ಕೊರೋನಾ ರೋಗದ ತಕ್ಷಣ ನಿಯಂತ್ರಣಕ್ಕೆ ಯಾವುದೇ ರೀತಿಯ ಲಸಿಕೆ ಮತ್ತು ಔಷಧಿ ಲಭ್ಯವಿಲ್ಲ| ಸ್ವಂತ ಲಾಭ ಮತ್ತು ಹಣ ಗಳಿಕೆಗಾಗಿ ನಾವು ಸಂಶೋಧಿಸಿದ ಔಷಧಿ ಪಡೆದು ಕೊಂಡರೆ ಕೊರೋನಾ ಬರುವುದಿಲ್ಲ ಎಂದು ಪ್ರಚಾರ ಮಾಡಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ|
ವಿಜಯಪುರ(ಮಾ.16): ಕೊರೋನಾ ನಿವಾರಣೆಯ ಯಾವುದೇ ಮಾತ್ರೆ, ಔಷಧ ಇಲ್ಲಿಯವರೆಗೂ ಸಂಶೋಧನೆಯಾಗಿಲ್ಲ. ಯಾವುದೇ ರೀತಿಯ ಔಷಧ ಮಾರಾಟ ಮಾಡಿದ್ದಲ್ಲಿ ಅಂತಹವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಭಾನುವಾರ ಕೊರೋನಾ ಹಾಗೂ ಕೋವಿಡ್-19 ನಿಯಂತ್ರಣ ಕಾರ್ಯಚಟುವಟಿಕೆಗಳ ಕುರಿತು ಸಭೆ ನಡೆಸಿ ಅವರು ಮಾತನಾಡಿದರು. ಕೊರೋನಾ ರೋಗದ ತಕ್ಷಣ ನಿಯಂತ್ರಣಕ್ಕೆ ಯಾವುದೇ ರೀತಿಯ ಲಸಿಕೆ ಮತ್ತು ಔಷಧಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ತಮ್ಮ ಸ್ವಂತ ಲಾಭ ಮ ತ್ತು ಹಣ ಗಳಿಕೆಗಾ ಗಿ ನಾವು ಸಂಶೋ ಧಿಸಿದ ಔಷಧಿ ಪಡೆದು ಕೊಂಡರೆ ಕೊರೋನಾ ಬರುವುದಿಲ್ಲ ಎಂದು ಪ್ರಚಾರ ಮಾಡಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಕೊರೋನಾ ಕಾಟ: ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ವಿಶ್ವವಿಖ್ಯಾತ ಹಂಪಿ!
ಹೋಟೆಲ್‌ಗಳಲ್ಲಿರುವ ವಿದೇಶಿ ಪ್ರವಾಸಿಗರ ಕುರಿತು ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಕಡ್ಡಾಯವಾಗಿ ಸಲ್ಲಿಸಬೇಕಿದ್ದು, ಹೈರಿಸ್ಕ್ ಇರುವ ರಾಷ್ಟ್ರಗಳಿಂದ ಆಗಮಿಸುವ ವಿದೇಶಿ ಪ್ರವಾಸಿಗರ ಮಾಹಿತಿಯನ್ನು ಹೋಟೆಲ್ ಸಿಬ್ಬಂದಿ ಕಡ್ಡಾಯವಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಇದರಿಂದ ಅನೇಕ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು.
ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿ ರಾಜ್ಯ ಸರ್ಕಾರ ದೃಢ ನಿರ್ಧಾರ ಕೈಗೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ವಿವಿಧ ವಹಿವಾಟು ಬಂದ್‌ಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಆರ್ಥಿಕ ಹಾನಿಯ ಮಧ್ಯೆಯೂ ದೃಢ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕರು ಕೂಡ ಈ ದಿಸೆಯಲ್ಲಿ ಅವಶ್ಯಕ ಮುನ್ನೆಚ್ಚರಿಕೆ ಕೈಗೊಳ್ಳಬೇಕು ಎಂದು ಸೂಚಿಸಿದರು. ಕೋವಿಡ್-19 ನಿಯಂತ್ರಣಕ್ಕೆ ಸಚಿವರು ಮೆಚ್ಚುಗೆ: ವಿಜಯಪುರ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಮತ್ತು ಪ್ರವಾಸೋದ್ಯಮ ಕೇಂದ್ರವಾಗಿದ್ದು, ವಿದೇಶ ಮತ್ತು ಹೊರರಾಜ್ಯಗಳಿಂದ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದು, ಕೋವಿಡ್-19 