ಚಾಮುಂಡೇಶ್ವರಿ ದಸರಾ ವರ್ಸಸ್ ಮಹಿಷಾಸುರ ದಸರಾ ಸೈದ್ಧಾಂತಿಕ ಸಮರದಲ್ಲಿ ಇದೀಗ ಸಚಿವ ಸಿ.ಟಿ. ರವಿ ಎಂಟ್ರಿಕೊಟ್ಟಿದ್ದು, ಪ್ರಗತಿಪರರಿಗೆ ಟಾಂಗ್ ಕೊಟ್ಟಿದ್ದಾರೆ.
ಮೈಸೂರು, (ಸೆ.28): ಮೈಸೂರಿನಲ್ಲಿ ಚಾಮುಂಡೇಶ್ವರಿ ದಸರಾ ವರ್ಸಸ್ ಮಹಿಷಾಸುರ ದಸರಾ ಸೈದ್ಧಾಂತಿಕ ಸಮರ ಶುರುವಾಗಿದೆ. ಕೆಲವರು ಮಹಿಷಾಸುರ ದಸರಾ ಮುಂದಾದ್ರೆ, ಇನ್ನು ಕೆಲವರು ಇದನ್ನು ಮಾಡಕೂಡದು ಎಂದು ಆದೇಶ ನೀಡಿದ್ದಾರೆ.
ಮಹಿಷ ದಸರಾ ಆಚರಣೆ ವಿಚಾರವಾಗಿ ಸರ್ಕಾರ ಚರ್ಚೆಗೆ ಬರಲಿ ಎನ್ನುವ ಪ್ರಗತಿಪರರ ಹೇಳಿಕೆಗೆ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದು, ನಾವು ಅವರ ಜತೆ ಚರ್ಚೆ ಮಾಡಲು ಸಿದ್ಧ. ಆದ್ರೆ ಅದೆಲ್ಲ ಬೇಕಿಲ್ಲ. ನಿನ್ನೆ ಮಹಿಷ ದಸರಾ ಆಚರಣೆ ರದ್ದಾಗಿದ್ದಕ್ಕೆ ಎಷ್ಟು ಜನ ಬಂದ್ರು? ಈಗ ಚಾಮುಂಡೇಶ್ವರಿ ದಸರಾ ಆಚರಣೆಗೆ ಎಷ್ಟು ಜನ ಬರ್ತಾರೆ ಗೊತ್ತಲ್ಲ. ಇಷ್ಟು ಸಾಕಲ್ಲವೇ ಯಾವುದು ಸತ್ಯ ಸರಿ ಅಂತ ಮತ್ತೆ ಚರ್ಚೆ ಬೇಕಾ..? ಎಂದು ಟಾಂಗ್ ಕೊಟ್ಟರು
ಭಗವಾನ್‌ಗೆ ಗೃಹಬಂಧನ, ಗೂಂಡಾಗಿರಿಗೆ ಬಗ್ಗಲ್ಲ ಅಂದ್ರು ಮಹೇಶ್ ಚಂದ್ರ ಗುರು!
ಮಹಿಷಾಸುರ ದಸರಾ ಆಚರಣೆ ಮಾಡಲು ಮುಂದಾಗಿರೋರು ವಿತ್ತಂಡವಾದಿಗಳು. ವಿಕೃತ ಮನಸ್ಸಿನ ಮನಸ್ಥಿತಿಯುಳ್ಳವರಾಗಿದ್ದಾರೆ. ಅವರ ಮನಸ್ಸು ಕೆಟ್ಟಿದೆ. ಸರ್ಕಾರ ಅವರಿಗೆ ಉಚಿತವಾಗಿ ಮಾನಸಿಕ ಪರೀಕ್ಷೆ ಮಾಡಿ ಅವರ ಮನೆಗ ರಿಪೋರ್ಟ್ ಕಳಿಸಿಕೊಡುತ್ತದೆ ಎಂದು ಮಾಧ್ಯಮ ಸಂವಾದದಲ್ಲಿ ಕಿಡಿಕಾರಿದರು.
ಇನ್ನು ಮಹಿಷಾಸುರ ದಸರಾ ಆಚರಣೆಗೆಂದು ಚಾಮುಂಡೇಶ್ವರಿ ಬೆಟ್ಟದಲ್ಲಿ ಶಾಮಿಯಾನ ಹಾಕಿರುವುದಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪೊಲೀಸರ ವಿರುದ್ಧ ಹರಿಹಾಯ್ದಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಹಿಷ ದಸರಾ ಕುರಿತು ಧ್ವನಿ ಎತ್ತಿದ್ದ ಪ್ರಗತಿಪರ ಚಿಂತಕ ಕೆಎಸ್. ಭಗವಾನ್ ಗೆ ಸದ್ಯ ಗೃಹ ಬಂಧನದಲ್ಲಿದ್ದಾರೆ. ಮನೆಯಿಂದ ಹೊರ ಬರದಂತೆ ಕೆ ಎಸ್ ಭಗವಾನ್ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು.