ಸದ್ಯ ಮತ್ತೆ ಲಾಕ್‌ಡೌನ್ ಮಾಡುವ ಯಾವುದೇ ನಿರ್ಧಾರವನ್ನು ಸರ್ಕಾರ ಕೈಗೊಳ್ಳುತ್ತಿಲ್ಲ| ಮುಂದಿನ ಪರಿಸ್ಥಿತಿ ನೋಡಿಕೊಂಡು ಆ ಸಮಯಕ್ಕೆ ತಕ್ಕಂತೆ ನಿರ್ಧಾರ|ಆಸ್ಪತ್ರೆಗಳು ಸೇವಾ ಮನೋಭಾವ ರೂಢಿಸಿಕೊಳ್ಳಬೇಕು| ಸದ್ಯ ದೇಶದಲ್ಲಿ ಕೊರೋನಾ ವಿರುದ್ಧದ ಯುದ್ಧ ಪರಿಸ್ಥಿತಿಯಿದ್ದು ಸರ್ಕಾರದ ನೆರವಿಗೆ ಬರುವುದು ಎಲ್ಲ ವೈದ್ಯರ ಜವಾಬ್ದಾರಿ|
ಹುಬ್ಬಳ್ಳಿ(ಜು. 01): ಕೊರೋನಾ ಪಾಸಿಟಿವ್ ಬಂದ ಪ್ರದೇಶಗಳಲ್ಲಿ ಮಾತ್ರ ಸದ್ಯ ಸೀಲ್‌ಡೌನ್ ಮಾಡಲಾಗುತ್ತಿದ್ದು, ಜು. 7ನೇ ತಾರೀಕಿನ ನಂತರ ಪರಿಸ್ಥಿತಿ ನೋಡಿಕೊಂಡು ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದ್ಯ ಮತ್ತೆ ಲಾಕ್‌ಡೌನ್ ಮಾಡುವ ಯಾವುದೇ ನಿರ್ಧಾರವನ್ನು ಸರ್ಕಾರ ಕೈಗೊಳ್ಳುತ್ತಿಲ್ಲ. ಆದರೆ, ಮುಂದಿನ ಪರಿಸ್ಥಿತಿ ನೋಡಿಕೊಂಡು ಆ ಸಮಯಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳಲಿದೆ ಎಂದರು.
ಧಾರವಾಡ: ಒಂದು ದಿನದ ಮಗುವಿಗೆ ಕೋವಿಡ್, ಮತ್ತೆ 17 ಕೊರೋನಾ ಪಾಸಿಟಿವ್
ಕೊರೋನಾ ಚಿಕಿತ್ಸೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆ ಸಭೆ ನಡೆಸಲಾಗಿದೆ. ಏನೇ ಸಮಸ್ಯೆಯಿದ್ದರೂ ನೇರವಾಗಿ ಮಾತನಾಡಲು ಹೇಳಿದ್ದೇವೆ. ಸರ್ಕಾರ ನಿಗದಿಪಡಿಸಿದ ದರ ಪಟ್ಟಿಯ ಬಗ್ಗೆ ಯಾರೂ ಪ್ರಶ್ನೆ ಮಾಡಿಲ್ಲ. ಆದರೆ, ಕೆಲವು ತಾಂತ್ರಿಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದು, ಅದನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ. ಇಲ್ಲಿನ ಕೆ.ಎಸ್. ಶರ್ಮಾ ಆಯುರ್ವೇದ ಆಸ್ಪತ್ರೆ, ಎಸ್‌ಡಿಎಂ, ಸಂಜೀವಿನಿ ಮತ್ತು ಹೆಗ್ಗೇರಿ ಆಯುರ್ವೇದ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಕೊರೋನಾ ಚಿಕಿತ್ಸೆಗೆ ಶೇ. 50ರಷ್ಟು ಹಾಸಿಗೆಗಳನ್ನು ಮೀಸಲಿಡಲು ಸಕಲ ಸಿದ್ಧತೆ ನಡೆದಿದೆ ಎಂದರು. ಆಸ್ಪತ್ರೆಗಳು ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ಸದ್ಯ ದೇಶದಲ್ಲಿ ಕೊರೋನಾ ವಿರುದ್ಧದ ಯುದ್ಧ ಪರಿಸ್ಥಿತಿಯಿದ್ದು ಸರ್ಕಾರದ ನೆರವಿಗೆ ಬರುವುದು ಎಲ್ಲ ವೈದ್ಯರ ಜವಾಬ್ದಾರಿ ಎಂದರು.
ಇನ್ನು ಪ್ರಧಾನಿ ಮೋದಿ ಅವರು ಮೊದಲೆ ಹೇಳಿದಂತೆ ಚೀನಾಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಕೇಂದ್ರ ಸರ್ಕಾರ ಚೀನಾ ಆ್ಯಪ್‌ಗಳನ್ನು ಬ್ಯಾನ್ ಮಾಡಲಾಗಿದೆ. ಅದಕ್ಕೆ ಪರಾರಯಯವಾಗಿ ಬೇರೆ ಆ್ಯಪ್‌ಗಳು ನಮ್ಮಲ್ಲಿ ರೂಪಿಸಲಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.