ವಿಸ್ತಾರದ ವಿಷಮ ಪರಿಸ್ಥಿತಿಯಲ್ಲಿ ಒಂದೂ ಕರೋನಾ ಸೋಂಕಿತರು ದೃಢಗೊಂಡಿಲ್ಲದ ರೀತಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ ಜಿಲ್ಲಾಡಳಿತ ಮತ್ತು ವೈದ್ಯರ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾರಕ ಕೊರೋನಾಗೆ ವ್ಯಾಕ್ಸಿನ್ : ವಿಜ್ಞಾನಿಗಳ ತಂಡದಲ್ಲಿ ನಮ್ಮ ಕನ್ನಡಿಗ
ಜಿಲ್ಲೆಯಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾಸ್ಕ್ ಮಾರಾಟಗಾರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಿಇಒ ಗೋವಿಂದ ರೆಡ್ಡಿ, ಎಎಸ್‌ಪಿ ಡಾ.ರಾಮ ಅರಸಿದ್ಧಿ, ಅಪರ ಡಿಸಿ ಡಾ. ಔದ್ರಾಮ, ಡಿಎಚ್‌ಒ ಡಾ. ಮಹೇಂದ್ರ ಕಾಪ್ಸೆ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶರಣಪ್ಪ ಕಟ್ಟಿ, ಇಂಡಿ ಎಸಿ ಸ್ನೇಹಲ್ ಲೋಖಂಡೆ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಅಂಗನವಾಡಿಗಳಲ್ಲಿನ ತರಕಾರಿ ನಾಶ ಮಾಡಿ ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡಲಾಗಿದೆ. ಪ್ರಸ್ತುತ ಅಂಗನವಾಡಿಗಳಲ್ಲಿ ದಾಸ್ತಾನಾಗಿರುವ ತರಕಾರಿಗಳು ಒಂದು ವಾರದಲ್ಲಿ ಸಂಪೂರ್ಣ ಸತ್ವ ಕಳೆದುಕೊಂಡಿರುತ್ತವೆ. ಹೀಗಾಗಿ ಅಂಗನವಾಡಿ ಕೇಂದ್ರಗಳ ಪುನಾರಂಭಕ್ಕೂ ಮುನ್ನವೇ ಸತ್ವರಹಿತ ಎಲ್ಲ ವಿಧದ ತರಕಾರಿಗಳನ್ನು ಕಡ್ಡಾಯವಾಗಿ ನಾಶ ಮಾಡಬೇಕು ಎಂದು ಸಚಿವ ಸಿ.ಸಿ. ಪಾಟೀಲ ನಿರ್ದೇಶನ ನೀಡಿದರು.
ವೈದ್ಯರು 24X7 ಸೇವೆ ಸಲ್ಲಿಸಲಿ ಇಂತಹ ಕಷ್ಟದ ಸಂದರ್ಭದಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿದ್ದು, ಸಮಯದ ಬಗ್ಗೆ ಲೆಕ್ಕ ಹಾಕಬಾರದು. 8 ರಿಂದ 10 ದಿನ ನಿಮ್ಮ ಅವಶ್ಯಕತೆ ತುಂಬಾ ಇದೆ. ವೈದ್ಯರು ಕೋವಿಡ್ -19 ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ತುರ್ತು ಅವಶ್ಯ ವಾಗಿದೆ. ಕುಟುಂಬಗಳನ್ನು ಹೊಂದಿರುವಂತಹ ವೈದ್ಯರು ಸಹ
ಮಾರಕ ಕೊರೋನಾಗೆ ವ್ಯಾಕ್ಸಿನ್ : ವಿಜ್ಞಾನಿಗಳ ತಂಡದಲ್ಲಿ ನಮ್ಮ ಕನ್ನಡಿಗಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ 24X7ಸೇವೆ ಸಲ್ಲಿಸಬೇಕು ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.
ವಿಜಯಪುರ ಅಥವಾ ಕಲಬುರಗಿಅಲ್ಲಿ ಲ್ಯಾಬ್ ಕೋವಿಡ್ -19 ಸೋಂಕಿತರ ತುರ್ತು ಚಿಕಿತ್ಸೆಗಾಗಿ ವಿಜಯಪುರ ಅಥವಾ ಕಲಬುರಗಿಯಲ್ಲಿ ಲ್ಯಾಬ್ ಸ್ಥಾಪನೆ ಕುರಿತಂತೆ ಕೂಡಲೇ ಆರೋಗ್ಯ ಸಚಿವರನ್ನು ಭೇಟಿ ಮಾಡಿ, ಎಲ್ಲ ಮೂಲ ಸೌಕರ್ಯಗಳನ್ನೊಳಗೊಂಡ ಲ್ಯಾಬ್ ಸ್ಥಾಪಿಸಲು ಸಮಾಲೋಚನೆ ನಡೆಸುವೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.
