ಲಾಕ್‌ಡೌನ್‌ ಮುಂದುವರಿಸಿ ಎಂದು ಕೇಂದ್ರ ಹೇಳಿಲ್ಲ: ಶೆಟ್ಟರ್‌

Kannadaprabha News   | Asianet News
Published : May 30, 2021, 10:17 AM ISTUpdated : May 30, 2021, 10:18 AM IST
ಲಾಕ್‌ಡೌನ್‌ ಮುಂದುವರಿಸಿ ಎಂದು ಕೇಂದ್ರ ಹೇಳಿಲ್ಲ: ಶೆಟ್ಟರ್‌

ಸಾರಾಂಶ

* ಜೂ. 7ರವರೆಗೆ ಸದ್ಯ ಲಾಕ್‌ಡೌನ್‌ ಇದೆ * ಸದ್ಯ ಕೊರೋನಾ ಕಂಟ್ರೋಲ್‌ಗೆ ಬರುತ್ತಿದೆ * ಕೇಂದ್ರ ಸರ್ಕಾರದ ಗೈಡಲೈನ್‌ಗಳು ಜೂ.30ರ ವರೆಗೆ ಮುಂದುವರಿಯಲಿದೆ 

ಹುಬ್ಬಳ್ಳಿ(ಮೇ.30): ಲಾಕ್‌ಡೌನ್‌ ಮುಂದುವರಿಸಬೇಕೋ ಬೇಡವೋ ಎಂಬುದನ್ನು ತಜ್ಞರ ಸಮಿತಿ ಸಲಹೆ ಮೇರೆಗೆ ಮುಖ್ಯಮಂತ್ರಿ ನಿರ್ಧರಿಸುತ್ತಾರೆ. ಲಾಕ್‌ಡೌನ್‌ ಮುಕ್ತಾಯವಾಗುವ ಒಂದು ಅಥವಾ ಎರಡು ದಿನ ಮುಂಚೆ ತೀರ್ಮಾನಿಸಲಾಗುತ್ತದೆ. ಲಾಕ್‌ಡೌನ್‌ ಜೂ.30 ರ ವರೆಗೆ ಮುಂದುವರಿಸಿ ಎಂದು ಕೇಂದ್ರ ಸರ್ಕಾರ ಹೇಳಿಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೂ.7ರವರೆಗೆ ಸದ್ಯ ಲಾಕ್‌ಡೌನ್‌ ಇದೆ. ಅಲ್ಲಿವರೆಗೂ ಸೋಂಕಿನ ಪರಿಸ್ಥಿತಿ ಏನಿರುತ್ತದೆ ಎಂದು ಅವಲೋಕಿಸಲಾಗುತ್ತದೆ. ಸದ್ಯ ಕಂಟ್ರೋಲ್‌ಗೆ ಬರುತ್ತಿದೆ. ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ ಎಂದರು.

ಧಾರವಾಡ: ಕೇವಲ 29 ದಿನದಲ್ಲಿ 238 ಕೊರೋನಾ ಸೋಂಕಿತರ ಸಾವು..!

ಧಾರವಾಡ ಜಿಲ್ಲೆಯಲ್ಲಿ ಮೊದಲು ಪಾಸಿಟಿವಿಟಿ ದರ ಶೇ. 32ಕ್ಕೂ ಹೆಚ್ಚಿತ್ತು. ಅದೀಗ ಶೇ. 16ಕ್ಕೆ ಇಳಿದಿದೆ. ಇದಕ್ಕೆ ಕಾರಣ ಕಠಿಣ ಲಾಕ್‌ಡೌನ್‌. ಇದೇ ರೀತಿ ರಾಜ್ಯದಲ್ಲೂ ಆಗಿದೆ. ಕೇಂದ್ರ ಸರ್ಕಾರ ಕೊರೋನಾ ಸೋಂಕಿನ ಪರಿಸ್ಥಿತಿ ಸುಧಾರಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಹೇಳಿದೆ. ಕೇಂದ್ರ ಸರ್ಕಾರದ ಗೈಡಲೈನ್‌ಗಳು ಜೂ.30ರ ವರೆಗೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

PREV
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?