ನಮ್‌ ಕಡೆ ಮಾತ್ ಕೇಳಿದ್ರೆ ಎದೆ ಹೊಡ್ಕೋತೀರಿ: ಉಡುಪಿಯಲ್ಲಿ ಶ್ರೀರಾಮುಲು ಹಾಸ್ಯ ಚಟಾಕಿ

By Kannadaprabha News  |  First Published Sep 28, 2019, 3:19 PM IST

ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಭಾಷೆ ಬಗ್ಗೆ ಮಾತನಾಡಿ ಉಡುಪಿಯಲ್ಲಿ ಹಾಸ್ಯ ಚಟಾಕಿ ಸಿಡಿಸಿದ್ದಾರೆ. ನಮ್ಮ ಆಡುಮಾತಿಗೆ ಯಾರೂ ತಪ್ಪು ಭಾವಿಸಲ್ಲ, ಈ ಕಡೆ ಮಂದಿ ನಮ್ಮ ಮಾತು ಕೇಳಿದ್ರೆ ಎದೆ ಹೊಡ್ಕೋತೀರಿ ಎಂದು ಹೇಳಿದ್ದಾರೆ.


ಉಡುಪಿ(ಸೆ.28): ಮಾಜಿ ಶಾಸಕ ಮಹೇಶ್‌ ಕುಮಟಳ್ಳಿಗೆ ಲಕ್ಷ್ಮಣ ಸವದಿ ಅವರು ಅವಮಾನ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ನಗೆ ಚಟಾಕಿ ಹಾರಿಸಿದ ಶ್ರೀರಾಮುಲು, ಅದೇನು ಗಂಭೀರ ವಿಚಾರ ಅಲ್ಲ, ಉತ್ತರ ಕರ್ನಾಟಕದ ಆಡು ಭಾಷೆನೇ ಹಿಂಗೆ. ನಮ್‌ ಕಡೆ ಹೆಂಗ್‌ ಮಾತಾಡ್ತಾರೆ ಅಂತ ನೀವು ಊಹಿಸಲೂ ಸಾಧ್ಯ ಇಲ್ಲ. ನಮ್ಮ ಆಡುಮಾತಿಗೆ ಯಾರೂ ತಪ್ಪು ಭಾವಿಸಲ್ಲ, ಈ ಕಡೆ ಮಂದಿ ನಮ್ಮ ಮಾತು ಕೇಳಿದ್ರೆ ಎದೆ ಹೊಡ್ಕೋತೀರಿ ಎಂದಿದ್ದಾರೆ.

ಮಂಡ್ಯ: ದಸರಾ ಪೆಂಡಾಲ್ ಹಾಕೋದಿಕ್ಕೂ JDS, BJP ಜಗಳ

Tap to resize

Latest Videos

ಸವದಿಯವರು ಉದ್ದೇಶ ಪೂರ್ವಕವಾಗಿ ಮಾತಾಡಿರಲ್ಲ. ಇನ್ನೂ ಬೇರೆ ಬೇರೆ ಶಬ್ದ ಮಾತಾಡಿರ್ತೀವಿ. ನಮ್‌ ಕಡೆ ಮಂದಿ ಅಭ್ಯಾಸ ಅಷ್ಟೇ. ಕುಮಟಳ್ಳಿಯವರು ಮಿಸ್‌ ಅಂಡರ್‌ ಸ್ಟಾಡ್‌ ಮಾಡ್ಕೊಂಡಿರಬಹುದು. ಕುಮಟಳ್ಳಿನೂ ನಮ್ಮ ಸ್ನೇಹಿತರು, ಸವದಿ ಕೂಡಾ ನಮ್ಮ ಸ್ನೇಹಿತರು. ಏನಾದ್ರೂ ಗೊಂದಲ ಇದ್ರೆ ಸರಿಪಡಿಸುವ ಕೆಲಸ ಮಾಡುವೆ ಎಂದರು.

ಮಂಗಳೂರು: ನಡೆದುಕೊಂಡು ಹೋಗ್ತಿದ್ದ ವ್ಯಕ್ತಿಗೆ ದಂಡ..!

ಪ್ರತಾಪ್‌ ಸಿಂಹ ಪೊಲೀಸರಿಗೆ ನಿಂದನೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಾನು ಪ್ರವಾಸದಲ್ಲಿದ್ದೆ. ಏನು ಮಾತನಾಡಿದ್ದಾರೆ ನೋಡಿಲ್ಲ ಎಂದು ಏನೂ ಉತ್ತರ ಕೊಡದೆ ಮುಂದೆ ನಡೆದರು. ಸಂಪುಟ ವಿಸ್ತರಣೆ ವೇಳೆ ಶ್ರೀ ರಾಮುಲು ಡಿಸಿಎಂ ಆಗೋ ಸೂಚನೆ ಇದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಕೃಷ್ಣನ ದಯೆ ಹೇಗಿದ್ಯೋ ನೋಡೋಣ’ ಎಂದು ನಸುನಕ್ಕರು.

click me!