ಡಬಲ್‌ ಎಂಜಿನ್‌ ಸರ್ಕಾರದಿಂದ ದಾಹ ಮುಕ್ತ ರಾಜ್ಯ: ಸಚಿವ ಭೈರತಿ ಬಸವರಾಜ್

By Kannadaprabha News  |  First Published Mar 19, 2023, 9:01 PM IST

ಕರ್ನಾಟಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಲ್ಲದೆ ದಾಹ ಮುಕ್ತ ರಾಜ್ಯವಾಗಿಲು ಡಬಲ್‌ ಇಂಜಿನ್‌ ಸರಕಾರದಿಂದ ಮಾತ್ರ ಸಾಧ್ಯ. ಪ್ರತಿ ಮನೆ ಮನೆಗೂ ಶುದ್ಧ ಕುಡಿಯುವ ನೀರನ್ನು ಕಲ್ಪಿಸುವುದೇ ನಮ್ಮ ಸಂಕಲ್ಪವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು. 

Minister Byrati Basavaraj Talks Over Double Engine Government At Yadgir gvd

ಸುರಪುರ (ಮಾ.19): ಕರ್ನಾಟಕ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವುದಲ್ಲದೆ ದಾಹ ಮುಕ್ತ ರಾಜ್ಯವಾಗಿಲು ಡಬಲ್‌ ಇಂಜಿನ್‌ ಸರಕಾರದಿಂದ ಮಾತ್ರ ಸಾಧ್ಯ. ಪ್ರತಿ ಮನೆ ಮನೆಗೂ ಶುದ್ಧ ಕುಡಿಯುವ ನೀರನ್ನು ಕಲ್ಪಿಸುವುದೇ ನಮ್ಮ ಸಂಕಲ್ಪವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು. ನಗರದಲ್ಲಿ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ಬಹುಕೋಟಿ ರು.ಗಳ ವೆಚ್ಚದ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ಹಾಗೂ ದೇವತ್ಕಲ್‌, ಏದಲಭಾವಿ, ಬೈರಿಮಡ್ಡಿ, ಕೆ. ತಳ್ಳಳ್ಳಿ ಏತನೀರಾವರಿ ಯೋಜನೆ, ತಿಂಥಣಿ ಬ್ರಿಡ್ಜ್‌ ಕಂ ಬ್ಯಾರೆಜ್‌ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ನೇರವೇರಿಸಿ ಅವರು ಮಾತನಾಡಿದರು.

ನಾರಾಯಣಪುರದಲ್ಲಿ ಬಸವಸಾಗರ ಜಲಾಶಯ ಅಣೆಕಟ್ಟಿದ್ದರೂ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಸಲು ಸಾಧ್ಯವಾಗಿಲ್ಲ. ದೇವತ್ಕಲ್‌, ಏದಲಭಾವಿ, ಕೆ. ತಳ್ಳಳ್ಳಿಯಲ್ಲಿ ಏತ ನೀರಾವರಿ ಯೋಜನೆಗಳನ್ನು ಜಾರಿ ಹಾಗೂ ಬೈರಿಮಡ್ಡಿ ಕೆರೆಯ ಫೀಡರ್‌ ಕಾಲುವೆ ಮೂಲಕ 56 ಸಾವಿರಕ್ಕಿಂತಲೂ ಹೆಚ್ಚು ಎಕರೆ ಜಮೀನುಗಳಿಗೆ ನೀರು ಒದಗಲಿದೆ. ಈ ಭಾಗದ ಭೂಮಿಯನ್ನು ಶಾಸಕ ರಾಜೂಗೌಡ ಹಸಿರನ್ನಾಗಿಸಲಿದ್ದಾರೆ ಎಂದು ಹೇಳಿದರು. ಬಿಜೆಪಿ ನೇತೃತ್ವದ ಸರಕಾರ ರಾಜ್ಯದ ಉದ್ದಗಲಕ್ಕೂ ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿದೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಈ ಭಾಗದ ನೀರಿನ ಬವಣೆ ನೀಗಿಸಿದೆ. 

