ಮಂಡ್ಯ: JDS ಭದ್ರ ಕೋಟೆ ಭೇದಿಸಲು ಪ್ಲಾನ್ ಬದಲಿಸಿದ BJP

By Web Desk  |  First Published Nov 22, 2019, 10:30 AM IST

ಉಪಚುನಾವಣೆ ಸಮೀಪಿಸಿದ್ದು, ಜೆಡಿಎಸ್ ಭದ್ರಕೋಟೆ ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರ ಅಖಾಡ ರಂಗೇರಿದೆ. ಕೆ. ಆರ್. ಪೇಟೆಯಲ್ಲಿ ಗೆಲುವು ಸಾಧಿಸಲೇ ಬೇಕು ಎಂಬ ಜಿದ್ದಿನಲ್ಲಿರುವ ಬಿಜೆಪಿ ಚುನಾವಣೆ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತಿದೆ.


ಮಂಡ್ಯ(ನ.22): ಉಪಚುನಾವಣೆ ಸಮೀಪಿಸಿದ್ದು, ಜೆಡಿಎಸ್ ಭದ್ರಕೋಟೆ ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರ ಅಖಾಡ ರಂಗೇರಿದೆ. ಕೆ. ಆರ್. ಪೇಟೆಯಲ್ಲಿ ಗೆಲುವು ಸಾಧಿಸಲೇ ಬೇಕು ಎಂಬ ಜಿದ್ದಿನಲ್ಲಿರುವ ಬಿಜೆಪಿ ಚುನಾವಣೆ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತಿದೆ.

ಕೆ. ಆರ್. ಪೇಟೆ ಉಪಚುನಾವಣೆ ಕಣ ರಂಗೇರಿದ್ದು, ಜೆಡಿಎಸ್ ಭದ್ರ ಕೋಟೆ ಭೇದಿಸಲು ಬಿಜೆಪಿ ಪ್ಲಾನ್ ಬದಲಿಸಿಕೊಂಡಿದೆ. ಒಕ್ಕಲಿಗರ ಮತ ಸೆಳೆಯಲು ಕಮಲಪಾಳಯ ಮಾಸ್ಟರ್ ಪ್ಲಾನ್ ಮಾಡಿದ್ದು, ಕೆ.ಆರ್.ಪೇಟೆ ಚುನಾವಣೆಯ ಉಸ್ತುವಾರಿಯನ್ನು ಸಚಿವ ಮಾಧುಸ್ವಾಮಿ ಬದಲಿಗೆ ಡಿಸಿಎಂ ಅಶ್ವಥ್ ನಾರಾಯಣ ಹೆಗಲಿದೆ ವಹಿಸಿದೆ.

Tap to resize

Latest Videos

undefined

ನಾಗಮಂಗಲ ಬಳಿ ಭೀಕರ ಅಪಘಾತ: ಆರು ಸಾವು, ಒಂಬತ್ತು ಮಂದಿಗೆ ಗಾಯ!

ಅಶ್ವಥ್ ನಾರಾಯಣ್‌ಗೆ ಉಸ್ತುವಾರಿ ಕೊಟ್ಟಿರುವ ಹಿಂದೆ ಬಿಜೆಪಿ ರಣತಂತ್ರವಿದ್ದು, ಒಕ್ಕಲಿಗರ ಕೋಟೆಯಲ್ಲಿ ಜೆಡಿಎಸ್ ವಿರುದ್ಧ ಒಕ್ಕಲಿಗ ಅಸ್ತ್ರ ಪ್ರಯೋಗ ಮಾಡಲು ಅಶ್ವಥ್ ನಾರಾಯಣಗೆ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ಹೆಚ್ಚೆಚ್ಚು ಒಕ್ಕಲಿಗರ ಮತಸೆಳೆಯುವ ವಿಶ್ವಾಸದಲ್ಲಿ ಬಿಜೆಪಿ ಸಜ್ಜಾಗಿದೆ.

ಅಶ್ವಥ್ ನಾರಾಯಣ ಬಿಜೆಪಿಯಲ್ಲಿ ಪ್ರಭಾವಿ ಒಕ್ಕಲಿಗ ಸಮುದಾಯದ ನಾಯಕನಾಗಿದ್ದು, ಕೆ.ಆರ್.ಪೇಟೆ ಕ್ಷೇತ್ರದಲ್ಲಿ 90 ಸಾವಿರಕ್ಕೂ ಹೆಚ್ಚು ಒಕ್ಕಲಿಗ ಮತಗಳಿವೆ. ಒಕ್ಕಲಿಗರ ಮತ ಸೆಳೆದರೆ ಗೆಲುವು ಸುಲಭ ಎನ್ನುವ ಹಿನ್ನೆಲೆಯಲ್ಲಿ ಅಶ್ವಥ್ ನಾರಾಯಣ ಅವರಿಗೆ ಉಸ್ತುವಾರಿ ಕೊಟ್ಟು ಒಕ್ಕಲಿಗೆ ಮತ ಸೆಳೆಯುವ ಪ್ರಯತ್ನ ಮಾಡಲಾಗಿದೆ.

