ಇಲ್ಲಿಂದ ಎತ್ತಿ ಹೊರಗೆ ಹಾಕ್ತೀನಿ : ಸಚಿವ ಎಚ್‌.ನಾಗೇಶ್‌ ವಾರ್ನಿಂಗ್

By Kannadaprabha NewsFirst Published Sep 17, 2020, 12:17 PM IST
Highlights

ಅಬಕಾರಿ ಸಚಿವ ಎಚ್ ನಾಗೇಶ್ ವಾರ್ನಿಂಗ್ ನೀಡಿದ್ದಾರೆ. ಹಿಂಗೆಲ್ಲಾ ಮಾಡಿದ್ರೆ ಎತ್ತಿ ಹೊರಗೆ ಹಾಕುವುದಾಗಿ ಹೇಳಿದ್ದಾರೆ.

ಕೋಲಾರ (ಸೆ.17): ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಅಧಿಕಾರಿಗಳನ್ನು ಜಿಲ್ಲೆಯಿಂದ ಎತ್ತಿ ಹೊರ ಹಾಕಲಾಗುವುದು, ಅವರಿಗೆ ನಮ್ಮಲ್ಲಿ ಜಾಗವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ನಾಗೇಶ್‌ ತಿಳಿಸಿದರು.

ಅವರು ಕೋಲಾರದಲ್ಲಿ ತಮ್ಮ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ ಕಳೆದ ಕೆಲವು ದಿವಸಗಳಿಂದ ಆಡಳಿತದಲ್ಲಿ ನಿರ್ಲಕ್ಷ್ಯ ತೋರಿದ ಮೂವರು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ತೀರ್ಮಾನಿಸಲಾಗಿದೆ ಎಂದರು ತಿಳಿಸಿದರು.

ತಹಸೀಲ್ದಾರ್‌ ಎತ್ತಂಗಡಿಗೆ ಶಿಫಾರಸು

ಇತ್ತೀಚೆಗೆ ಕೋಲಾರ ತಾಲೂಕಿನ ಎಸ್‌.ಅಗ್ರಹಾರ ಕೆರೆಯ ಬಾಗೀನ ಅರ್ಪಿಸುವ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವರಾದ ನನಗೆ ಅಹ್ವಾನ ನೀಡದ ಕಾರಣ ಶಿಷ್ಟಾಚಾರ ಉಲ್ಲಂಘನೆ ಆರೋಪದ ಮೇಲೆ ಅವರ ಎತ್ತಂಗಡಿಗೆ ಶಿಫಾರಸು ಮಾಡಲಾಗಿದೆ. ಅವರು ಇಲ್ಲಿಂದ ಜಾಗ ಖಾಲಿ ಮಾಡಲಿದ್ದಾರೆ ಎಂದು ತಿಳಿಸಿದರು.

ಉದ್ಧಟತನ ತೋರಿದರೆ ಅಮಾನತು : ಸಚಿವ ನಾರಾಯಣ ಗೌಡ ವಾರ್ನಿಂಗ್ ...

ತಹಸೀಲ್ದಾರ್‌ ಶೋಭಿತ ಅಂದಿನ ಕಾರ್ಯಕ್ರಮಕ್ಕೆ ಹೋಗಿದ್ದು ತಪ್ಪು, ಆದರೆ ಅವರು ತಮಗೇನೂ ಗೊತ್ತಿಲ್ಲ ಎನ್ನುವ ರೀತಿಯಲ್ಲಿ ಮಗುವಿನಂತೆ ಮಾತಾಡುತ್ತಾರೆ ಅವರ ಈ ಬೇಜವಾಬ್ದಾರಿತನಕ್ಕೆ ಹಕ್ಕು ಬಾಧ್ಯತಾ ಸಮಿತಿಗೆ ಮತ್ತು ಕಾನೂನು ಮಂತ್ರಿ ಮಾಧುಸ್ವಾಮಿ ಅವರಿಗೂ ದೂರು ನೀಡಲಾಗಿತ್ತು ಅದರಂತೆ ತಹಶೀಲ್ದಾರ್‌ ಅವರ ವರ್ಗಾವಣೆ ಸದ್ಯದಲ್ಲೇ ಆಗಲಿದೆ ಎಂದು ತಿಳಿಸಿದರು.

ಡೀಸಿಗೂ ಆಹ್ವಾನ ಇರಲಿಲ್ಲ

ಅಂದಿನ ಕಾರ್ಯಕ್ರಮ ನಡೆಸುವ ಬಗ್ಗೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗು ಜಿ.ಪಂ. ಅಧ್ಯಕ್ಷರು ಹಾಗು ಕೆಲವು ಎಂಎಲ್‌ಸಿಗಳವರಿಗೂ ಆಹ್ವಾನ ನೀಡಿಲ್ಲ. ಅಧಿಕಾರಿಗಳ ಈ ವರ್ತನೆ ನನಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ರಾಜೀನಾಮೆಗೆ ಆಗ್ರಹ

ಬಾಗೀನ ಅರ್ಪಿಸುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣ ಹಾಗು ಎಂಜಿನೀಯರ್‌ ಸುರೇಶ್‌ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಅವರನ್ನೂ ಜಿಲ್ಲೆಯಿಂದ ಹೊರಗೆ ಕಳಿಸಲಾಗುವುದು. ಇಂತಹ ಬೇಜಾವಾಬ್ದಾರಿ ಅಧಿಕಾರಿಗಳು ಬೇಕಾಗಿಲ್ಲ ಅಂದರು.