Tap to resize

Latest Videos

ಅಪ್ಪ-ಮಗ ಬರೀ ತರ್ಲೆ, ರೌಡಿಸಂ ಮಾಡಸ್ತಾರೆ: ಸಚಿವ ಸೋಮಣ್ಣ

ಹಲವು ವರ್ಷಗಳಿಂದ ಸುರಪುರ ನಗರದ ನಿವಾಸಿಗಳಿದ್ದ ನೀರಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ಶಾಸಕರ ಶ್ರಮ ಮಹತ್ವದ್ದಾಗಿದೆ. ಇಂಥಹ ಶಾಸಕರನ್ನು ತಾವುಗಳು ಕೈ ಬಿಡದೆ, ಮತ್ತೊಮ್ಮೆ ಆಯ್ಕೆ ಮಾಡಿ ಕಳಿಸಬೇಕೆಂದು ಮನವಿ ಮಾಡಿದರು. ಶಾಸಕ ನರಸಿಂಹ ನಾಯಕ (ರಾಜೂಗೌಡ) ಮಾತನಾಡಿ, ಕಳೆದೆರಡು ಬಾರಿ ಶಾಸಕನಾದ ಸಂದರ್ಭದಲ್ಲಿ ಇಂಥಹ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ತಾಯಂದಿರ ಕಷ್ಟಅರಿತು ನೀರಿನ ಸಮಸ್ಯೆ ನೀಗಿಸಿದ್ದೇನೆ. ರಾಜ್ಯದಲ್ಲಿಯೇ ನೂತನ ತಂತ್ರಜ್ಞಾನ ಬಳಸಿ ಮುಂದಿನ 25 ವರ್ಷಗಳ ಜನಸಂಖ್ಯೆಗನುಗುಣವಾಗಿ, ಬಹುಕೋಟಿ ರು.ಗಳ ವೆಚ್ಚದಲ್ಲಿ ಕಾಮಗಾರಿ ನಿರ್ಮಾಣ ಮಾಡಿ ಮನೆ ಮನೆಗೂ ನೀರು ಹರಿಸುತ್ತಿದ್ದೇವೆ ಎಂದು ತಿಳಿಸಿದರು.

ಕ್ಷೇತ್ರದ ಕಾಲುವೆಯ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ಒದಗಿಸುವ ಉದ್ದೇಶದಿಂದ ದೇವತ್ಕಲ್‌, ಕೆ. ತಳ್ಳಳ್ಳಿ, ಏದಲಭಾವಿ, ಏತ ನೀರಾವರಿ ಯೋಜನೆಗಳು, ಬೈರಿಮಡ್ಡಿ ಕೆರೆ ಫೀಡರ್‌ ಕಾಲುವೆ ಮೂಲಕ 56,355 ಎಕರೆ ಕೃಷಿ ಭೂಮಿಗೆ ನೀರಾವರಿ ಪೂರೈಸಲಾಗುವುದು ಎಂದರು. ಶುದ್ಧ ಕುಡಿರುವ ನೀರು ಪೂರೈಸಿ ಹೆಚ್ಚಿನ ಕರ ವಸೂಲಿ ಮಾಡಲಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. 56 ರು.ಗಳ ವೆಚ್ಚದಲ್ಲಿ 8 ಸಾವಿರ ಲೀಟರ್‌, 112 ರು.ಗಳಿಗೆ 16 ಸಾವಿರ ಲೀಟರ್‌ ಕುಡಿಯುವ ನೀರು ಒದಗಿಸಲಿದ್ದೇವೆ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದರು.

ನಬಾರ್ಡ್‌ ಯೋಜನೆ ಮೂಲಕ 800 ಮಹಿಳಾ ಸ್ವ ಸಹಾಯ ಸಂಘಗಳಿಗೆ ಒಂದು ಲಕ್ಷ ರು.ಗಳಂತೆ ಬಡ್ಡಿ ರಹಿತ ಸಾಲ ನೀಡುವ ಮೂಲಕ ಮಹಿಳೆಯರನ್ನು ಸ್ವಾವಲಂಬಿಯಾಗಿಸಲಾಗುತ್ತಿದೆ. ರಂಗಂಪೇಟೆಯ 72 ಮಹಿಳಾ ಸಂಘಗಳಿಗೆ ಸಾಂಕೇತಿಕವಾಗಿ 1 ಲಕ್ಷ ಮೊತ್ತದ ಚೆಕ್‌ ವಿತರಿಸಲಾಗುತ್ತಿದೆ
-ರಾಜೂಗೌಡ, ಶಾಸಕ, ಸುರಪುರ

ಕರ್ನಾಟಕ ಸಂಘ ಕತಾರ್ ವತಿಯಿಂದ 'ಕಬ್ಜ' ಚಿತ್ರದ ವಿಶೇಷ ಪ್ರದರ್ಶನ

ಹಿಂದುಳಿದ ಕಲ್ಯಾಣ ಕರ್ನಾಟಕದ ಭಾಗದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳ ಮೂಲ ಸೌಕರ್ಯಕ್ಕಾಗಿ ಹಾಗೂ ಕುಡಿಯುವ ನೀರು ಒದಗಿಸಲು 2 ಸಾವಿರ ಕೋಟಿ ರು.ಗಳ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಶುದ್ಧ ಕುಡಿಯುವ ನೀರು ಪ್ರತಿ ಮನೆಮನೆಗೂ ದೊರೆಯಲಿದೆ
-ಭೈರತಿ ಬಸವರಾಜ, ನಗರಾಭಿವೃದ್ಧಿ ಸಚಿವ

vuukle one pixel image
click me!
vuukle one pixel image vuukle one pixel image