ಬಳ್ಳಾರಿ ಅಭಿವೃದ್ಧಿಗೆ ಹೈಟೆಕ್ ಸ್ಪರ್ಶ ನೀಡಲು ಮುಂದಾದ ಸಚಿವ ರಾಮುಲು‌

By Girish GoudarFirst Published Apr 28, 2022, 11:59 AM IST
Highlights

*  ಜಿಲ್ಲಾ ಖನಿಜ ಪ್ರತಿಷ್ಠಾನ ಗೌರ್ನಿಂಗ್ ಸಭೆಯಲ್ಲಿ ಸಂಸದರು, ಶಾಸಕರು ಸಾಥ್
*  ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಕೆಕೆಆರ್‍ಡಿಬಿಯಿಂದ 100 ಕೋಟಿ ಪ್ರಸ್ತಾವನೆ ಸಲ್ಲಿಕೆ
*  ದಶಕದ ಹಿಂದಿನ ಕನಸು ಈಗಲಾದ್ರೂ ನನಸಾಗ್ತದೆಯೇ..?

ಬಳ್ಳಾರಿ(ಏ.28):  ಇನ್ನೇನು ಸಾರ್ವತ್ರಿಕ ಚುನಾವಣೆಗೆ(General Election) ಒಂದು ವರ್ಷ ಬಾಕಿ ಇರುವಂತೆ ಬಳ್ಳಾರಿ ಅಭಿವೃದ್ಧಿಗೆ ಸಚಿವ‌ ಶ್ರೀರಾಮುಲು‌( B Sriramulu) ಮುಂದಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನೆನೆಗುದಿಗೆ ಹಿದ್ದಿರೋ ಏರ್ಪೋರ್ಟ್ ಕಾಮಗಾರಿ ಶೀಘ್ರದಲ್ಲೇ ಮುಗಿಸಲು ಕಾರ್ಯತಂತ್ರ ರೂಪಿಸೋ‌‌ ಮೂಲಕ ಬಳ್ಳಾರಿ ಅಭಿವೃದ್ಧಿ ಪಣ ತೊಟ್ಟವರಂತೆ ಕೆಲಸ ಮಾಡ್ತಿದ್ದಾರೆ.

ಬಳ್ಳಾರಿ ವಿಮಾನ ನಿಲ್ದಾಣ(Ballari Airport) ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ(Kalyana Karnataka) ಪ್ರದೇಶಾಭಿವೃದ್ಧಿ ಮಂಡಳಿಯ ಮೆಗಾ ಪ್ರೋಜೆಕ್ಟ್ ಅಡಿ 100 ಕೋಟಿ ರೂ.ಗಳನ್ನು ಒದಗಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. 

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಗೌರ್ನಿಂಗ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ‌ವಿಮಾನ ನಿಲ್ದಾಣದ ಪ್ರಸ್ತಾಪ ಮಾಡ್ತಿದ್ದಂತೆ ಸಭೆಯಲ್ಲಿ ಹಾಜರಿದ್ದ ಶಾಸಕ ಸೋಮಶೇಖರ್ ರೆಡ್ಡಿ, ನಾಗೇಂದ್ರ, ಸೋಮಲಿಂಗಪ್ಪ, ತುಕಾರಾಂ ಸಂಸದರಾದ ದೇವೇಂದ್ರಪ್ಪ, ಸಂಗಣ್ಣ ಕರಡಿ, ಡಾ.ಸೈಯದ್ ನಾಸೀರ್ ಹುಸೇನ್ ಸೇರಿದಂತೆ ಎಲ್ಲ ಜನಪ್ರತಿ ನಿಧಿಗಳು ದನಿಗೂಡಿಸಿದರು.

ದಲಿತ ಸಿಎಂ ಮಾಡುತ್ತೇವೆಂದು ತಮ್ಮ ಮಕ್ಕಳ ಮೇಲೆ ಸಿದ್ದು ಪ್ರಮಾಣ ಮಾಡಲಿ: ಶ್ರೀರಾಮುಲು

ದಶಕದ ಹಿಂದಿನ ಕನಸು ಈಗಲಾದ್ರೂ ನನಸಾಗ್ತದೆಯೇ..?

ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಾಣದ ಪ್ರಕ್ರಿಯೆ 2008ರಲ್ಲಿ ಪ್ರಾರಂಭಿಸಲಾಗಿತ್ತು. ಬಳ್ಳಾರಿ ವಿಮಾನ ನಿಲ್ದಾಣದ ಜೊತೆಗೆ ಕೆಲಸ ಆರಂಭಿಸಿದ್ದ ಕಲಬುರಗಿ, ಶಿವಮೊಗ್ಗ ವಿಮಾನ ನಿಲ್ದಾಣಗಳು(Shivamogga Airport) ಈಗಾಗಲೇ ಕಾರ್ಯಾರಂಭ ಮಾಡಿವೆ ಮತ್ತು ರಾಯಚೂರು ವಿಮಾನ ನಿಲ್ದಾಣ(Raichur Airport) ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಆದರೇ ಬಳ್ಳಾರಿ ಆರಂಭದಲ್ಲಿ ಎಲ್ಲಿತ್ತೋ ಇನ್ನೂ ಅಲ್ಲಿಯೇ ಇದೆ. ಇನ್ನೂ ಸ್ಟೀಲ್ ಹಬ್ ಆಗಿರೋ ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ಇರದೇ ಇರವುದರಿಂದ ಹೂಡಿಕೆದಾರರು ಬರುತ್ತಿಲ್ಲ ಎನ್ನುವ ವಿಷಯ ಕೂಡ ಸಭೆಯಲ್ಲಿ ಚರ್ಚೆಯಾಯ್ತು.

ವಿಮಾನ ನಿಲ್ದಾಣ ಕಂಪ್ಲೀಟ್ ಅಗಬೇಕಾದ್ರೇ ಇನ್ನೂ ಕೋಟಿ ಕೋಟಿ ಹಣ ಬೇಕು

ಇನ್ನೂ ವಿಮಾನ ನಿಲ್ದಾಣ ನಿರ್ಮಿಸಲು ಕನಿಷ್ಠ 220ರಿಂದ 250 ಕೋಟಿ ರೂ.ಗಳ ಅಗತ್ಯವಿದ್ದು, ಕೆಕೆಆರ್‍ಡಿಬಿಯ ಮೆಗಾ ಪ್ರೊಜೆಕ್ಟ್ ಅನುದಾನದ ಅಡಿ 100 ಕೋಟಿಗಳನ್ನು ಒದಗಿಸಿದ್ದಲ್ಲಿ ಉಳಿದ ಅನುದಾನವನ್ನು ಜಿಲ್ಲಾ ಖನಿಜ ನಿಧಿ ಮತ್ತು ಕೆಎಂಇಆರ್‍ಸಿಯ ಅನುದಾನ ಭರಿಸಿಕೊಂಡು ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸೋ ಬಗ್ಗೆ ಶ್ರೀರಾಮುಲು‌ ಭರವಸೆ ನೀಡಿದ್ದಾರೆ. ಈ ಕುರಿತು ಸರ್ಕಾರ ಪ್ರಸ್ತಾವನೆ ಸಲ್ಲಿಸಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯ್ತು.
 

click me!