ರಾಯಚೂರು: ಡ್ರಗ್‌ ಪಾರ್ಕ್ ಸ್ಥಾಪನೆ, ಶ್ರೀರ್ಘ ಮೋದಿ ಬಳಿಗೆ ನಿಯೋಗ ಸಚಿವ ಶೆಟ್ಟರ್‌

By Kannadaprabha NewsFirst Published Sep 2, 2020, 3:03 PM IST
Highlights

ಬಲ್ಕ್‌ ಡ್ರಗ್‌ ಪಾರ್ಕ್ ನಿರ್ಮಾಣಕ್ಕೆ 500 ರಿಂದ 1 ಸಾವಿರ ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ, ಅದಕ್ಕಾಗಿ ಕೇಂದ್ರ ಸಚಿವ ಸದಾನಂದಗೌಡ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ| ಪಾರ್ಕ್ ನಿರ್ಮಾಣ ಸಂಬಂಧ ಇದೇ ಅಧಿವೇಶನದ ಸಮಯದಲ್ಲಿ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ಹಸಿರು ನಿಶಾನೆ ತೋರುವಂತೆ ಮನವಿ ಮಾಡಲಾಗುವುದು|

ರಾಯಚೂರು(ಸೆ.02): ಜಿಲ್ಲೆಯಲ್ಲಿ ಬಲ್ಕ್‌ ಡ್ರಗ್‌ ಪಾರ್ಕ್ ಸ್ಥಾಪನೆಗೆ ಅನುಮತಿ ನೀಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಳಿಕೆ ಶೀಘ್ರ ನಿಯೋಗ ತೆರಳಿ ಮನವಿ ಮಾಡಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ಯಮ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ಯರಮರಸ್‌ ಸಕ್ರ್ಯೂಟ್‌ ಹೌಸ್‌ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಬಲ್ಕ್‌ ಡ್ರಗ್‌ ಪಾರ್ಕ್ ನಿರ್ಮಾಣಕ್ಕೆ 500 ರಿಂದ 1 ಸಾವಿರ ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ, ಅದಕ್ಕಾಗಿ ಕೇಂದ್ರ ಸಚಿವ ಸದಾನಂದಗೌಡ ಅವರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಪಾರ್ಕ್ ನಿರ್ಮಾಣ ಸಂಬಂಧ ಇದೇ ಅಧಿವೇಶನದ ಸಮಯದಲ್ಲಿ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ಹಸಿರು ನಿಶಾನೆ ತೋರುವಂತೆ ಮನವಿ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಕಲಬುರಗಿಯಲ್ಲಿ ಕೈಗಾರಿಕೋದ್ಯಮಿಗಳ ಸಭೆ ಹಾಗೂ ರೋಡ್‌ ಶೋ ಹಮ್ಮಿಕೊಳ್ಳಲಾಗುವುದು. ಕೊಪ್ಪಳದಲ್ಲಿ ಆಟಿಕೆ ಕೈಗಾರಿಕೆಗಾಗಿ 400 ಎಕರೆ ಸ್ಥಳ ಪಡೆಯಲಾಗಿದ್ದು, ಅಕ್ಟೋಬರ್‌ನಲ್ಲಿ ಭೂಮಿ ಪೂಜೆ ನಡೆಸಲಾಗುತ್ತದೆ. ಆರರಿಂದ ಎಂಟು ತಿಂಗಳಲ್ಲಿ ಉತ್ಪಾದನೆ ಆರಂಭಗೊಳ್ಳಲಿದ್ದು, 1500 ರಿಂದ 2 ಸಾವಿರ ಕೋಟಿ ರು.ಗಳ ಬಂಡವಾಳ ಹೂಡಿಕೆಯಾಗಲಿದೆ. 40 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದು ತಿಳಿಸಿದರು.

