ಉಪಚುನಾವಣೆಯಲ್ಲಿ ಜನರ ತೀರ್ಮಾನ ಬಿಜೆಪಿ ಪರವಾಗಿ ಇರುತ್ತದೆ ಎಂದ ಶೆಟ್ಟರ್| ಬಂಡಾಯ ಎಲ್ಲಾ ಪಾರ್ಟಿಯಲ್ಲಿರುತ್ತದೆ| ಆದ್ರೆ ಅದು ಕ್ಷಣಿಕ ಮಾತ್ರ| ಅದರಿಂದ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ| ಇನ್ನು ಬಿಜೆಪಿಯಲ್ಲಿ ಕೂಡ ಯಾವುದೇ ಅಸಮಾಧಾನವಿಲ್ಲ| ಎಲ್ಲರೂ ಸೇರಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ|
ಕಲಬುರಗಿ(ನ.22): ಅನರ್ಹ ಶಾಸಕರನ್ನು ಸೋಲಿಸುವುದು ಮತ್ತು ಗೆಲ್ಲಿಸುವದು ಕಾಂಗ್ರೆಸ್- ಜೆಡಿಎಸ್ ಅವರ ಕೈಯಲ್ಲಿ ಇಲ್ಲ, ಸೋಲು ಗೆಲುವನ್ನು ಜನರು ನಿರ್ಧರಿಸುತ್ತಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯ ಜನರ ತೀರ್ಮಾನ ಬಿಜೆಪಿ ಪರವಾಗಿ ಇರುತ್ತದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೆಲ ಕ್ಷೇತ್ರಗಳಲ್ಲಿ ಬಂಡಾಯ ವಿಚಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಬಂಡಾಯ ಎಲ್ಲಾ ಪಾರ್ಟಿಯಲ್ಲಿರುತ್ತದೆ. ಆದ್ರೆ ಅದು ಕ್ಷಣಿಕ ಮಾತ್ರ ಅದರಿಂದ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ. ಇನ್ನು ಬಿಜೆಪಿಯಲ್ಲಿ ಕೂಡ ಯಾವುದೇ ಅಸಮಾಧಾನವಿಲ್ಲ. ಎಲ್ಲರೂ ಸೇರಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮರಸ್ವಾಮಿ ದ್ವಂದ್ವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರ ದ್ವಂದ್ವ ಹೇಳಿಕೆಗಳ ಬಗ್ಗೆ ಅವರನ್ನೇ ಕೇಳಬೇಕು. ಇವೆಲ್ಲವುಗಳಿಗೆ ಅವರಲ್ಲೇ ಉತ್ತರ ಇರುತ್ತದೆ ಎಂದು ಹೇಳಿದ್ದಾರೆ.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.