ಸಂಡೂರಲ್ಲಿ ಭಾರೀ ಮಳೆ: ಮಣ್ಣು ಕುಸಿತ, ಮುಚ್ಚಿದ ಲಾರಿ

By Kannadaprabha News  |  First Published Sep 5, 2020, 9:56 AM IST

ಮಳೆ-ಗಾಳಿಗೆ ಮೆಕ್ಕೆಜೋಳ ಬೆಳೆ ಹಾನಿ| ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಭಾರೀ ಮಳೆ| ತಾಲೂಕಿನ ಯರ್ರನಹಳ್ಳಿ, ನಿಡಗುರ್ತಿ, ಚೋರನೂರು, ಜಿ.ಎಲ್‌. ಹಳ್ಳಿ, ಕಾಳಿಂಗೇರಿ, ಡಿ. ಮಲ್ಲಾಪುರದಲ್ಲಿ ಉತ್ತಮ ಮಳೆ| ಸಂಡೂರು ಹಾಗೂ ಚೋರನೂರು ಹೋಬಳಿ ಸೇರಿ 15ಕ್ಕೂ ಹೆಚ್ಚು ಮನೆಗಳಿಗೆ ಹಾನಿ| 
 


ಬಳ್ಳಾರಿ(ಸೆ.05): ಜಿಲ್ಲೆಯ ಸಂಡೂರು ತಾಲೂಕಿನಾದ್ಯಂತ ಗುರುವಾರ ರಾತ್ರಿ ಹಾಗೂ ಶುಕ್ರವಾರ ಸುರಿದ ಮಳೆ-ಗಾಳಿಗೆ ಅಪಾರ ಬೆಳೆದು ನಿಂತಿದ್ದ ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದೆ. 15ಕ್ಕೂ ಹೆಚ್ಚು ಮಣ್ಣಿನ ಮನೆಗಳು ಜಖಂಗೊಂಡಿವೆ. 

ಸಂಡೂರು ಹೊರ ವಲಯದ ಕೃಷ್ಣನಗರ, ಚೋರನೂರು ಹೋಬಳಿಯಲ್ಲಿ ಬೆಳೆದು ನಿಂತ ಮೆಕ್ಕೆಜೋಳ ಹಾನಿಯಾಗಿದೆ. ತಾಲೂಕಿನಾದ್ಯಂತ 350ಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆಹಾನಿಯ ಅಂದಾಜಿಸಲಾಗಿದೆ. ತಾಲೂಕಿನ ಯರ್ರನಹಳ್ಳಿ, ನಿಡಗುರ್ತಿ, ಚೋರನೂರು, ಜಿ.ಎಲ್‌. ಹಳ್ಳಿ, ಕಾಳಿಂಗೇರಿ, ಡಿ. ಮಲ್ಲಾಪುರದಲ್ಲಿ ಉತ್ತಮ ಮಳೆಯಾಗಿದೆ. ಸಂಡೂರು ಹಾಗೂ ಚೋರನೂರು ಹೋಬಳಿ ಸೇರಿ 15ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

Tap to resize

Latest Videos

ಪೊಲೀಸರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ!

ಲಾರಿಗಳ ಮೇಲೆ ಮೈನ್ಸ್‌ ಮಣ್ಣು

ಸಂಡೂರಿನಲ್ಲಿ ಸುರಿದ ಮಳೆಯಿಂದ ಮೈನ್ಸ್‌ ಲೋಡಿಂಗ್‌ಗಾಗಿ ಗಣಿ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಲಾರಿಗಳ ಮೇಲೆ ಮಣ್ಣು ಕುಸಿದಿರುವ ಘಟನೆ ನಡೆದಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಹರಿಶಂಕರ ಗಣಿ ಪ್ರದೇಶದಲ್ಲಿ ಲಾರಿಗಳನ್ನು ನಿಲ್ಲಿಸಲಾಗಿತ್ತು. ಮಳೆ ನೀರಿನೊಂದಿಗೆ ಹರಿದುಬಂದ ಮೈನ್ಸ್‌ ಮಣ್ಣು ಲಾರಿಗಳ ಮೇಲೆ ಬಿದ್ದಿದೆ. ಬಳಿಕ ಕಾರ್ಮಿಕರು ಮಣ್ಣನ್ನು ಹೊರ ತೆಗೆದು ಲಾರಿಯನ್ನು ಮೇಲೆಕ್ಕೆ ತಂದಿದ್ದಾರೆ. ಗಣಿಮಣ್ಣಿನಲ್ಲಿ ಲಾರಿಗಳು ಹುದುಗಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು.
 

click me!