ಅಮರೇಗೌಡ ಗೆದ್ದಿದ್ದು ಇವಿಎಂ ಮಶಿನ್‌ನಿಂದಲೇ, ನಾವು ಸೋಲನ್ನು ಸ್ವೀಕಾರ ಮಾಡಿದ್ದೇವೆ. ನಾವು ಅನುಮಾನ ವ್ಯಕ್ತಪಡಿಸಿಲ್ಲ ಎಂದ ಸಚಿವ ಸಿ. ಟಿ. ರವಿ| ಮಾನವೀಯತೆ ಇರೋರು ಯಾರೂ ಪೌರತ್ವ ಕಾಯ್ದೆಯನ್ನ ವಿರೋಧ ಮಾಡುವುದಿಲ್ಲ|
ಕೊಪ್ಪಳ(ಜ.09): ಕಾಂಗ್ರೆಸ್‌ನವರಿಗೆ ಹೆಂಡತಿ, ತಾಯಿ ಬಗ್ಗೆ ಅನುಮಾನ ವ್ಯಕ್ತಪಡಿಸುವ ಕಾಯಿಲೆ ಬಾರದಿರಲಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಜಿಲ್ಲೆಯ ಕುಷ್ಟಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರ ಇವಿಎಂ ಮೇಲೆ ಅನುಮಾನ ಇದೆ ಎಂಬ ವಿಚಾರದ ಬಗ್ಗೆ ಜಿಲ್ಲೆಯ ಗಂಗಾವತಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಯೆ ನೀಡಿದ ಸಚಿವ ಸಿ ಟಿ ರವಿ, ಅಮರೇಗೌಡ ಗೆದ್ದಿದ್ದು ಇವಿಎಂ ಮಶಿನ್‌ನಿಂದಲೇ, ನಾವು ಸೋಲನ್ನು ಸ್ವೀಕಾರ ಮಾಡಿದ್ದೇವೆ. ನಾವು ಅನುಮಾನ ವ್ಯಕ್ತಪಡಿಸಿಲ್ಲ ಎಂದು ಹೇಳುವ ಮೂಲಕ ಭಯ್ಯಾಪೂರಗೆ ತಿರುಗೇಟು ನೀಡಿದ್ದಾರೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಾನವೀಯತೆ ಇರೋರು ಯಾರೂ ಪೌರತ್ವ ಕಾಯ್ದೆಯನ್ನ ವಿರೋಧ ಮಾಡುವುದಿಲ್ಲ. ನಮಗೆ ಇತಿಹಾಸ ಗೊತ್ತಿಲ್ಲ, ಇತಿಹಾಸ ಗೊತ್ತಿದ್ದವರು ನೀವ್ಯಾಕೆ ಪೌರತ್ವ ಕಾಯ್ದೆಯನ್ನ ವಿರೋಧ ಮಾಡುತ್ತಿದ್ದೀರಾ? ಮೂರು ದೇಶದ ಆರು ಸಮುದಾಯದ ಜನರಿಗೆ ಇದು ಪೌರತ್ವ ಕೊಡುವ ಕಾಯ್ದೆಯಾಗಿದೆ. ಪೌರತ್ವ ಕೊಡುವುದಕ್ಕೆ ನೀವ್ಯಾಕೆ ವಿರೋಧ ಮಾಡ್ತೀರಿ, ಪೌರತ್ವ ಕಿತ್ತುಕೊಳ್ಳುವ ಕಾಯ್ದೆ ಅಲ್ಲ, ಪೌರತ್ವ ಕೊಡುವ ಕಾಯ್ದೆಯಾಗಿದೆ. ಭಾರತದ ವಿಭಜನೆಗೆ ಸಹಿ ಮಾಡಿದ್ದೇ ಕಾಂಗ್ರೆಸ್ ಪಕ್ಷ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಆನೆಗೊಂದಿ ಉತ್ಸವಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಗಮನಕ್ಕೆ ನಾವು ಕಾಯುತ್ತಿದ್ದೇವೆ. ಆದರೆ, ಅವರಿಗೆ ಅನಾರೋಗ್ಯ ಎಂದು ಹೇಳಿದ್ದಾರೆ. ಸಿಎಂ ಬರಬೇಕು ಅನ್ನೋದು ನಮ್ಮ ಆಪೇಕ್ಷೆಯಾಗಿದೆ. ಯಡಿಯೂರಪ್ಪ ಪ್ರವಾಸ ರದ್ದು ದುರುದ್ದೇಶ ಅಲ್ಲ, ಅನಾರೋಗ್ಯ ಅನ್ನೋ ಮಾಹಿತಿ ಇದೆ ಹೀಗಾಗಿ ಆನೆಗೊಂದಿ ಉತ್ಸವಕ್ಕೆ ಗೈರಾಗಲಿದ್ದಾರೆ ಎಂದು ಹೇಳಿದ್ದಾರೆ. ಬಿ. ಎಸ್. ಯಡಿಯೂರಪ್ಪ ಅವರು ಇಂದು ದೆಹಲಿ ಹೋಗುವುದಿಲ್ಲ, ಆದಷ್ಟು ಬೇಗ ಪೂರ್ಣ ಸಚಿವ ಸಂಪುಟ ರಚನೆ ಆಗಲಿ ಎಂದು ತಿಳಿಸಿದ್ದಾರೆ.