ಅಭಿವೃದ್ಧಿಯ ಸಾಧನೆಯೇ ಮಾತನಾಡುವಂತಾಗಲಿ; ಸಚಿವ ಸಿ.ಸಿ.ಪಾಟೀಲ್

By Kannadaprabha NewsFirst Published Sep 4, 2022, 11:45 AM IST
Highlights

ಅಡವಿ ಸೋಮಾಪುರಕ್ಕೆ .4.75 ಕೋಟಿ ಅನುದಾನ ಒದಗಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಮಾತನಾಡುವುದೇ ಸಾಧನೆ ಆಗದೇ ಅಭಿವೃದ್ಧಿ ಕಾಮಗಾರಿಗಳ ಮೂಲಕ ಸಾಧನೆಯೇ ಮಾತನಾಡುವಂತಾಗಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ (C.C.Patil) ಹೇಳಿದರು.

ಗದಗ (ಸೆ.4) : ಅಡವಿ ಸೋಮಾಪುರಕ್ಕೆ .4.75 ಕೋಟಿ ಅನುದಾನ ಒದಗಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಮಾತನಾಡುವುದೇ ಸಾಧನೆ ಆಗದೇ ಅಭಿವೃದ್ಧಿ ಕಾಮಗಾರಿಗಳ ಮೂಲಕ ಸಾಧನೆಯೇ ಮಾತನಾಡುವಂತಾಗಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ(C.C.Patil) ಹೇಳಿದರು. ತಾಲೂಕಿನ ಅಡವಿ ಸೋಮಾಪುರ(Adavi Somapura) ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಬಿ.ಎಸ್‌. ಯಡಿಯೂರಪ್ಪ(B.S.Yadiyurappa) ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪ್ರವಾಹ ಬಂದೊದಗಿತು. ಅದನ್ನು ಸಮರ್ಥವಾಗಿ ನಿಭಾಯಿಸುವ ಹೊತ್ತಿಗೆ ಜಗತ್ತೇ ತಲ್ಲಣಗೊಳಿಸುವ ಕೋವಿಡ್‌(Covid) ಮಹಾಮಾರಿ ಆವರಿಸಿದೆ. ಬಿಎಸ್‌ವೈ ಕೋವಿಡ್‌ ಹತೋಟಿಗೆ ಹರಸಾಹಸ ಪಟ್ಟಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಆರೋಗ್ಯ ಕ್ಷೇತ್ರದ ಸುಧಾರಣೆಗೆ ಹಲವಾರು ಕ್ರಮಗಳನ್ನು ಹಾಗೂ ಕಠಿಣ ನಿರ್ಧಾರಗಳನ್ನು ಕೈಗೊಂಡು ಜನರ ಜೀವ ರಕ್ಷಣೆಗಾಗಿ ಸರ್ಕಾರ ಹಗಳಿರುಳು ಶ್ರಮಿಸಿದೆ ಎಂದು ತಿಳಿಸಿದರು.

