ನಕಲಿ ಗೊಬ್ಬರ ಮಾರಾಟ ಕಂಡು ಬಂದರೆ ಕ್ರಿಮಿನಲ್‌ ಮೊಕದ್ದಮೆ: ಸಚಿವ ಗೋಪಾಲಯ್ಯ

By Kannadaprabha News  |  First Published Jun 30, 2022, 1:30 AM IST

*  ಬೇರೆ ಜಿಲ್ಲೆ, ರಾಜ್ಯಕ್ಕೆ ಅಕ್ರಮವಾಗಿ ರಸಗೊಬ್ಬರ ಸಾಗಾಣಿಕೆ: ಆರೋಪ
*  ರ​ಸ​ಗೊ​ಬ್ಬ​ರ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಎ​ಚ್ಚರ ವಹಿಸಿ
*  ಮಂಡ್ಯ ಜಿ​ಲ್ಲೆ​ಯಲ್ಲಿ ನ​ಡೆ​ದಿ​ರುವ ರ​ಸ​ಗೊ​ಬ್ಬರ ಹ​ಗ​ರ​ಣ ಬೇ​ರೆಲ್ಲೂ ನ​ಡೆ​ದಿಲ್ಲ 
 


ಮಂಡ್ಯ(ಜೂ.30): ಅಕ್ರಮವಾಗಿ ಬೇರೆ ಜಿಲ್ಲೆ, ರಾಜ್ಯಕ್ಕೆ ರಸಗೊಬ್ಬರ ಸಾಗಾಣಿಕೆ, ನಕಲಿ ರಸಗೊಬ್ಬರ ಮಾರಾಟ ಪ್ರಕರಣ ಕಂಡು ಬಂದರೆ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಎಚ್ಚರಿಸಿದರು. ಜಿ​ಲ್ಲೆ​ಯಲ್ಲಿ ಮುಂದಿನ ತಿಂಗ​ಳಿ​ನಿಂದ ಮುಂಗಾರು ಭಿ​ತ್ತನೆ ಆ​ರಂಭ​ವಾ​ಗ​ಲಿದೆ. ರ​ಸ​ಗೊ​ಬ್ಬ​ರ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಎ​ಚ್ಚರ ವ​ಹಿ​ಸು​ವಂತೆ ಜಂಟಿ ಕೃಷಿ ನಿರ್ದೇಶಕ ವಿ.​ಎಸ್‌.ಅ​ಶೋಕ್‌ಗೆ ಸೂಚಿಸಿದರು.

ಶಾ​ಸ​ಕ​ರಾದ ಅ​ನ್ನ​ದಾನಿ ಮತ್ತು ಡಿ.ಸಿ. ತ​ಮ್ಮಣ್ಣ ಮಾತನಾಡಿ, ಜಿ​ಲ್ಲೆ​ಯಲ್ಲಿ ನ​ಡೆ​ದಿ​ರುವ ರ​ಸ​ಗೊ​ಬ್ಬರ ಹ​ಗ​ರ​ಣ ಬೇ​ರೆಲ್ಲೂ ನ​ಡೆ​ದಿಲ್ಲ. ಬೋ​ಗಸ್‌ ದಾ​ಖ​ಲಾತಿ ಸೃ​ಷ್ಟಿಸಿ ಹೊರ ಜಿಲ್ಲೆ ಮತ್ತು ಹೊರ ರಾ​ಜ್ಯ​ಗ​ಳಿಗೆ ಕ​ಳು​ಹಿ​ಸ​ಲಾ​ಗಿದೆ. ಇ​ಲ್ಲಿನ ರೈ​ತ​ರಿಗೆ ರ​ಸ​ಗೊ​ಬ್ಬ​ರಕ್ಕೆ ಮ​ಣ್ಣನ್ನು ಮಿ​ಶ್ರಣ ಮಾಡಿ ಮಾ​ರಾಟ ಮಾ​ಡ​ಲಾ​ಗಿದೆ ಎಂದು ಗಂಭೀರ ಆ​ರೋಪ ಮಾ​ಡಿ​ದರು.

Tap to resize

Latest Videos

ಈ ಬಗ್ಗೆ ಯಾವ ಮ​ಟ್ಟ​ದಲ್ಲಿ ತ​ನಿಖೆ ನ​ಡೆ​ಯು​ತ್ತಿದೆ ಎಂಬುದು ಗೊ​ತ್ತಾ​ಗು​ತ್ತಿಲ್ಲ. ರ​ಸ​ಗೊ​ಬ್ಬರ ಸೊ​ಸೈ​ಟಿ​ಗ​ಳಿಗೆ ಹೋ​ಗು​ತ್ತಿಲ್ಲ. ಖಾ​ಸಗಿ ಅಂಗ​ಡಿ​ಗ​ಳಿಗೆ ಹೋ​ಗು​ತ್ತಿವೆ ಎಂದು ಆ​ರೋಪಿಸಿದರು.

Mandya Mysugar: ಮೈಶುಗರ್  ಆರಂಭಕ್ಕೆ ಸರ್ಕಾರ ಬದ್ಧ, ಬಜೆಟ್‌ನಲ್ಲಿ ಭರಪೂರ ಕೊಡುಗೆ

ಇ​ದಕ್ಕೆ ಪ್ರ​ತಿ​ಕ್ರಿ​ಯಿ​ಸಿದ ಸಚಿವ ಕೆ.ಗೋ​ಪಾ​ಲಯ್ಯ, ಇನ್ನು ಮುಂದೆ ಆ ರೀತಿ ಆ​ಗ​ದಂತೆ ನೋ​ಡಿ​ಕೊಳ್ಳಿ. ಜಿಲ್ಲೆಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿ ತೊಂದರೆ ಉಂಟಾಗಬಾರದು. ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜ ಅಥವಾ ಕಲಬೆರೆಕೆ ರಸಗೊಬ್ಬರ ವಿತರಣೆ ಕಂಡುಬಂದಲ್ಲಿ ದಾಳಿ ನಡೆಸಿ ವಶ ಪಡಿಸಿಕೊಂಡು ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಲಾಗುವುದು ಎಂದರು.

ಈಗಿರುವ ಬಿತ್ತನೆ ಬೀಜ ಅಥವಾ ರಸಗೊಬ್ಬರದ ಅವಶ್ಯಕತೆಯನ್ನು ಪರಿಶೀಲಿಸಿ. ರ​ಸ​ಗೊ​ಬ್ಬ​ರ​ದಲ್ಲಿ ಸ​ಮ​ಸ್ಯೆ​ಯಾ​ದಲ್ಲಿ ನ​ನಗೆ ತಿ​ಳಿಸಬೇಕು. ಕೃಷಿ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಬೇಡಿಕೆ ತಕ್ಕಂತೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಒದಗಿಸುವುದಾಗಿ ತಿಳಿಸಿದರು.
 

click me!