ಕುರುಬ ಸಮುದಾಯದ ವಿವಾದದ ಹಿನ್ನೆಲೆಯಲ್ಲಿ ಸಚಿವ ಮಾಧುಸ್ವಾಮಿಗೆ ಉಸ್ತುವಾರಿಯಿಂದ ಕೋಕ್ ಕೊಡಲಾಗಿತ್ತು. ಲಿಂಗಾಯತ ಸಮುದಾಯದ ಮಾಧುಸ್ವಾಮಿ ಬದಲಿಗೆ ಒಕಲಿಗ ಸಮುದಾಯದ ಅಶ್ವಥ್ ನಾರಾಯಣಗೆ ಉಸ್ತುವಾರಿ ವಹಿಸಲಾಗಿದೆ. ಮಾಧುಸ್ವಾಮಿಗೆ ಉಸ್ತುವಾರಿ ಕೊಟ್ಟಾಗಲೇ ಬಿಜೆಪಿಯಲ್ಲಿ ಅಪಸ್ವರ ಕೇಳಿಬಂದಿತ್ತು. ಇಬ್ಬರು ಲಿಂಗಾಯತ ಸಮುದಾಯದ ನಾಯಕರಿಗೆ ಉಸ್ತುವಾರಿ ಕೊಟ್ಟಿದ್ದಕ್ಕೆ ಸ್ಥಳೀಯ ಬಿಜೆಪಿಗರಲ್ಲೇ ಅಸಮಾಧಾನವಿತ್ತು.

ನಾರಾಯಣಗೌಡ ಭಂಡತನದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದ ಮಾಜಿ ಸಿಎಂ

ಲಿಂಗಾಯತ ಸಮುದಾಯದ ಸಿಎಂ ಪುತ್ರ ವಿಜೇಂದ್ರಗೆ ಉಸ್ತುವಾರಿ ಕೊಟ್ಟ ಮೇಲೆ ಮಾಧುಸ್ವಾಮಿ ಅವಶ್ಯಕತೆ ಇಲ್ಲ ಎಂಬ ಮಾತು ಕೇಳಿಬಂದಿತ್ತು. ಈಗ ಮಾಧುಸ್ವಾಮಿ ವಿವಾದಕ್ಕೆ ಸಿಲುಕಿದ ಹಿನ್ನಲೆ, ಕೆ. ಆರ್. ಪೇಟೆ ಉಸ್ತುವಾರಿ ಬದಲಾವಣೆ ಮಾಡಲಾಗಿದೆ. ಮಾಧುಸ್ವಾಮಿ ವಿವಾದದಿಂದ ಆಗುತ್ತಿದ್ದ ಡ್ಯಾಮೇಜ್ ಕಂಟ್ರೋಲ್ ಜೊತೆಗೆ ಒಕ್ಕಲಿಗರ ಮತಬೇಟೆಗೆ ಅಶ್ವಥ್ ನಾರಾಯಣ್‌ಗೆ ಉಸ್ತುವಾರಿ ವಹಿಸಲಾಗಿದೆ.

ನಾರಾಯಣ ಗೌಡ ಜೊತೆ ಡಿಸಿಎಂ ಪ್ರಚಾರ:

ಕೆ. ಆರ್. ಪೇಟೆಯಲ್ಲಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಜೊತೆ ಉಪ‌ ಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ್ ಪ್ರಚಾರ ಮಾಡುತ್ತಿದ್ದಾರೆ. ಕೆ. ಆರ್. ಪೇಟೆ ತಾಲೂಕಿನ ಕಿಕ್ಕೇರಿ, ಬೂಕನಕೆರೆ ಹೋಬಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಕೆ. ಬಿ. ಚಂದ್ರಶೇಖರ್ ಶೀಳನೆರೆ ಹೋಬಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಕೆಬಿಸಿಗೆ ಸ್ಥಳೀಯ ಮುಖಂಡರು ಸಾಥ್ ಕೊಟ್ಟಿದ್ದು, ಜೆಡಿಎಸ್ ಅಭ್ಯರ್ಥಿ ಬಿ. ಎಲ್. ದೇವರಾಜು ಅಕ್ಕಿ ಹೆಬ್ಬಾಳು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ದೇವರಾಜುಗೆ ಮಾಜಿ ಸಚಿವ ಹೆಚ್. ಡಿ. ರೇವಣ್ಣ ಸಾಥ್ ನೀಡುತ್ತಿದ್ದಾರೆ.

ಕೆ. ಆರ್. ಪೇಟೆ: ಜಾತಿ ರಾಜಕಾರಣಕ್ಕೆ ಮುಂದಾದ್ರಾ ಅಭ್ಯರ್ಥಿಗಳು..?

click me!