ರಾಯಚೂರು: ವಾಟ್ಸಪ್‌ನಲ್ಲಿ ದೇಶದ್ರೋಹದ ಸಂದೇಶ, ಉರ್ದು ಶಾಲೆ ಶಿಕ್ಷಕಿ ಅಮಾನತು

ಕೈಗಾರಿಕೆಗಳ ಅಭಿವೃದ್ದಿಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಬೆಂಗಳೂರು ಕೇಂದ್ರಿತ ವ್ಯವಸ್ಥೆಯಿಂದ ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಕೈಗಾರಿಕೆಗಳ ಬೆಳವಣಿಗೆಗೆ ಆದ್ಯತೆ ನೀಡಲಾಗಿದೆ. ಬೆಂಗಳೂರು ಕೇಂದ್ರಿತ ಕೈಗಾರಿಕಾ ಅಭಿವೃದ್ದಿಯನ್ನು ಹೊರತು ಪಡಿಸಿ, ರಾಜ್ಯದ ಇತರೆ ಜಿಲ್ಲೆಗಳಲ್ಲಿಯೂ ಕೈಗಾರಿಕೆಗಳ ಏಳಿಗೆಗೆ ಸರ್ಕಾರದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಕಲಬುರಗಿಯಲ್ಲಿ ಹೂಡಿಕೆದಾರರ ಸಮ್ಮೇಳನ ಆಯೋಜಿಸುವುದಾಗಿ ಎಂದು ಹೇಳಿದರು. ಕಳೆದ 10 ತಿಂಗಳ ಹಿಂದಿನಿಂದಲೂ ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗಾಗಿ ಅವಿರತ ಶ್ರಮಹಾಕಲಾಗಿದೆ, ಅದರ ಅಂಗವಾಗಿ ಹುಬ್ಬಳಿಯಲ್ಲಿ ಇನ್‌ವೆಸ್ಟ್‌ ಕರ್ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಕೈಗಾರಿಕೋದ್ಯಮಿಗಳನ್ನು ಆಕರ್ಷಿಸಲಾಯಿತು, ಕೊರೋನಾ ಸೋಂಕು ಹಿನ್ನಲೆಯಲ್ಲಿ ಈ ನಡುವೆ ಸ್ಪಲ್ಪ ಮಟ್ಟಿನ ಹಿನ್ನಡೆ ಅನುಭವಿಸುವಂತಾಯಿತು ಎಂದರು.

ಯಾದಗಿರಿ ಜಿಲ್ಲೆಯ ಕಡೇಚೂರಿನಲ್ಲಿ 3 ಸಾವಿರ ಎಕರೆಗೂ ಹೆಚ್ಚು ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ, ಅದರಲ್ಲಿ 2 ಸಾವಿರ ಎಕರೆ ಭೂಮಿಯಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳು ಹಾಗೂ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ, ಹುಬ್ಬಳಿಯಲ್ಲಿ ನಡೆದ ಇನ್‌ವೆಸ್ಟ್‌ ಕರ್ನಾಟಕದಿಂದಾಗಿ ಇಲ್ಲಿ 15 ಫಾರ್ಮಸ್ಯುಟಿಕಲ್‌ ಕಂಪನಿಗಳು ಕಾರ್ಯಾರಂಭಿಸಲು ಮುಂದೆ ಬಂದಿವೆ, ಮುಂಬರುವ ಕೆಲವೇ ತಿಂಗಳಲ್ಲಿ ಅವುಗಳ ಉತ್ಪಾದನೆ ಆರಂಭಗೊಳ್ಳಲಿದೆ ಎಂದರು.

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದ್ದು, 79 ಎ,ಬಿ ತೆಗೆಯಲಾಗಿದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಕ್ರಿಯೆಗಳು ನಡೆಯುತ್ತಿವೆ, ಅದಕ್ಕಾಗಿ ಮೂಲ ಸೌಕರ್ಯ ಕಾರ್ಯದರ್ಶಿಯವರು ಈಗಾಗಲೇ ಇಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ, ಆದಷ್ಟುಬೇಗನೆ ಇಲ್ಲಿ ವಿಮಾನ ನಿಲ್ದಾಣ ಆರಂಭಗೊಳ್ಳಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕ ಡಾ.ಶಿವರಾಜ ಪಾಟೀಲ್‌ ಉಪಸ್ಥಿತರಿದ್ದರು.
 

click me!