Mandya: 2 ದಿನದಲ್ಲಿ ರೈತ ಖಾತೆಗೆ 2500 ರೂ. ಬರ ಪರಹಾರದ ಹಣ; ಸಚಿವ ಚಲುವರಾಯಸ್ವಾಮಿ

Published : Oct 08, 2026, 12:04 PM IST
N Chaluvarayaswamy

ಸಾರಾಂಶ

ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ರೈತರ ಖಾತೆಗೆ ಶೀಘ್ರದಲ್ಲೇ 2500 ರೂ. ತಾತ್ಕಾಲಿಕ ಪರಿಹಾರ ಜಮಾ ಆಗಲಿದೆ. ಕೇಂದ್ರ ಬರ ಅಧ್ಯಯನ ತಂಡ ಕೆ.ಆರ್.ಎಸ್ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದರ ನಡುವೆ ಅಕ್ಟೋಬರ್ 11ರಂದು ನಡೆಯಬೇಕಿದ್ದ ಕಾವೇರಿ ಆರತಿ ಕಾರ್ಯಕ್ರಮ ಮುಂದೂಡಿಕೆಯಾಗಿದೆ.

ಮಂಡ್ಯ: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ಪರಿಸ್ಥಿತಿಯನ್ನು ನಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ರೈತರಿಗೆ ಸರ್ಕಾರ ಘೋಷಣೆ ಮಾಡಿರುವ 2500 ರೂಪಾಯಿಗಳ ತಾತ್ಕಾಲಿಕ ಬರ ಪರಿಹಾರ ಇನ್ನೆರಡು ದಿನಗಳಲ್ಲಿ ರೈತರ ಖಾತೆಗಳಿಗೆ ನೇರವಾಗಿ ಜಮಾ ಆಗಲಿದೆ ಎಂದು ನೀರಾವರಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿರುವ ಚಲುವರಾಯಸ್ವಾಮಿ ಅವರು, ಈಗಾಗಲೇ ಕೇಂದ್ರ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿ, ಪರಿಶೀಲನೆ ಕೈಗೊಂಡಿದ್ದಾರೆ. ಆದ್ದರಿಂದ ಕೇಂದ್ರ ರೈತರ ಸಮಸ್ಯೆಗೆ ಸ್ಪಂದಿಸಬೇಕಿದೆ. ಈಗಾಗಲೇ ಆಂಧ್ರ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಗೆ ಕೇಂದ್ರ ಹೆಚ್ಚಿನ ಬರಪರಿಹಾರ ಹಣ ಬಿಡಗಡೆ ಮಾಡಿದೆ. ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡಬಾರದು, ನಮ್ಮ ಸರ್ಕಾರ ರೈತರ ಪರ ಇದೆ ಎಂದು ತಿಳಿಸಿದ್ದಾರೆ.

ಕೇಂದ್ರ ತಂಡಕ್ಕೆ ಬರದ ಪರಿಸ್ಥಿತಿ ವಿವರಣೆ

ಇನ್ನು, ಮಂಡ್ಯಕ್ಕೆ ಆಗಮಿಸಿದ ಕೇಂದ್ರ ಬರ ಅಧ್ಯಯನ ತಂಡ ಕೆ.ಆರ್.ಎಸ್ ಡ್ಯಾಂ ವೀಕ್ಷಣೆ ಮಾಡಿತು. ಡ್ಯಾಂ ವೀಕ್ಷಣೆ ಬಳಿಕ ಜಿಲ್ಲೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಜಿಲ್ಲೆಯ ಬರ‌ ಪರಿಸ್ಥಿತಿಯನ್ನ ಕೇಂದ್ರ ತಂಡಕ್ಕೆ ಅಧಿಕಾರಿಗಳು ವಿವರಿಸಿದರು. ಜಿಲ್ಲೆಯಲ್ಲಿ ಶೇಕಡಾ 44 ಮಳೆ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ. ಜಿಲ್ಲೆಯಲ್ಲಿ 289 ಗ್ರಾಮಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ. ಸದ್ಯ‌ ಜಿಲ್ಲೆಯ 30 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮುಂದೆ ಮಳೆಯಾಗದಿದ್ದರೆ‌ ತೀವ್ರ ಸಂಕಷ್ಟವಾಗಲಿದೆ ಎಂದು ಜಿಲ್ಲೆಯ ಅಧಿಕಾರಿಗಳು ಪರಿಸ್ಥಿತಿ ವಿವರಿಸಿದರು. ಕೇಂದ್ರ ತಂಡಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ್, ಜಿ.ಪಂ ಸಿಇಓ ನಂದಿನಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಮಾಹಿತಿ ನೀಡಿದ್ದಾರೆ.

ಕಾವೇರಿ ಆರತಿ ಮುಂದೂಡಿಕೆ

ಕೆಆರ್‌ಎಸ್ ಡ್ಯಾಂ ಬಳಿ ನಡೆಯುವ ಕಾವೇರಿ ಆರತಿ ಮುಂದೂಡಿಕೆಯಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನಲ್ಲಿ ಅ.11 ರಿಂದ ಕಾವೇರಿ ಆರತಿ ನಡೆಯಬೇಕಿತ್ತು. ಈ ಕಾರ್ಯಕ್ರಮಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಬೇಕಿತ್ತು. ಆದರೆ ಅಂದು ಸಿಎಂ ಡಿ.ಕೆ.ಶಿವಕುಮಾರ್‌ಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಕಾವೇರಿ ಆರತಿ ಮುಂದೂಡಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ಅ.18 ರಿಂದ 25 ರ ವರೆಗೆ ಕಾವೇರಿ ಆರತಿ ಜರುಗಲಿದೆ. ಕಳೆದ ವರ್ಷದಿಂದವ ಕೆಆರ್‌ಎಸ್ ಡ್ಯಾಂ ಬಳಿ ಕಾವೇರಿ ಆರತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಡಿ.ಕೆ ಶಿವಕುಮಾರ್ ಅವರು ಕಾವೇರಿ ಆರತಿ ಪ್ರಾರಂಭಿಸಿದ್ದರು. ಈ ಬಾರಿ ಬರದ ನಡುವೆಯೂ ಅದ್ದೂರಿ ಕಾವೇರಿ ಆರತಿಗೆ ಸಿದ್ಧತೆ ನಡೆಸಲಾಗಿದೆ.

PREV
Read more Articles on
click me!

Recommended Stories

ಮೈಸೂರು ದಸರಾ ಹಬ್ಬದ ಹೊತ್ತಲ್ಲಿ ತೃತೀಯ ಲಿಂಗಿ ಅನುಮಾನಾಸ್ಪದ ಸಾವು!
ಕೋಳಿ ಫಾರಂಗೆ ನುಗ್ಗಿ ಬರೋಬ್ಬರಿ 300 ನಾಟಿ ಕೋಳಿ ತಿಂದು ತೇಗಿದ ಚಿರತೆ! ರಕ್ಷಣೆಗೆ ಬಂದ ರೈತರ ಮೇಲೂ ದಾಳಿ