ಗದಗ: ಕಬ್ಬಿನ ದರ ನಿಗದಿಗಾಗಿ 26ರಂದು ರೈತರಿಂದ ವಿಧಾನಸೌಧ ಚಲೋ

ನಂತರ ಬಸವರಾಜ ಬೊಮ್ಮಾಯಿ(CM Basavaraj Bommai) ನೇತೃತ್ವದ ಸರ್ಕಾರ ರೈತರ ಮಕ್ಕಳಿಗೆ ವಿದ್ಯಾನಿಧಿ(Vidyanidhi) ಜಾರಿಗೊಳಿಸುವ ಮೂಲಕ ದೇಶದಲ್ಲಿಯೇ ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರಥಮ ಯೋಜನೆ ಜಾರಿಗೊಳಿಸಲಾಯಿತು. ಜತೆಗೆ ಲೋಕೋಪಯೋಗಿ ಇಲಾಖೆ(Department of Public Works)ಯಿಂದ ರಸ್ತೆ, ಕಟ್ಟಡ ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ಅಂದಾಜು .16 ಸಾವಿರ ಕೋಟಿ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ವಿನಿಯೋಗಿಸಲಾಗಿದೆ. ವಿರೋಧಿಗಳ ಟೀಕೆ ಟಿಪ್ಪಣಿಗಳಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಪ್ರತ್ಯುತ್ತರ ನೀಡೋಣ, ಅಡವಿ ಸೋಮಾಪುರ ಗ್ರಾಮದ ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧವಾಗಿದೆ. ಗ್ರಾಮದ ವಸತಿ ರಹಿತರಿಗೆ ಆಸರೆ ಕಲ್ಪಿಸುವದು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ದೊರಕಿಸಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷ ಶ್ಯಾಮಸುಂದರ ಡಂಬಳ ಮಾತನಾಡಿ, ಲೋಕೋಪಯೋಗಿ ಇಲಾಖೆಯಿಂದ ಅಡವಿ ಸೋಮಾಪುರ ಹಾಗೂ ಅಡವಿ ಸೋಮಾಪುರ ತಾಂಡಾ 4.5 ಕಿಮೀ ರಸ್ತೆ ಡಾಂಬರೀಕರಣಕ್ಕಾಗಿ . 2.75 ಕೋಟಿ, ಸೇತುವೆ ನಿರ್ಮಾಣಕ್ಕಾಗಿ . 1 ಕೋಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 2 ಕೊಠಡಿ ನಿರ್ಮಾಣಕ್ಕೆ . 30 ಲಕ್ಷ, ಅಡವಿ ಸೋಮಾಪುರ ಹಾತಲಗೇರಿ ಒಳ ರಸ್ತೆ ಸುಧಾರಣೆಗಾಗಿ . 40 ಲಕ್ಷ ಅನುದಾನ ನೀಡುವ ಮೂಲಕ ಭೂಮಿ ಪೂಜೆ ನೆರವೇರಿಸಿದ್ದಾರೆ. ಅದರಂತೆ ಅಡವಿ ಗೋಣಿ ಬಸವೇಶ್ವರ ನೂತನ ರಥ ನಿರ್ಮಾಣಕ್ಕೆ . 10 ಲಕ್ಷ, ದೇವಸ್ಥಾನ ಜೀರ್ಣೋದ್ಧಾರಕ್ಕೆ . 10 ಲಕ್ಷ, ಮಾರುತಿ ದೇವಸ್ಥಾನ ಗೋಪುರ ನಿರ್ಮಾಣಕ್ಕೆ . 5 ಲಕ್ಷ, ಮಹಾದೇವ ದೇವಸ್ಥಾನ ಜೀರ್ಣೋದ್ಧಾರಕ್ಕೆ . 5 ಲಕ್ಷ ನೀಡುವ ಮೂಲಕ ಒಟ್ಟು . 4.75 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಸಚಿವ ಸಿ.ಸಿ. ಪಾಟೀಲ ಮುಂದಾಗಿದ್ದಾರೆ ಎಂದರು.

ಗದಗ: ಮೊರಾರ್ಜಿ ವಸತಿ ಶಾಲೆಯಲ್ಲಿ ವಾರಕ್ಕೊಮ್ಮೆ ಸ್ನಾನ, ಕೊಳೆತ ಕಾಯಿಪಲ್ಲೆ ಊಟಕ್ಕೆ ಬಳಕೆ..!

ಈ ಸಂದ​ರ್ಭ​ದ​ಲ್ಲಿ ಗ್ರಾಪಂ ಉಪಾಧ್ಯಕ್ಷೆ ಬಸವ್ವ ಕನ್ಯಾಳ, ಸದಸ್ಯರಾದ ಬಸವ್ವ ಪುರದ, ಮಲ್ಲಪ್ಪ ಅಸುಂಡಿ, ಕಾತುನಬಿ ಮುಲ್ಲಾನವರ, ರಾಮಪ್ಪ ಹಂಡಿ, ಪವಿತ್ರ ಹೊಸಳ್ಳಿ, ಸೋಮಪ್ಪ ಅಣ್ಣಿಗೇರಿ, ಶಿವರುದ್ರಪ್ಪ ಅಂಗಡಿ, ಕಮಲವ್ವ ಮಾದರ, ಈಶಪ್ಪ ಇಟಗಿ, ಸೋಮಪ್ಪ ಪೂಜಾರ ಸೇರಿದಂತೆ ಪ್ರಮುಖರಾದ ರವಿ ದಂಡಿನ, ನಿಂಗಪ್ಪ ಮಣ್ಣೂರ, ಅರುಣ ಅಣ್ಣಿಗೇರಿ, ರಾಮನಗೌಡ ಪಾಟೀಲ, ರಾಮಣ್ಣ ಹೊಸಳ್ಳಿ ಇದ್ದರು. ಕಾರ್ಯಕ್ರಮವನ್ನು ಕೊಟ್ರೇಶ ನಡೆಸಿಕೊಟ್ಟರು. ಗ್ರಾಮದ ಪ್ರೌಢಶಾಲಾ ಮಕ್ಕಳ ನಾಡಗೀತೆ, ಪ್ರಾಥಮಿಕ ಶಾಲಾ ಮಕ್ಕಳು ಪ್ರಾರ್ಥಿಸಿದರು. ಅಡವಿ ಸೋಮಾಪುರದ ಯುವ ಕ್ರೀಡಾ ಪ್ರತಿಭೆ ಕಬಡ್ಡಿ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟದ ತಂಡಕ್ಕೆ ಆಯ್ಕೆಯಾದ ಶ್ರೀಧರ ಅವರಿಗೆ ಸಚಿವರು ಸನ್ಮಾನಿಸಿದರು.

click me!