Karnataka Politics : 30 ಮಂದಿ ಕಾಂಗ್ರೆಸ್‌ ಸೇರ್ಪಡೆ

By Kannadaprabha NewsFirst Published Jan 12, 2023, 6:03 AM IST
Highlights

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಇಂಡುವಾಳು ಗ್ರಾಮದ ಸುಮಾರು 30 ಮಂದಿ ಜೆಡಿಎಸ್‌ ಪಕ್ಷ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡರು.

 ಮಂಡ್ಯ (ಜ. 12):  ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಇಂಡುವಾಳು ಗ್ರಾಮದ ಸುಮಾರು 30 ಮಂದಿ ಜೆಡಿಎಸ್‌ ಪಕ್ಷ ತೊರೆದು ಕಾಂಗ್ರೆಸ್‌ ಸೇರ್ಪಡೆಗೊಂಡರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ, ಇಂಡುವಾಳು ಗ್ರಾಮದ ಸಿದ್ದರಾಜು ಹಾಗೂ ನಾಗರಾಜು ಅವರ ನೇತೃತ್ವದಲ್ಲಿ ಹಲವಾರು ಮಂದಿ ತೊರೆದು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡಿದ್ದಾರೆ. ಅವರೆಲ್ಲರಿಗೂ ನಾನು ಬೆಂಬಲವಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು.

ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿದಿನ ಕನಿಷ್ಠ ಆರರಿಂದ ಏಳು ಗ್ರಾಮಗಳಿಗೆ ಭೇಟಿ ನೀಡಿ ಕ್ಷೇತ್ರ ಪ್ರವಾಸ ಮಾಡುತ್ತಿದ್ದೇನೆ. ಗ್ರಾಮದಲ್ಲಿ ಎಲ್ಲರನ್ನೂ ಭೇಟಿ ಮಾಡಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದು ವಿನಂತಿಸುತ್ತಿದ್ದೇನೆ. ಕ್ಷೇತ್ರ ಪ್ರವಾಸ ವೇಳೆ ಗ್ರಾಮಗಳಲ್ಲಿ ಜನರು ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದಾರೆ ಧೈರ್ಯದಿಂದ ಚುನಾವಣೆ ಎದುರಿಸಿ ನಿಮ್ಮ ಜೊತೆ ನಾವು ಇದ್ದೇವೆ ಎಂಬ ಭರವಸೆಯ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ದಿನೇ ದಿನೇ ನನ್ನ ಆತ್ಮವಿಶ್ವಾಸ ಹೆಚ್ಚುತ್ತಿದೆ. ಜಿ.ಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್‌ ನನ್ನ ಸ್ನೇಹಿತರು ಅಷ್ಟೇ. ಅವರ ಬಗ್ಗೆ ನಾನು ಹೆಚ್ಚು ಮಾತನಾಡಲಾರೆ ಎಂದರು.

ಇಂಡುವಾಳು ಗ್ರಾಮದ ಮುಖಂಡ ಸಿದ್ದರಾಜು ಮಾತನಾಡಿ, ಜೆಡಿಎಸ್‌ ಪಕ್ಷದಿಂದ ನಮಗೆ ಅನ್ಯಾಯವಾಗಿದೆ. ಮುಂಬರುವ ಚುನಾವಣೆಯಲ್ಲಿ ರಮೇಶ್‌ ಬಂಡಿಸಿದ್ದೇಗೌಡ ಅವರನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಾಗರಾಜು, ಸಿದ್ದರಾಜು, ವಿವೇಕ್‌, ರವೀಂದ್ರ, ಸುರೇಶ, ಮಹೇಶ್‌, ರಮೇಶ, ಪ್ರಸನ್ನ, ಸತೀಶ, ಅರವಿಂದ್‌, ಸತೀಶ್‌, ಕರೀಗೌಡ, ಮಲ್ಲೇಶ್‌, ವಾಟಾಳ್‌ ಶಂಕರ್‌ (ಆಚಾರಿ), ಚಾಮುಂಡಿ, ಆನಂದ್‌ ಭಟ್ಟ, ಯೋಗೇಶ್‌ ಇತರರು ಕಾಂಗ್ರೆಸ್‌ ಸೇರ್ಪಡೆಯಾದರು.

