ಧಾರವಾಡ: ಒಂದು ದಿನದ ಮಗುವಿಗೆ ಕೋವಿಡ್‌, ಮತ್ತೆ 17 ಕೊರೋನಾ ಪಾಸಿಟಿವ್‌

Kannadaprabha News   | Asianet News
Published : Jul 01, 2020, 07:12 AM IST
ಧಾರವಾಡ: ಒಂದು ದಿನದ ಮಗುವಿಗೆ ಕೋವಿಡ್‌, ಮತ್ತೆ 17 ಕೊರೋನಾ ಪಾಸಿಟಿವ್‌

ಸಾರಾಂಶ

ಧಾರವಾಡದಲ್ಲಿ 17 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆ| ಒಟ್ಟು 345ಕ್ಕೇರಿದ ಪ್ರಕರಣಗಳ ಸಂಖ್ಯೆ| ಇದುವರೆಗೆ 186 ಜನ ಗುಣಮುಖ ಬಿಡುಗಡೆ| 151 ಸಕ್ರಿಯ ಪ್ರಕರಣಗಳು| ಇದುವರೆಗೆ ಎಂಟು ಜನ ಬಲಿ|

ಧಾರವಾಡ(ಜು. 01): ಜಿಲ್ಲೆಯಲ್ಲಿ ನಿತ್ಯವೂ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಮಂಗಳವಾರ ಮತ್ತೆ 17 ಪ್ರಕರಣಗಳಾಗಿವೆ. ಈ ಮೂಲಕ ಒಟ್ಟು ಸಂಖ್ಯೆ 345ಕ್ಕೆ ಏರಿದೆ. ವಿಶೇಷ ಎಂದರೆ ಕೊರೋನಾ ವೈರಸ್‌ ಒಂದು ದಿನದ ಹಸಿಗೂಸಿಗೂ ಬಿಟ್ಟಿಲ್ಲ. ಪಿ- 14522 (1 ದಿನ ಹೆಣ್ಣು ಮಗು) ಹುಬ್ಬಳ್ಳಿ ತಾಲೂಕು ಉಮಚಗಿಯ, ಪಿ-10800 ಅವರ ನವಜಾತ ಶಿಶು. ಪಿ- 14523 (55 ವರ್ಷ ಪುರುಷ ), ಹುಬ್ಬಳ್ಳಿಯ ಭವಾನಿನಗರದ ಕಲ್ಬುರ್ಗಿ ಗಾಲ್ಫ್‌ ವೀವ್‌ ಅಪಾರ್ಟ್‌ಮೆಂಟ್‌ ನಿವಾಸಿ. ಉತ್ತರ ಕನ್ನಡ ಜಿಲ್ಲೆ ಪ್ರಯಾಣ ಹಿನ್ನೆಲೆ.

ಪಿ-14524 (30 ವರ್ಷ, ಮಹಿಳೆ) ಹುಬ್ಬಳ್ಳಿಯ ಗದಗ ರಸ್ತೆ ನೆಹರೂ ನಗರದ ವಿN್ನೕಶ್ವರ ಅಪಾರ್ಟಮೆಂಟ್‌ ನಿವಾಸಿ. ಉತ್ತರ ಕನ್ನಡ ಜಿಲ್ಲೆ ಪ್ರಯಾಣ ಹಿನ್ನೆಲೆ ಹೊಂದಿದ್ದರು. ಪಿ -14525 (9 ತಿಂಗಳು ಗಂಡು ಮಗು) ಹಳೆಹುಬ್ಬಳ್ಳಿ ಬುಲ್ಡೋಜರ್‌ ನಗರ, ಕೊಲೆಕಾರ ಪ್ಲಾಟ್‌, ಸದರಸೋಫಾ ನಿವಾಸಿ. ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ (ಐಎಲ್‌ಐ) ಬಳಲುತ್ತಿದ್ದರು. ಪಿ -14526 (31 ವರ್ಷ, ಪುರುಷ ) ಹುಬ್ಬಳ್ಳಿ ಗಣೇಶಪೇಟೆ, ತಬೀಬ್‌ ಪ್ಲಾಟ್‌, ಲಕ್ಷ್ಮೇಶ್ವರ ಚಾಳ ನಿವಾಸಿ. ಪಿ -14527 (36 ವರ್ಷ, ಪುರುಷ ) ಧಾರವಾಡ ಕಿತ್ತೂರ ಚನ್ನಮ್ಮ ಪಾರ್ಕ್ ಹಿಂಭಾಗದ ಅರಣ್ಯ ಇಲಾಖೆ ವಸತಿಗೃಹದ ನಿವಾಸಿ.

