* ಕ್ರೈಸ್ತ ದಂಪತಿಯನ್ನು ಬಂಧಿಸಿದ ಪೊಲೀಸರು
* ಬಲವಂತದ ಮತಾಂತರಕ್ಕೆ ಯತ್ನ
* ದಂಪತಿ ವಿರುದ್ಧ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯ
ಮಡಿಕೇರಿ(ಮೇ.19): ಕೊಡಗಿನಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದ ಕೇರಳ ಮೂಲದ ಮಾನಂದವಾಡಿಯ ಕುರಿಯಚ್ಚನ್-ಸಲಿನಾಮ ಕ್ರೈಸ್ತ ದಂಪತಿಯನ್ನು ಪೊನ್ನಂಪೇಟೆ ತಾಲೂಕಿನ ಮಂಚಳ್ಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮಂಚಳ್ಳಿ ಗ್ರಾಮದ ಮೂರು ಎಕರೆ ಪೈಸಾರಿ ಕಾಲೋನಿಯ ಪಣಿ ಎರವರ ಮುತ್ತ ಎಂಬವರ ಮನೆಗೆ ಬಂದ ಕೇರಳದ ಮಾನಂದವಾಡಿಯ ಕುರಿಯಚ್ಚನ್ ಹಾಗೂ ಆತನ ಪತ್ನಿ ಬಲವಂತದ ಮತಾಂತರಕ್ಕೆ ಯತ್ನಿಸಿರುವುದಲ್ಲದೆ ಆಮಿಷವೊಡ್ಡಿರುವುದಾಗಿ ಆರೋಪಿಸಲಾಗಿದೆ. ಕುಟ್ಟಪೊಲೀಸ್ ಠಾಣೆಗೆ ದೂರು ನೀಡಿರುವ ಮುತ್ತ ತಮ್ಮನ್ನು ಮತಾಂತರಗೊಳಿಸಲು ಪ್ರಯತ್ನಿಸಿದರು ಎಂದು ತಿಳಿಸಿದ್ದಾರೆ.
‘ಬಂದೂಕು ಹಿಡಿಯೋದು ನಮ್ಮ ಹಕ್ಕು, ಕೇಳೋಕ್ಕೆ ಸಿದ್ದು ಯಾರು?’
ಕ್ರೈಸ್ತ ದಂಪತಿ ಮತಾಂತರ ಕಾರ್ಯದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆ ಸ್ಥಳಕ್ಕೆ ಬಂದ ಬಿಜೆಪಿ ಹಾಗೂ ಹಿಂದೂ ಸಂಘನೆಗಳ ಪ್ರಮುಖರು ನೂತನ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.