ಲರೂ ಇದನ್ನು ಬಳಸಬೇಕು ಎಂದು ಹೇಳಿದ್ದಾರೆ. 

PREV
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಅಣ್ಣಾ, ಇನ್ನು ಎಷ್ಟೊತ್ತು ಎಂದ ಗ್ರಾಹಕನಿಗೆ ಇದು ಪ್ಲೇನ್ ಅಲ್ಲ ಅಂದ ಬೆಂಗ್ಳೂರು ಕ್ಯಾಬ್ ಡ್ರೈವರ್!