'ವಿಶ್ವದಲ್ಲಿ ಭಾರತದ ಗೌರವ ಹೆಚ್ಚಲು ಮೋದಿ ಕಾರಣ'

By Girish GoudarFirst Published May 19, 2022, 7:43 AM IST
Highlights

*  ಮೋದಿ ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ
*  ದೇಶದ ಜನರ ಆರೋಗ್ಯ ಕಾಪಾಡಲು ಶಕ್ತಿಮೀರಿ ಶ್ರಮಿಸಿದ ಮೋದಿ
*  ಇಡೀ ಆರೋಗ್ಯ ವ್ಯವಸ್ಥೆಯನ್ನು ಸುಧಾರಣೆ ಮಾಡಿದ ಪ್ರಧಾನಿ

ಕೊಪ್ಪಳ(ಮೇ.19):  ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಅವಧಿಯ ಆಡಳಿತವನ್ನು ಇಡೀ ದೇಶವೇ ಬೆಂಬಲಿಸಿ ಮತ್ತೊಮ್ಮೆ ಆಶೀರ್ವಾದ ಮಾಡಿದೆ. ಇದು ಅಭಿವೃದ್ಧಿಗೆ ನೀಡಿರುವ ಮನ್ನಣೆಗೆ ಸಾಕ್ಷಿ ಎಂದು ಸಚಿವ ಹಾಲಪ್ಪ ಆಚಾರ್‌ ಎಂದರು.

ಬುಧವಾರ ನಗರದ ಶಿವಶಾಂತ ಮಂಗಲ ಭವನದಲ್ಲಿ ಬಿಜೆಪಿ ಜಿಲ್ಲಾ ಪ್ರಕೋಷ್ಠಕಗಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿನ ವಿದ್ಯಮಾನ ನೋಡಿ 2014ರಲ್ಲಿ ಮೋದಿ ಅವರಿಗೆ ಮತ ನೀಡಿ ಅಭೂತಪೂರ್ವ ಬೆಂಬಲ ಕೊಟ್ಟರು. 2019ರಲ್ಲೂ ಅವರಿಗೆ ಅಭಿವೃದ್ಧಿ ಪರ ಕಾಳಜಿ ತೋರಿ ಮತ ನೀಡಿದರು. ಅದಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಗೌರವವನ್ನು ವಿಶ್ವದಲ್ಲಿಯೇ ಹೆಚ್ಚಿಸಿದರು ಎಂದರು. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಕೋವಿಡ್‌ ಸಂಕಷ್ಟದ ಸಮಯದಲ್ಲಿಯೂ ಅವರು ದೇಶದ ಜನರ ಆರೋಗ್ಯ ಕಾಪಾಡಲು ಶಕ್ತಿಮೀರಿ ಶ್ರಮಿಸಿದರು. ಇಡೀ ಆರೋಗ್ಯ ವ್ಯವಸ್ಥೆಯನ್ನು ಸುಧಾರಣೆ ಮಾಡಿದರು. ಲಸಿಕೆಯನ್ನು ಕೇವಲ ದೇಶದ ಜನರಿಗೆ ಅಲ್ಲ, ಜಗತ್ತಿನ ಬಹುತೇಕ ದೇಶಗಳಿಗೆ ಪೂರೈಕೆ ಮಾಡಿದ ಹಿರಿಮೆ ಅವರದು ಎಂದರು.

Tungabhadra Dam ಬೇಸಿಗೆಯಲ್ಲೂ ಭತ್ತದೆ ವಿಶೇಷತೆ ಉಳಿಸಿಕೊಂಡ ತುಂಗಭದ್ರಾ

ಕೇಂದ್ರದಲ್ಲಿ ಮೋದಿ ಅವರು ಬಡವರ ಪರ ಯೋಜನೆ ಜಾರಿಗೆ ತಂದು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಸರ್ಕಾರ ಮಾಡಿದ ಯೋಜನೆಯಿಂದಾಗಿ ಜನರು ಬೀದಿಗೆ ಬೀಳುವ ಪರಿಸ್ಥಿತಿ ಇತ್ತು. ಕಿಸಾನ್‌ ಸಮ್ಮಾನ್‌ ಮೂಲಕ ರೈತರ ಖಾತೆಗೆ ನೇರ ಹಣ ಹಾಕುವ ಯೋಜನೆ ಜಾರಿ ಮಾಡಿದೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಾರಿ ಮಾಡುತ್ತಿದ್ದಾರೆ. ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅಭಿವೃದ್ಧಿಗೆ ವೇಗ ನೀಡಿದ್ದಾರೆ ಎಂದರು.

ಪ್ರಕೋಷ್ಠಗಳ ಸಂಚಾಲಕ ಭಾನುಪ್ರಕಾಶ ಮಾತನಾಡಿ, ದೇಶದಲ್ಲಿ ಎರಡು ರೀತಿ ರಾಜಕೀಯ ಇದೆ. ಚುನಾವಣೆಯಲ್ಲಿ ಗೆಲ್ಲಲು ಮಾಡುವ ರಾಜಕೀಯ ಮತ್ತು ಪರಿವರ್ತನೆಗಾಗಿ ಮಾಡುವ ರಾಜಕೀಯ. ಬಿಜೆಪಿ ಯಾವತ್ತೂ ಚುನಾವಣೆ ರಾಜಕೀಯ ಮಾಡುವುದಿಲ್ಲ. ಅದು ದೇಶದಲ್ಲಿನ ಪರಿವರ್ತನೆಗಾಗಿ ರಾಜಕೀಯ ಮಾಡುತ್ತಿದೆ ಎಂದರು. ಬಿಜೆಪಿ ಅಧಿಕಾರಕ್ಕೆ ಬಡಿದಾಡುವ ಪಕ್ಷ ಅಲ್ಲ. ದೇಶದ ಹಿತ ಕಾಪಾಡುವ ಪಕ್ಷವಾಗಿದೆ ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಬಿಜೆಪಿಗೆ ಕಾರ್ಯಕರ್ತರೇ ಜೀವಾಳ. ಇಲ್ಲಿ ಬಿಜೆಪಿಯ ಗುಲಾಬಿ ಹೂವುಗಳಿವೆ. ಪ್ರಕೋಷ್ಠಗಳ ಮೂಲಕ ಪಕ್ಷ ಕಟ್ಟುವ ಕೆಲಸ ಮಾಡಿದೆ. ಹಲವು ನಾಯಕರ ತ್ಯಾಗದ ಪ್ರತೀಕ ಪಕ್ಷ ಬೆಳೆದು ನಿಂತಿದೆ ಎಂದರು.

ಭಾರತದ ಕೀರ್ತಿ ವಿಶ್ವಕ್ಕೆ ಹಬ್ಬಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಹೊಸ ವಿವಿ, ಸಿಂಗಟಾಲೂರು ಏತ ನೀರಾವರಿ, ಅಂಜನಾದ್ರಿ, ನವಲಿ ಡ್ಯಾಂ ಸೇರಿ ಹಲವು ಅಭಿವೃದ್ಧಿ ಯೋಜನೆಗೆ ಸಹಕಾರ ನೀಡಿದ್ದಾರೆ. ಕೇವಲ ಭಾವನಾತ್ಮಕವಾಗಿ ದೇಶ ಕಟ್ಟಲು ಆಗಲ್ಲ. ಬದಲಿಗೆ ಅಭಿವೃದ್ಧಿ ಮೂಲಕ ಕಟ್ಡುವ ಕೆಲಸ ಮಾಡಬೇಕು ಎಂದು ಅಭಿವೃದ್ಧಿ ಮಾಡುತ್ತಿದ್ದಾರೆ ಎಂದರು.

ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ…, ಸಿ.ವಿ. ಚಂದ್ರಶೇಖರ, ಚನ್ನಮಲ್ಲಿಕಾರ್ಜನ, ಹೇಮಲತಾ ನಾಯಕ, ಸಿದ್ದೇಶ ಯಾದವ, ಚಂದ್ರಶೇಖರ ಪಾಟೀಲ್‌ ಹಲಗೇರಿ, ರವಿಂದ್ರ ಪೈ, ಮಾಯಾ ಪ್ರದೀಪ, ತಿಪ್ಪೇರುದ್ರಸ್ವಾಮಿ, ಈಶಪ್ಪ ಹಿರೇಮನಿ, ಪ್ರಭು ಕಪಗ ಜಿ. ವೀರಪ್ಪ ಉಪಸ್ಥಿತರಿದ್ದರು.

ಸಿಎಂ ಆಗುವ ಆಸೆ ಹೊಂದಿಲ್ಲ: ಆಚಾರ್‌

ನಾನು ಸಿಎಂ ಆಗುತ್ತೇನೆ ಎಂದು ಹೇಳಿಲ್ಲ. ಅದು ಮಾತನಾಡುವ ಭರಾಟೆಯಲ್ಲಿ ಬಾಯ್ತಪ್ಪಿ ಬಂದಿರುವ ಮಾತಾಗಿದೆ. ನಾನು ಸಚಿವನಾಗಬೇಕು ಎನ್ನುವ ಆಸೆಯನ್ನೇ ಹೊಂದಿಲ್ಲದವನು. ಇನ್ನು ಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಲು ಸಾಧ್ಯವೇ ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದರು.

Koppalla ಶಾಲೆ ಆರಂಭದ ದಿನ ಡೊಳ್ಳು ಬಾರಿಸಿ ಮಕ್ಕಳನ್ನು ಸ್ವಾಗತಿಸಿದ ಬಿಇಓ

ರಾಜೂರು ಕಾರ್ಯಕ್ರಮದಲ್ಲಿ ಮಾತನಾಡುವ ಭರಾಟೆಯಲ್ಲಿ ಬಾಯಿಂದ ಮುಖ್ಯಮಂತ್ರಿ ಎನ್ನುವ ಮಾತು ಬಂದಿದೆ. ಇದು ಮಾತಿನ ಭರಾಟೆಯಲ್ಲಿ ಬಂದಿದೆ ಹೊರತು ಯಾವುದೇ ಕನಸು ಇಲ್ಲ ಎಂದರು. ನಾನು ಯಾವುದೇ ಆಸೆ ವ್ಯಕ್ತಪಡಿಲ್ಲ. ಪಕ್ಷ ಏನು ಜವಾಬ್ದಾರಿ ನೀಡುತ್ತದೆ ಅದನ್ನಷ್ಟೇ ಪಾಲಿಸುತ್ತೇನೆ ಎಂದರು.

ಸ್ವಪಕ್ಷೀಯರಿಗೆ ಕರಡಿ ಬುದ್ಧಿವಾದ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಂತೆ ನಾವು ಕಾರ್ಯ ನಿರ್ವಹಿಸಬೇಕಾಗಿದೆ. ವೇದಿಕೆಯ ಮೇಲಿದ್ದವರು ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಅವರು ಮತ್ತೆ ಸ್ವಪಕ್ಷದವರಿಗೆ ಬುದ್ಧಿವಾದ ಹೇಳಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವುಗಳನ್ನು ಅನುಷ್ಠಾನವನ್ನು ವೇದಿಕೆಯ ಮೇಲಿದ್ದವರು ಮಾಡಬೇಕು ಎಂದು ಕಿವಿಮಾತು ಹೇಳಿದರು.
 

click me!