BSY ನೇತೃತ್ವದಲ್ಲಿ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುತ್ತೇವೆ: ಸೋಮಶೇಖರ್‌

Kannadaprabha News   | Asianet News
Published : Feb 24, 2020, 09:45 AM IST
BSY ನೇತೃತ್ವದಲ್ಲಿ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುತ್ತೇವೆ: ಸೋಮಶೇಖರ್‌

ಸಾರಾಂಶ

ಯಡಿಯೂರಪ್ಪ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುವುದು ಕಷ್ಟದ ಕೆಲಸವೇನಲ್ಲ| ಅವರಿಗೆ ಇರುವ ಅನುಭವದಿಂದ ನಾವು ಉತ್ತಮ ಆಡಳಿತ ಮಾಡಲು ಎಲ್ಲ ರೀತಿ ತಯಾರಿದ್ದೇವೆ| ಯಾವುದೇ ಆತಂಕಗಳಿಲ್ಲದೆ ಸರ್ಕಾರವನ್ನು ಸುಭದ್ರವಾಗಿ ನಡೆಸುತ್ತೇವೆ| 

ಕುಣಿಗಲ್‌(ಫೆ.24): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುವುದಾಗಿ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದ್ದಾರೆ.

ಶ್ರೀಕ್ಷೇತ್ರ ಯಡಿಯೂರಿಗೆ ಭೇಟಿ ನೀಡಿ ಸಿದ್ಧಲಿಂಗೇಶ್ವರರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ನೀಡುವುದು ಕಷ್ಟದ ಕೆಲಸವೇನಲ್ಲ. ಅವರಿಗೆ ಇರುವ ಅನುಭವದಿಂದ ನಾವು ಉತ್ತಮ ಆಡಳಿತ ಮಾಡಲು ಎಲ್ಲ ರೀತಿ ತಯಾರಿದ್ದೇವೆ. ಯಾವುದೇ ಆತಂಕಗಳಿಲ್ಲದೆ ಸರ್ಕಾರವನ್ನು ಸುಭದ್ರವಾಗಿ ನಡೆಸುತ್ತೇವೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಚಿವರಾದ ಮೊದಲ ಬಾರಿಗೆ ಕುಣಿಗಲ್‌ ತಾಲೂಕಿಗೆ ಭೇಟಿ ನೀಡಿದ್ದ ಸಹಕಾರ ಸಚಿವ ಸೋಮಶೇಖರ್‌, ಯಡಿಯೂರು ಹೋಬಳಿ ಶ್ರೀಕ್ಷೇತ್ರ ಸಿದ್ಧಲಿಂಗೇಶ್ವರ ದೇವಸ್ಥಾನ ಹಾಗೂ ಅಮ್ಮನಹಟ್ಟಿ ಮತ್ತು ಹಾಲಪ್ಪ ಹಾಗೂ ಚಿಕ್ಕಣ್ಣಸ್ವಾಮಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
 

PREV
click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
ಉಡುಪಿ: 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!