ಸಚಿವ ಡಾ.ಸುಧಾಕರ್‌ಗೆ ಕ್ಷೇತ್ರದಲ್ಲಿ ಎದುರಾಳಿಯೆ ಇಲ್ಲ

By Kannadaprabha News  |  First Published Jan 12, 2023, 6:06 AM IST

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ವಿರುದ್ದ ಸ್ಪರ್ಧಿಸಲು ಎದುರಾಳಿಯೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಕ್ಷೇತ್ರದ ವಿರೋಧ ಪಕ್ಷಗಳ ಕಾಲಳೆದರು.


 ಚಿಕ್ಕಬಳ್ಳಾಪುರ :  ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ವಿರುದ್ದ ಸ್ಪರ್ಧಿಸಲು ಎದುರಾಳಿಯೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಕ್ಷೇತ್ರದ ವಿರೋಧ ಪಕ್ಷಗಳ ಕಾಲಳೆದರು.

ನಗರದ ಸರ್‌ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಚಿಕ್ಕಬಳ್ಳಾಪುರ ಉತ್ಸವದ ವೇದಿಕೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಿಕ್ಕಬಳ್ಳಾಪುರದ ಅದ್ದೂರಿ ಉತ್ಸವ ನೋಡಿ ಎಲ್ಲರೂ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತಾಗಿದೆ ಎಂದರು.

Tap to resize

Latest Videos

ಕೋವಿಡ್‌ ಎದುರಿಸಿದರು:

ಉತ್ಸವದ ಮೂಲಕ ಚಿಕ್ಕಬಳ್ಳಾಪುರಕ್ಕೆ ಹೊಸ ರೂಪ ನೀಡಲು ಸಚಿವ ಮುಂದಾಗಿದ್ದಾರೆಂದ ಅವರು, 2019, 2020. 2021 ರಲ್ಲಿ ರಾಜ್ಯವನ್ನು ಬಾಧಿಸಿ ಕೋವಿಡ್‌ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಿ ಲಕ್ಷಾಂತರ ಜನರ ಜೀವ ಉಳಿಸಿದ ಸುಧಾಕರ್‌ಗೆ ರಾಜ್ಯದಲ್ಲಿ ಉತ್ತಮ ಭವಿಷ್ಯ ಇದೆ. ಅವರ ರಾಜ್ಯಕ್ಕೆ, ದೇಶಕ್ಕೆ ಆಸ್ತಿ ಆಗಬೇಕು, ಅವರನ್ನು ಕ್ಷೇತ್ರದ ಜನತೆ ಕೈಹಿಡಿಯಬೇಕೆಂದು ಮನವಿ ಮಾಡಿದ ಬಿ.ಸಿ.ಪಾಟೀಲ್‌, ಸುಧಾಕರ್‌ ಕಲಾ ರಸಿಕ, ಕಲಾನಿಕೇತನ, ಕಲಾ ಚತುರ ಎಂದು ಬಣ್ಣಿಸಿದರು. ಉತ್ತಮವಾಗಿ ಕೆಲಸ ಮಾಡುವರಿಗೆ ಕ್ಷೇತ್ರದ ಜನತೆ ಅರ್ಶೀವಾದ ನೀಡಬೇಕೆಂದರು. ಅವರು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾಗಿರುವುದು ನಿಮ್ಮ ಭಾಗ್ಯ, ಸುಧಾಕರ್‌ಗೆ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಭವಿಷ್ಯ ಇದೆ ಎಂದರು.

10 ಕೋಟಿ ವೆಚ್ಚದಲ್ಲಿ ಕೋಲ್‌ ಸ್ಟೋರೆಜ್‌

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳೆಯುವ ತೋಟಗಾರಿಕಾ ಬೆಳೆಗಳಿಗೆ ಸೂಕ್ತ ಸಂಸ್ಕರಣ ಕೇಂದ್ರ ಅಗತ್ಯವಾಗಿ ಬೇಕೆಂದು ಸುಮಾರು 10 ಕೋಟಿ ರು, ವೆಚ್ಚದಲ್ಲಿ ಕೃಷಿ ಇಲಾಖೆಯಿಂದ ಕೋಲ್ಡ್‌ ಸ್ಟೋರೆಜ್‌ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಿದ್ದು ಕಾಮಗಾರಿ ಭರದಿಂದ ಸಾಗಿದೆ ಎಂದರು. ರೈತರ ಬಗ್ಗೆ ಸುಧಾಕರ್‌ಗೆ ಅಪಾರ ಪ್ರೀತಿ, ಕಾಳಜಿ ಇದೆ. ಜಿಲ್ಲೆಯಲ್ಲಿ ರೈತರೊಂದಿಗೆ ಒಂದು ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನನಗೆ ಅಭೂತಪೂರ್ವ ಸ್ವಾಗತ ನೀಡಿದ್ದನ್ನು ಸ್ಮರಿಸಿದ ಸಚಿವ ಬಿ.ಸಿ.ಪಾಟೀಲ್‌, ಜಿಲ್ಲೆಯಾಗಿ 15 ವರ್ಷ ಸಂದಿರುವ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರ ಉತ್ಸವ ಅದ್ದೂರಿಯಾಗಿ ಆಯೋಜಿಸಿರುವುದಕ್ಕೆ ಡಾ.ಕೆ.ಸುಧಾಕರ್‌ರನ್ನು ಅಭಿನಂಧಿಸಿದರು.