ನಾಲ್ವರ ಪರೀಕ್ಷಾ ವರದಿಯೂ ನೆಗಟಿವ್ ಬಂದಿದೆ: ಜಿಲ್ಲಾಧಿಕಾರಿ
ವಿದೇಶ ಪ್ರವಾಸಕ್ಕೆ ಹೋಗಿ ಮರಳಿ ಬಂದ ಒಟ್ಟು 76 ಜನರನ್ನು ಗುರುತಿಸಲಾಗಿದ್ದು, ಅದರಲ್ಲಿ 62 ಪ್ರಕರಣಗಳಲ್ಲಿ ಕೊರೋನಾ, ಕೋವಿಡ್-19 ರೋಗ ಲಕ್ಷಣಗಳು ಕಂಡು ಬಂದಿಲ್ಲ, ಅದೇ ತೆರನಾಗಿ ನಾಲ್ಕು ವ್ಯಕ್ತಿಗಳಲ್ಲಿ ಕೆಮ್ಮು, ನೆಗಡಿಯಂತಹ ಲಕ್ಷಣಗಳು ಗೋಚರಿಸಿದ್ದು, ಅವರ ಥ್ರೋಟ್ ಸ್ವ್ಯಾಬ್ ಪರೀಕ್ಷೆ ನಡೆಸಲಾಗಿದೆ. ಆ ವರದಿಯೂ ನೆಗೆಟಿವ್ ಆಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು. ಕೊರೋನಾ ಸೋಂಕು ಹೊಂದಿರುವ ನಾಲ್ವರ ಗಂಟಲು ಸ್ವ್ಯಾಬ್‌ಗಳನ್ನು ಲ್ಯಾಬ್‌ಗಳಿಗೆ ಕಳುಹಿಸಲಾಗಿದ್ದು, ಈವರೆಗೆ ಲಭಿಸಿರುವ ವೈದ್ಯಕೀಯ ವರದಿಯನ್ವಯ ನಾಲ್ವರ ಪರೀಕ್ಷಾ ವರದಿಯಲ್ಲಿ ನೆಗಟಿವ್ ಬಂದಿದೆ ಎಂದರು.
ವಿದೇಶದಿಂದ ವಿಜಯಪುರ ಜಿಲ್ಲೆಗೆ ಮರಳಿರುವವರಲ್ಲಿ ಬಾಗೇವಾಡಿ ಗ್ರಾಮಾಂತರಕ್ಕೆ ವಿದೇಶದಿಂದ 12 ಜನರು ಮರಳಿದ್ದಾರೆ. ಮುದ್ದೇಬಿಹಾಳ ಗ್ರಾಮಾಂತರಕ್ಕೆ 37 ಜನ ಹಾಗೂ ನ್ಯೂಜಿಲೆಂಡ್ ದಿಂದ 3 ಜನ ಮರಳಿದ್ದಾರೆ. ಸಿಂದಗಿ ಗ್ರಾಮಾಂತರಕ್ಕೆ 9 ಜನ ಮರಳಿದ್ದಾರೆ. ವಿಜಯಪುರ ನಗರಕ್ಕೆ 17 ಜನ ಮರಳಿದ್ದಾರೆ. ಚೀನಾ ಮತ್ತು ಊರೂ ಮ್ಕಿನಿಂದ ಒಬ್ಬರು, ರೋಮ್, ಮುಮಿಸಿನ್ ದಿಂದ ತಲಾ ಒಬ್ಬರು ಮರಳಿದ್ದಾರೆ. ಅದರಂತೆ ಬ್ಯಾಂಕಾಕ್, ಡ್ಯಾನ್ ಮೂಸಂಗ್-2, ಇಂಡೋ ನೇಶಿಯಾ -2, ಫ್ರಾನ್ಸ್ (ಪ್ಯಾರಿಸ್)-2, ಜರ್ಮನ್, ಫ್ರ್ಯಾಂಕ್‌ಫರ್ಟ-2, ಬೆಲ್ಜಿಯಂ-2, ಸೌದಿ ಅರೇಬಿಯಾ-9, ದುಬೈ-17, ಸೌದಿ ಅರೇಬಿಯಾ ಮೆಕ್ಕಾ ಮದೀನಾದಿಂದ -43, ನೈಜೇರಿಯಾ-1, ಹುನಗುಂದ ತಾಲೂಕಿನಿಂದ ಇಬ್ಬರು ಸೇರಿದಂತೆ ಒಟ್ಟು 76 ಜನ ಜಿಲ್ಲೆಗೆ ಬಂದಿರುವುದು ದೃಢಪಡಿಸಲಾಗಿದೆ. ಈ ಎಲ್ಲರ ಬಗ್ಗೆ ಸೂಕ್ತ ನಿಗಾಇಡಲಾಗಿದೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆ, ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯ, ಅಲ್-ಅಮೀನ್ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ 10 ಹಾಸಿಗೆಗಳುಳ್ಳ ಪ್ರತ್ಯೇಕ ಐಸ್ಯೋಲೆಷನ್ ವಾರ್ಡ್ ತೆರೆಯಲಾಗಿದೆ. ವಿಜಯಪುರ ನಗರದ ಜಿಲ್ಲಾಸ್ಪತ್ರೆಯಲ್ಲಿ 20 ಬೆಡ್‌ಗಳು, ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜಿಲ್ಲಾ ತರಬೇತಿ ಕೇಂದ್ರದಲ್ಲಿ 25 ಬೆಡ್‌ಗಳು ಅಲ್ ಆಮೀನ್ ಮತ್ತು ಬಿಎಲ್ ಡಿಇ ಆಸ್ಪತ್ರೆಗಳಲ್ಲಿ ತಲಾ ಹತ್ತು ಬೆಡ್‌ಗಳು ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ 25 ಬೆಡ್‌ಗಳು ಜಿಲ್ಲೆಯ 4 ತಾಲೂಕಾಸ್ಪತ್ರೆಗಳಲ್ಲಿ ತಲಾ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಡಿಸಿ ತಿಳಿಸಿದರು.