ಧಾರ​ವಾ​ಡ: ಮತ್ತೆ 18 ಕೊರೋನಾ ಪ್ರಕ​ರಣ ಪತ್ತೆ, ಓರ್ವ ಬಲಿ

ಪಿ -14528 (38 ವರ್ಷ ಪುರುಷ) ಧಾರವಾಡ ತಾಲೂಕು ಸೋಮಾಪುರ ನಿವಾಸಿ. ಇವರೆಲ್ಲರೂ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ -14529 (47 ವರ್ಷ, ಪುರುಷ) ಹುಬ್ಬಳ್ಳಿ ಗೋಕುಲ ರಸ್ತೆ ನಿವಾಸಿ. ಕಲಬುರಗಿ ಜಿಲ್ಲೆ ಪ್ರಯಾಣ ಹಿನ್ನೆಲೆ ಹೊಂದಿದ್ದರು. ಪಿ -14530 (65 ವರ್ಷ, ಮಹಿಳೆ) ಯಲ್ಲಾಪುರ ಉತ್ತರ ಕನ್ನಡ ಜಿಲ್ಲೆಯ ನಿವಾಸಿ. ಪಿ -14531 (70 ವರ್ಷ, ಪುರುಷ) ಹಾವೇರಿ ಜಿಲ್ಲೆಯ ಹಾನಗಲ್‌ ನಿವಾಸಿ. ಪಿ-12137 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ -14532 (62 ವರ್ಷ,ಮಹಿಳೆ) ಧಾರವಾಡ ತಾಲೂಕು ಲಕಮಾಪುರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ

ಪಿ -14533 ( 30 ವರ್ಷ, ಪುರುಷ ) ಕುಂದಗೋಳ ತಾಲೂಕು ಕೊಂಕಣಕುರಹಟ್ಟಿನಿವಾಸಿ. ಪಿ-10800 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ -14534 (25 ವರ್ಷ, ಪುರುಷ ) ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಕಲಿವಾಳ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ -14535 (69 ವರ್ಷ ಪುರುಷ) ಹುಬ್ಬಳ್ಳಿ ಮಂಟೂರ ರಸ್ತೆಯವರು. ತೀವ್ರ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಪಿ -14536 (65 ವರ್ಷ, ಮಹಿಳೆ) ಹಾವೇರಿ ಜಿಲ್ಲೆಯವರು. ಪಿ-14537 (55 ವರ್ಷ ಪುರುಷ ) ಗದಗ ಬೆಟಗೇರಿ ಬಾಸೆಲ್‌ ಮಿಷನ್‌ ಕಾಂಪೌಂಡ್‌ ನಿವಾಸಿ. ಪಿ-14538 (58 ವರ್ಷ, ಮಹಿಳೆ) ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸೋಮನಾಳ ನಿವಾಸಿ. ಈ ಮೂರು ಜನರ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ.

ಕೋವಿಡ್‌ -5 ಜನ ಗುಣಮುಖ ಬಿಡುಗಡೆ...

ಇದುವರೆಗೆ ಒಟ್ಟು 184 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಕೋವಿಡ್‌ನಿಂದ ಗುಣಮುಖರಾಗಿರುವ 5 ಜನರನ್ನು ಹುಬ್ಬಳ್ಳಿಯ ಕಿಮ್ಸ್‌ನಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್‌ ತಿಳಿಸಿದ್ದಾರೆ.
ಪಿ-8744 (27 ವರ್ಷ, ಮಹಿಳೆ), ಪಿ- 9158 (72 ವರ್ಷ, ಮಹಿಳೆ), ಪಿ- 9159 (43 ವರ್ಷ, ಪುರುಷ), ಪಿ-9160 (30 ವರ್ಷ, ಪುರುಷ), ಪಿ-9161 (35 ವರ್ಷ, ಮಹಿಳೆ), ಪಿ -7047 ( 40 ವರ್ಷ, ಪುರುಷ), ಪಿ-7384 (45 ವರ್ಷ , ಪುರುಷ). ಜಿಲ್ಲೆಯಲ್ಲಿ ಇದುವರೆಗೆ 186 ಜನ ಕೋವಿಡ್‌ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
 

PREV
click me!

Recommended Stories

SIR ಪ್ರಕ್ರಿಯೆಗೆ ತೆರಳುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಅಪಘಾತದಲ್ಲಿ ಸಾವು, ಒತ್ತಡಕ್ಕೆ ಬಲಿಯಾಯ್ತಾ ಜೀವ?
ಸಣ್ಣ ಹಾವು ಕಂಡರೆ ಜೀವ ಬಾಯಿಗೆ ಬರುತ್ತೆ! ಅಂಥದ್ರಲ್ಲಿ ಜನವಸತಿ ಅಪಾರ್ಟ್‌ಮೆಂಟ್‌ನಲ್ಲಿ ಹೆಬ್ಬಾವು ಸಾಕಿದ್ದಾನೆ ಈ ಭೂಪ!