ವ್ಯೂಹ ರಚಿಸುತ್ತೇವೆ

ಚಿಕ್ಕಬಳ್ಳಾಪುರ (ಜ.12): ಮಾಜಿ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ತೀರ್ಮಾನ ಅವರಿಗೆ ಮಾರಕವಾಗಬಹುದು, ಅವರಿಗೇ ಮಾರಕವಾಗುವ ಪರಿಸ್ಥಿತಿ ಇರುವಾಗ ಜಿಲ್ಲೆಗಳ ಇತರೆ ಕ್ಷೇತ್ರಗಳ ಮೇಲೆ ಯಾವುದೇ ಪ್ರಭಾವ ಬೀರಲು ಸಾಧ್ಯವಿಲ್ಲ ಎಂದು ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ನಗರದ ಹೊರ ವಲಯದ ಚಿತ್ರಾವತಿ ಬಳಿ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್‌ ಅವರ ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋಲಾರಕ್ಕೂ ಅವರಿಗೂ ಯಾವುದೇ ರೀತಿಯ ವಿಶೇಷ ಸಂಬಂಧ ಇಲ್ಲ. ಸ್ವಾಭಾವಿಕವಾಗಿ ಅವರು ಅಲ್ಪಸಂಖ್ಯಾತ ಮತಗಳು ಮತ್ತು ಇತರೆ ಹಲವು ಜಾತಿಗಳ ಮತಗಳ ಲೆಕ್ಕಾಚಾರದಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿರ್ಸಲು ತೀರ್ಮಾನಿಸಿದ್ದಾರೆ ಎಂದರು.

Chikkaballapur Utsav: ಡಾ.ಸುಧಾಕರ್‌ ದೂರದೃಷ್ಟಿ ನಾಯಕ: ಸಚಿವ ಮುನಿರತ್ನ

ಸೋಲಿಗೆ ವ್ಯೂಹ ರಚಿಸುತ್ತೇವೆ: ತಾವು ವೈಯಕ್ತಿಕವಾಗಿ ಕೋಲಾರದಿಂದ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನವೇ ಅಂತಿಮ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ಕೋಲಾರದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಅಗತ್ಯವಿರುವ ವ್ಯೂಹ ನಾವು ಮಾಡುತ್ತೇವೆ ಎಂದರು. ಕೋಲಾರ ಜಿಲ್ಲೆಯ ಕೆಲವು ನಾಯಕರ ಬುಡ ಅಲ್ಲಾಡುತ್ತಿದೆ, ಹಾಗಾಗಿ ಅವರು ಉಳಿಯಲು ಇವರನ್ನು ಬಲಿಪಶು ಮಾಡುತ್ತಿದ್ದಾರೆ ಎನಿಸುತ್ತದೆ. ಕೋಲಾರವನ್ನು ಏನೇ ಆಗಲೀ ನಾವು ಗೆಲ್ಲಬೇಕು ಎಂದು ಪಣ ತೊಟ್ಟಿದ್ದೇವೆ ಎಂದು ಸಚಿವರು ಹೇಳಿದರು.

ಕೃಷಿಕನಿಗೆ ಸಂದ ಗೌರವ: ಕೃಷಿಕ ಕುಟುಂಬದಿಂದ ಬಂದ ಕೆ.ವಿ. ನಾಗರಾಜ್‌ ಅವರು ಕೃಷಿಕರ ಕಷ್ಟಅರ್ಥಮಾಡಿಕೊಂಡಿದ್ದ ಕಾರಣ ಹೈನುಗಾರಿಕೆಗೆ ವಿಶೇಷ ಒತ್ತು ನೀಡಿದ್ದಾರೆ. ಅಲ್ಲದೆ ಅವರಿಗೆ ದೊರೆತ ಮಾವು ಮತ್ತು ಖಾದಿ ಮಂಡಳಿಗಳು ರೈತ ಸಂಬಂಧಿ ಮಂಡಳಿಗಳೇ ಆಗಿದ್ದು, ಇವುಗಳಲ್ಲಿ ಅವರು ಕೃಷಿಕರಿಗಾಗಿ ಸಾಕಷ್ಟುಅಭಿವೃದ್ಧಿ ಮಾಡುವತ್ತ ಶ್ರಮಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

click me!