500ಕ್ಕೂ ಹೆಚ್ಚು ಅಡಕೆ ಸಸಿ, ಬಾಳೆ ಕಡಿದು ಹಾಕಿದ ದುರುಳರು

Kannadaprabha News   | Asianet News
Published : Mar 16, 2020, 11:50 AM ISTUpdated : Mar 16, 2020, 11:52 AM IST
500ಕ್ಕೂ ಹೆಚ್ಚು ಅಡಕೆ ಸಸಿ, ಬಾಳೆ ಕಡಿದು ಹಾಕಿದ ದುರುಳರು

ಸಾರಾಂಶ

ತುಮಕೂರು ಜಿಲ್ಲೆಯಲ್ಲಿ ಬೆಳೆಸ ಫಸಲು ಕತ್ತರಿಸುವ ಪ್ರಕರಣ ಇದೀಗ ಹೆಚ್ಚಾಗಿದ್ದು ಮತ್ತೊಂದೆಡೆ 500ಕ್ಕೂ ಹೆಚ್ಚು ಹಿಡಗಳನ್ನು ಕತ್ತರಿಸಲಾಗಿದೆ. 

ತುರುವೇಕೆರೆ [ಮಾ.16]: ಬಾಣಸಂದ್ರ ರಸ್ತೆಯ ಮುಕ್ತಿಧಾಮದ ಬಳಿ ಇರುವ ಕೀರ್ತಿಕುಮಾರ್‌ ಎಂಬುವವರ ತೋಟದಲ್ಲಿ ಸುಮಾರು 2 ವರ್ಷಗಳಿಂದ ಬೆಳೆಸಲಾಗಿದ್ದ ಐದು ನೂರಕ್ಕೂ ಹೆಚ್ಚಿನ ಅಡಕೆ ಸಸಿಗಳನ್ನು ಕತ್ತರಿಸಿ ಹಾಕಲಾಗಿದೆ. 

ಹತ್ತಾರು ಬಾಳೆ ಗಿಡಗಳು, ತೋಟಕ್ಕೆ ಹಾಕಲಾಗಿದ್ದ ಹನಿ ನೀರಾವರಿ ಉಪಕರಣಗಳು, ಪೈಪುಗಳು, ವಾಟರ್‌ ಟ್ಯಾಂಕ್‌ ಅನ್ನು ಕಡಿದು ಹಾಳು ಮಾಡಲಾಗಿದೆ. 

ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ

ಅಲ್ಲದೇ ತೋಟದಲ್ಲಿ ಇಡಲಾಗಿದ್ದ ಒಂದು ಟ್ಯಾಂಕ್‌, ಪೈಪುಗಳನ್ನು ದುಷ್ಕರ್ಮಿಗಳು ಕದ್ದಿದ್ದಾರೆ. ಕೀರ್ತಿ ಕುಮಾರ್‌ ಸ್ಥಳೀಯ ಪೋಲಿಸರಿಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಅನುಮಾನಾಸ್ಪದ ವ್ಯಕ್ತಿಗಳ ಕುರಿತೂ ಸಹ ಕೀರ್ತಿಕುಮಾರ್‌ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

PREV
click me!

Recommended Stories

ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