ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲೂ ಜಾರಿ: ಅಶ್ವತ್ಥನಾರಾಯಣ

Kannadaprabha News   | Asianet News
Published : Feb 24, 2020, 10:12 AM IST
ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲೂ ಜಾರಿ: ಅಶ್ವತ್ಥನಾರಾಯಣ

ಸಾರಾಂಶ

ಕೇಂದ್ರ ಸರ್ಕಾರದಿಂದ ಶಿಕ್ಷಣ ನೀತಿಯ ಮರು ವಿನ್ಯಾಸದ ಬಗ್ಗೆ ಅಧಿಕೃತ ಘೋಷಣೆ: ಡಿಸಿಎಂ ಅಶ್ವತ್ಥ ನಾರಾಯಣ| ಉತ್ತಮ ಶಿಕ್ಷಣದಿಂದ ಮಾತ್ರ ಸದೃಢವಾದ ಸಮಾಜ ನಿರ್ಮಾಣ ಸಾಧ್ಯ| ಆದರೆ, ಸಾಮಾಜಿಕ ಸ್ಥಾನಮಾನ, ತೋರಿಕೆಗಾಗಿ ಶಿಕ್ಷಣ ಪಡೆಯುವ ವ್ಯವಸ್ಥೆ ಇದೆ|

ಬೆಂಗಳೂರು(ಫೆ.24): ಪ್ರಸ್ತುತ ಸಮಾಜದ ಅವಶ್ಯಕತೆ ಪೂರೈಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಮರು ವಿನ್ಯಾಸಗೊಳಿಸುತ್ತಿರುವ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ರಾಜ್ಯದಲ್ಲಿಯೂ ಜಾರಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ.

‘ಮಿಥಿಕ್‌ ಸೊಸೈಟಿ’ ಹಾಗೂ ‘ಸಮರ್ಥ ಭಾರತ’ ಭಾನುವಾರ ನಗರದ ಮಿಥಿಕ್‌ ಸೊಸೈಟಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಉತ್ತಮನಾಗು, ಉಪಕಾರಿಯಾಗು’ (ಬಿ ಗುಡ್‌, ಡು ಗುಡ್‌) ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉತ್ತಮ ಶಿಕ್ಷಣದಿಂದ ಮಾತ್ರ ಸದೃಢವಾದ ಸಮಾಜ ನಿರ್ಮಾಣ ಸಾಧ್ಯ. ಆದರೆ, ಸಾಮಾಜಿಕ ಸ್ಥಾನಮಾನ, ತೋರಿಕೆಗಾಗಿ ಶಿಕ್ಷಣ ಪಡೆಯುವ ವ್ಯವಸ್ಥೆ ಇದೆ. ಹೀಗಾಗಿ, ಸಮಾಜದ ಅವಶ್ಯಕತೆ ಪೂರೈಸುವ ದೃಷ್ಟಿಯಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸುವ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದೆ. ರಾಜ್ಯದಲ್ಲಿಯೂ ತ್ವರಿತವಾಗಿ ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಔಪಚಾರಿಕ ಹಾಗೂ ಅನೌಪಚಾರಿಕ ಶಿಕ್ಷಣದಿಂದ ಸಾಕಷ್ಟುಜ್ಞಾನವಂತರಾಗಿದ್ದರೂ ಅನೇಕ ತಪ್ಪುಗಳನ್ನು ಮಾಡುತ್ತಿದ್ದೇವೆ. ಇದರಿಂದ ಸಮಾಜ ಅನೇಕ ಸಮಸ್ಯೆಎದುರಿಸಬೇಕಾಗಿದೆ. ಮಹಾನ್‌ ಚಿಂತಕರ ವಿಚಾರಧಾರೆಗಳ ಮೂಲಕ ಜ್ಞಾನ ತಿಳುವಳಿಕೆಯಿಂದ ಮಾತ್ರ ಸಮಸ್ಯೆಪರಿಹರಿಸುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪಾಶ್ಚಾತ್ಯ ರಾಷ್ಟ್ರಗಳು ಶಿಕ್ಷಣ ವ್ಯವಸ್ಥೆಯನ್ನು ಬದಲಾವಣೆ ಮಾಡಿಕೊಂಡಿದ್ದು, ಭಾರತೀಯ ಶಿಕ್ಷಣವನ್ನು ಅಳವಡಿಸಿಕೊಳ್ಳುವುದಕ್ಕೆ ಮುಂದಾಗುತ್ತಿವೆ. ಆದರೆ, ದುರ್ದೈವದಿಂದ ನಾವು ಪಾಶ್ಚಿಮಾತ್ಯ ಶಿಕ್ಷಣ ಅಳವಡಿಸಿಕೊಂಡಿದ್ದೇವೆ. ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಭಾರತದಲ್ಲಿ ನಡೆಯುವ ಸಂಶೋಧನೆಗಿಂತ ಹೆಚ್ಚು ವಿದೇಶದಲ್ಲಿ ನಡೆಯುತ್ತಿದೆ ಎಂದರು.

ಮಿಥಿಕ್‌ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್‌, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ಹಾಗೂ ಇಂದಿನ ಆಧುನಿಕ ಭಾರತದ ನಿರ್ಮಾಣಕ್ಕೆ ಸ್ವಾಮಿ ವಿವೇಕಾನಂದ ಕಾರಣ. ಈ ಎರಡು ವಿಷಯಕ್ಕೆ ಇಂದಿಗೂ ವಿವೇಕಾನಂದರು ಹತ್ತಿರವಾಗುತ್ತಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ. ಎಸ್‌.ವಿದ್ಯಾಶಂಕರ್‌, ಸಮರ್ಥ ಭಾರತದ ಮಾರ್ಗದರ್ಶಕರಾದ ನಾ.ತಿಪ್ಪೇಸ್ವಾಮಿ, ಕೃ.ನರಹರಿ ಮೊದಲಾದವರು ಇದ್ದರು.

ಬಹುಮಾನ ವಿತರಣೆ

ಸ್ವಾಮಿ ವಿವೇಕಾನಂದ ಅವರ 157ನೇ ಜನ್ಮದಿನಾಚರಣೆ ಅಂಗವಾಗಿ ದಿ ಮಿಥಿಕ್‌ ಸೊಸೈಟಿ ಹಾಗೂ ಸಮರ್ಥ ಭಾರತ ರಾಜ್ಯಮಟ್ಟದಲ್ಲಿ ಸ್ವಾಮಿ ವಿವೇಕಾನಂದರ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 2,281 ಮಂದಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 

ಭಾನುವಾರ ನಡೆದ ಸಮಾರಂಭದಲ್ಲಿ ಪ್ರಥಮ ಸ್ಥಾನ ಗಳಿಸಿದ ಬೆಳಗಾವಿಯ ವಿಜಯಾ ಪಾಟೀಲ್‌, ದ್ವಿತೀಯ ಸ್ಥಾನ ಗಳಿಸಿದ ಬೆಂಗಳೂರಿನ ಪಿ.ಡಿ.ಪೂಜಾ ಹಾಗೂ ತೃತೀಯ ಸ್ಥಾನ ಪಡೆದ ತುಮಕೂರಿನ ಬಿ.ಆರ್‌.ಭಾಗ್ಯಲಕ್ಷ್ಮಿ ಹಾಗೂ ಸಮಾಧಾನಕರ ಬಹುಮಾನ ಪಡೆದ 30 ವಿದ್ಯಾರ್ಥಿಗಳಿಗೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಪ್ರಶಸ್ತಿ ಪತ್ರ ವಿತರಣೆ ಮಾಡಿದರು.

PREV
click me!

Recommended Stories

Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ
ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್