ಇದು ದುರಾಂಕಾರದ ಪರಮಾವಧಿ, ಜಿಲ್ಲಾ ಮಂತ್ರಿಯಾಗಿರುವ ನನಗೂ ಒಂದು ಮಾತು ಹೇಳದೆ ಅವರು ಬಾಗೀನ ಅರ್ಪಿಸುವ ಕಾರ್ಯಕ್ರಮ ನಡೆಸಿದ್ದಾರೆ.ಅದಕ್ಕೆ ಅವರಿಗೆ ತಕ್ಕ ಶಾಸ್ತಿ ಆಗಲಿದೆ ಎಂದರು.

ನಗರಸಭೆಯ ಮೇಲೂ ದೂರುಗಳಿವೆ

ಕೋಲಾರ ನಗರಸಭೆ ಆಯುಕ್ತ ಶ್ರೀಕಾಂತ್‌ ಅವರ ಆಡಳಿತ ವೈಖರಿಯೂ ಸರಿಯಿಲ್ಲ, ಅವರ ಮೇಲೂ ಸಾಕಷ್ಟುದೂರುಗಳಿವೆ,ಅವರೂ ಯರ್ರಾಬಿರಿ ಖಾತೆಗಳನ್ನು ಮಾಡಿರುವುದು ನನ್ನ ಗಮನಕ್ಕೆ ಬಂದಿದೆ, ನಗರಸಭೆಯಲ್ಲಿ ಆಗಿರುವ ಲೋಪಗಳನ್ನು ತನಿಖೆ ನಡೆಸಲಾಗುವುದು ಸದ್ಯದಲ್ಲಿಯೇ ಅದಕ್ಕೊಂದು ಸಮಿತಿ ರಚಿಸಲಾಗುವುದು ಎಂದ ಸಚಿವರು ಆಯುಕ್ತ ಶ್ರೀಕಾಂತ್‌ಗೆ ವರ್ಗಾವಣೆ ಆಗಿದೆ. ಆದರೂ ಇಲ್ಲಿಯೇ ಇದ್ದಾರೆ. ಅದನ್ನೂ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ನಗರದ ಎಂಜಿ ರಸ್ತೆಗೆ ಹೊಂದಿಕೊಂಡಂತಿರುವ ಸುಮಾರು 80 ಕೋಟಿ ರೂ ಬೆಲೆ ಬಾಳುವ ಕನ್ಸರ್‌ವೆನ್ಸಿಯನ್ನು ಅಧಿಕಾರಿಗಳು ಖಾತೆ ಮಾಡಿಕೊಟ್ಟಿದ್ದಾರೆ ಎಂದು ಸಾರ್ವಜನಿಕರೊಬ್ಬರು ದೂರು ನೀಡಿದ್ದಾರೆ ಅದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ

ಇನ್ನು ಮೇಲೆ ಇಂತಹ ಅಚಾತುರ್ಯಗಳು ಆಗದಂತೆ ಎಚ್ಚರ ವಹಿಸಲು ಶೀಘ್ರದಲ್ಲಿಯೇ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗುವುದು. ಎಲ್ಲ ಇಲಾಖೆ ಅಧಿಕಾರಿಗಳಿಗೂ ಸೂಚನೆ ನೀಡಲಾಗುವುದು. ಜಿಲ್ಲೆಯ ಆಡಳಿತವನ್ನು ಸರಿ ದಾರಿಗೆ ತರುವ ನಿಟ್ಟಿನಲ್ಲಿ ಚಾಟಿ ಬೀಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಖಾಸಗಿ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆಯ ಉಪನಿರ್ದೇಶಕರಾದ ರವಿಚಂದ್ರ ಅವರನ್ನು ನೇಮಿಸಲಾಗುವುದು ಕೈಗಾರಿಕೆಗಳಲ್ಲಿ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲದೆ ಇರುವುದರಿಂದ ಇಲಾಖೆಯ ಮೂಲಕ ಅರ್ಜಿಗಳನ್ನು ಸಲ್ಲಿಸಲು ಒಂದು ಕೌಂಟರ್‌ ತೆರೆಯಲಾಗುವುದು ಅದನ್ನು ಸಧ್ಯದಲ್ಲೇ ಏರ್ಪಾಡು ಮಾಡಲಾಗುವುದು ಎಂದು ಸಚಿವ ನಾಗೇಶ್‌ ಭರವಸೆ ನೀಡಿದರು.

click me!