'ಧಾರವಾಡ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ 3 ಸಾವಿರ ಎಕರೆ ಭೂಮಿ ಮೀಸಲು'

By Suvarna NewsFirst Published Dec 16, 2019, 2:12 PM IST
Highlights

ಹೂಡಿಕೆದಾರರಿಗೆ ಭೂಮಿ, ನೀರು, ಮೂಲಸೌಕರ್ಯ, ತೆರಿಗೆ ವಿನಾಯಿತಿ ಸೇರಿ ಸೌಲಭ್ಯ ಕಲ್ಪಸುವ ಭರವಸೆ ನೀಡಲಾಗಿದೆ ಎಂದ ಶೆಟ್ಟರ್| ರಾಷ್ಟ್ರೀಯ ಹೆದ್ದಾರಿ 04 ಬೆಂಗಳೂರಿಂದ-ಪುಣೆ ವರೆಗೆ ಕೈಗಾರಿಕೆಗಳ ಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರ ಭರವಸೆ ನೀಡಿದೆ‌| ಬಾಂಬೆ- ಪುಣೆ ಎಕ್ಸಪ್ರೆಸ್ ಹೈವೇ ಮಾದರಿಯಲ್ಲೇ ಪುಣೆ-ಬೆಂಗಳೂರು ಎಕ್ಸಪ್ರೆಸ್ ಹೈವೇ ನಿರ್ಮಾಣಕ್ಕೆ ಕೇಂದ್ರ ಮುಂದಾಗಿದೆ|

ಹುಬ್ಬಳ್ಳಿ(ಡಿ.16): ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಗಳ ಸ್ಥಾಪನೆ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಉದ್ಯಮಿಗಳನ್ನ ಭೇಟಿ ಮಾಡಲು ಡಿಸೆಂಬರ್ 23 ರಂದು ಮುಂಬೈ ಪ್ರವಾಸವನ್ನು ಕೈಗೊಳ್ಳಲಿದ್ದೇವೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ನಾನು ತೆರಳುತ್ತಿದ್ದೇವೆ. ಮುಂಬೈ ನಗರದಲ್ಲಿ ಬೃಹತ್ ರೋಡ್ ಶೋ ಆಯೋಜನೆ ಮಾಡಲಾಗಿದೆ. ಪ್ರಮುಖ ಉದ್ಯಮಿಗಳ ಭೇಟಿ ಮಾಡಿ-ಹೂಡಿಕೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

ಸೋಮವಾರ ನಗರದಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಸಭೆಯಲ್ಲಿ ಹೂಡಿಕೆದಾರರನ್ನು ಆಕರ್ಷಿಸಲು ಯಾವ ರೀತಿ ಸಿದ್ದರಾಗಬೇಕೆಂಬುದರ ಕುರಿತು ಚರ್ಚೆ ಮಾಡಲಾಗಿದೆ. ಹೂಡಿಕೆದಾರರಿಗೆ ಭೂಮಿ, ನೀರು, ಮೂಲಸೌಕರ್ಯ, ತೆರಿಗೆ ವಿನಾಯಿತಿ ಸೇರಿ ಸೌಲಭ್ಯ ಕಲ್ಪಸುವ ಭರವಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಷ್ಟ್ರೀಯ ಹೆದ್ದಾರಿ 04 ಬೆಂಗಳೂರಿಂದ-ಪುಣೆ ವರೆಗೆ ಕೈಗಾರಿಕೆಗಳ ಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರ ಭರವಸೆ ನೀಡಿದೆ‌. ಬಾಂಬೆ- ಪುಣೆ ಎಕ್ಸಪ್ರೆಸ್ ಹೈವೇ ಮಾದರಿಯಲ್ಲೇ ಪುಣೆ-ಬೆಂಗಳೂರು ಎಕ್ಸಪ್ರೆಸ್ ಹೈವೇ ನಿರ್ಮಾಣಕ್ಕೆ ಕೇಂದ್ರ ಮುಂದಾಗಿದೆ ಎಂದು ತಿಳಿಸಿದ್ದಾರೆ. 

ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲೂ ಹೊಸ ಕೈಗಾರಿಕಾ ನೀತಿ ಶೀಘ್ರದಲ್ಲೇ ಜಾರಿಯಾಗಲಿದೆ. ಧಾರವಾಡ ಜಿಲ್ಲೆಯೊಂದರಲ್ಲೇ ಕೈಗಾರಿಕೆಗಳ ಸ್ಥಾಪನೆಗಾಗಿ 3 ಸಾವಿರ ಎಕರೆ ಭೂಮಿ ಮೀಸಲು ಇಡಲಾಗಿದೆ ಎಂದು ತಿಳಿಸಿದ್ದಾರೆ. 
 

click me!