ಕಾಂಗ್ರೆಸ್ ಕಚೇರಿಯಲ್ಲಿ ಯಾರು ಇರಲ್ಲ

ಬೆಳಗಾವಿ(ಜ.11):  ಕಾಂಗ್ರೆಸ್‌ನವರು ವ್ಯರ್ಥ ಕಸರತ್ತು ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಸ್ವಂತ ಜಿಲ್ಲೆಯಲ್ಲೇ ಸೋತು ಓಡಿ ಬಂದಿದ್ದಾರೆ. ಸಿದ್ದರಾಮಯ್ಯ ಮೈಸೂರಿನಲ್ಲಿ ಹುಟ್ಟಿ ಬೆಳೆದವರು. ಅಲ್ಲಿಂದ ಬಾದಾಮಿಗೆ ಬಂದು ಕೊನೆಗೆ ಅಲ್ಲಿ ಸೋಲ್ತೀನಿ ಅಂತಾ ಅಲ್ಲಿಂದ ಪಾಲಾಯನ ಮಾಡಿದ್ದಾರೆ. ಅವರಿಗೆ ರಕ್ಷಣೆ ಇಲ್ಲ ಇನ್ನೂ ಅವರ ಕಾರ್ಯಕರ್ತರಿಗೆ ಎಲ್ಲಿದೆ ರಕ್ಷಣೆ..? ಅಂತ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ. ಬೆಳಗಾವಿಯಿಂದ ಕಾಂಗ್ರೆಸ್ ನಾಯಕರ ಬಸ್ಸು ಯಾತ್ರೆಗೆ ಸಂಬಂಧಿಸಿದಂತೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಇವತ್ತೇ ಬರೆದಿಟ್ಟುಕೊಳ್ಳಲಿ, 40 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲೋದಿಲ್ಲ. ಗುಜರಾತ್‌ಗಿಂತಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಕಡಿಮೆ ಆಗುತ್ತದೆ ಅಂತ ತಿಳಿಸಿದ್ದಾರೆ. 

ಕೆಂಪಯ್ಯನ್ನು ಇಟ್ಟುಕೊಂಡು ಭ್ರಷ್ಟಾಚಾರ ಆರೋಪ ಮಾಡ್ತಿದ್ದಾರೆ. ಕಾಂಗ್ರೆಸ್ ನಾಯಕರು ಎಲ್ಲರೂ ಬೇಲ್ ಮೇಲೆ ಓಡಾಡ್ತಿದ್ದಾರೆ. 2024ರ ಚುನಾವಣೆ ನಂತರ ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ದೀಪ ಹಚ್ಚೋಕು ಯಾರು ಇರಲ್ಲ. ಸಿದ್ದರಾಮಯ್ಯ ಒಬ್ಬ ಹಿರಿಯ ರಾಜಕಾರಣಿ, ಒಂದು ಸೀಟು ಹುಡುಕಲು ಅಲೆ ಮಾರಿ ತರ ಓಡಾಡ್ತಿದ್ದಾರೆ ಅಂತ ಲೇವಡಿ ಮಾಡಿದ್ದಾರೆ. 

ಸಿದ್ದರಾಮಯ್ಯ ಕಾಣುತ್ತಿರುವ ಸಿಎಂ ಕುರ್ಚಿ ಕನಸು ನನಸಾಗೋದಿಲ್ಲ: ಸಚಿವ ಕಾರಜೋಳ

ಸುಪ್ರೀಂ ಕೋರ್ಟ್‌ನಲ್ಲಿ ಕೃಷ್ಣ ಅಧಿಸೂಚನೆ ವಿಚಾರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಗೋವಿಂದ ಕಾರಜೋಳ, 2013 ರಿಂದ ಇಲ್ಲಿಯವರೆಗೂ ಗೆಜೆಟ್ ನೋಟಿಫಿಕೆಷನ್ ನಿಲ್ಲಿಸಿದ್ರು. ನಿನ್ನೆ ನಮ್ಮ ಪರ ವಕೀಲರು ವಾದ ಮಂಡನೆ ಮಾಡಿದ್ದಾರೆ. ಕಾವೇರಿ ವಿಚಾರ ಬಂದಾಗ ಗೆಜೆಟ್ ನೋಟಿಫಿಕೆಶನ್ ಮಾಡಿರುವ ಉದಾಹರಣೆ ಇದೆ. ನಾವು 15 ಸಾವಿರ ಕೋಟಿ ಮೂಲಸೌಕರ್ಯಕ್ಕೆ ವೆಚ್ಚ ಮಾಡಿದ್ದೀವಿ. ಅದು ಉಪಯೋಗ ಆಗಬೇಕು ಎಂದು ವಕೀಲರು ವಾದ ಮಂಡಿಸಿದ್ದಾರೆ. ಆಲಮಟ್ಟಿ ಜಲಾಶಯದಲ್ಲಿ ನೀರು ಹಿಡಿದಿಡುವ ಸಾಮರ್ಥ್ಯವಿದೆ ಎಂದು ವಾದ ಮಾಡಿದ್ದಾರೆ. 5.9 ಲಕ್ಷ ಹೆಕ್ಟೇರ್ ನೀರಾವರಿ ಮಾಡೋಕೆ ಅವಕಾಶ ಮಾಡಿಕೊಡಬೇಕು. ಮಹಾರಾಷ್ಟ್ರ ಸರ್ಕಾರದ ಜೊತೆಗೆ ಜಂಟಿಯಾಗಿ ಮೂವ್ ಮಾಡಿದ್ದೇವೆ. ನಮ್ಮ ಪರವಾಗಿ ಸುಪ್ರೀಂ ಕೋರ್ಟ್ ಅಧಿಸೂಚನೆ ಹೊರಡಿಸಲಿದೆ ಎಂಬ ವಿಶ್ವಾಸವಿದೆ ಅಂತ ಕಾರಜೋಳ ತಿಳಿಸಿದ್ದಾರೆ.

click me!