ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರಿಗೂ 1-2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೆಟ್ರೋ ಸೌಲಭ್ಯ!

By Suvarna News  |  First Published Mar 19, 2023, 8:38 PM IST

ಭವಿಷ್ಯದಲ್ಲಿ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರು ತಮ್ಮ ಕೆಲಸದ ಸ್ಥಳ ಅಥವಾ ಮನೆಯಿಂದ 1-2 ಕಿಲೋಮೀಟರ್ ಒಳಗೆ ಮೆಟ್ರೋ ಸೌಲಭ್ಯ ಪಡೆಯಲು ಸಾಧ್ಯ ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ.


ಬೆಂಗಳೂರು (ಮಾ.19): ಭವಿಷ್ಯದಲ್ಲಿ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರು ತಮ್ಮ ಕೆಲಸದ ಸ್ಥಳ ಅಥವಾ ಮನೆಯಿಂದ 1-2 ಕಿಲೋಮೀಟರ್ ಒಳಗೆ ಮೆಟ್ರೋ ಸೌಲಭ್ಯ ಪಡೆಯಲು ಸಾಧ್ಯ ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ. ಬೆಂಗಳೂರು ಮೆಟ್ರೋ ರೈಲು ಯೋಜನೆಯ ಮೂರನೇ ಹಂತದ ಅಡಿಯಲ್ಲಿ ನಾಲ್ಕು ಹೊಸ ಮೆಟ್ರೋ ಕಾರಿಡಾರ್‌ಗಳನ್ನು ಪರಿಚಯಿಸುವುದಾಗಿ ಸರ್ಕಾರ ಹೇಳಿದೆ.

ಸರ್ಕಾರದ ಪ್ರಕಾರ, ವೈಟ್‌ಫೀಲ್ಡ್ - ಹೊಸಕೋಟೆ, ಬನ್ನೇರುಘಟ್ಟ - ಜಿಗಣಿ, ಎಂಜಿ ರಸ್ತೆ - ಹೋಪ್ ಫಾರ್ಮ್ ಜಂಕ್ಷನ್ ಮತ್ತು ಬೆಂಗಳೂರು ವಿಮಾನ ನಿಲ್ದಾಣ-ನಾಗವಾರ ನಡುವಿನ ಮೆಟ್ರೋ ಮಾರ್ಗಗಳನ್ನು ಮೆಟ್ರೋ ಯೋಜನೆಯ ಮೂರನೇ ಹಂತದಲ್ಲಿ ಅಭಿವೃದ್ಧಿಪಡಿಸಲಾಗುವುದು. 16,328 ಕೋಟಿ ವೆಚ್ದಲ್ಲಿ ಈ ಮೆಟ್ರೋ ಮಾರ್ಗಗಳನ್ನು ನಿರ್ಮಿಸಲಾಗುವುದು ಎಂದು ಸರ್ಕಾರ ಹೇಳಿದೆ.

Latest Videos

undefined

ಈ ಮಧ್ಯೆ, ಬಹು ನಿರೀಕ್ಷಿತ ಕೆಆರ್ ಪುರಂ - ವೈಟ್‌ಫೀಲ್ಡ್ ಮೆಟ್ರೋ ಮಾರ್ಗದ ಕಾರ್ಯಾಚರಣೆಗಳು ಮಾರ್ಚ್ 25ರ ವೇಳೆಗೆ ಪ್ರಾರಂಭವಾಗಲಿದ್ದು, ಇದು ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಮೆಟ್ರೋ ಮಾರ್ಗವು ಸಾವಿರಾರು ಐಟಿ ಉದ್ಯೋಗಿಗಳಿಗೆ ಯಾವುದೇ ಟ್ರಾಫಿಕ್ ಜಾಮ್ ಅನ್ನು ಎದುರಿಸದೆ ಕೆಲಸಕ್ಕೆ ಹೋಗಲು ಸಹಾಯ ಮಾಡುತ್ತದೆ. ಕೆಆರ್ ಪುರಂ ಮತ್ತು ವೈಟ್‌ಫೀಲ್ಡ್ ನಡುವಿನ ಎಲ್ಲಾ 12 ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತಾ ಮಾನದಂಡಗಳನ್ನು ಬಿಎಂಆರ್‌ಸಿಎಲ್ ಅಧಿಕಾರಿಗಳು ಮತ್ತು ಸಿಎಂಆರ್‌ಎಸ್ ತಂಡ ಪರಿಶೀಲಿಸಿತು. ಕೆಆರ್ ಪುರಂ ನಿಲ್ದಾಣದಿಂದ 1.5 ಕಿಮೀ ದೂರದಲ್ಲಿರುವ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ.

ವೈಟ್‌ಫೀಲ್ಡ್ ಬಳಿ ಇರುವ ಟೆಕ್ ಪಾರ್ಕ್‌ನಿಂದ ಮೆಟ್ರೋ ಮಾರ್ಗಕ್ಕೆ ನೇರ ಪ್ರವೇಶಕ್ಕಾಗಿ ಬಿಎಂಆರ್‌ಸಿಎಲ್ ಮತ್ತು ಐಟಿಪಿಎಲ್ (ಇನ್‌ಫರ್ಮೇಷನ್ ಟೆಕ್ನಾಲಜಿ ಪಾರ್ಕ್ ಲಿಮಿಟೆಡ್) ನಡುವೆ  ಒಪ್ಪಂದ ಪತ್ರಕ್ಕೆ ಸಹಿ ಮಾಡಲಾಗಿದೆ. ಈ ಹೊಸ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ಪ್ರಾರಂಭವಾದಾಗ ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣ ಮತ್ತು ಟೆಕ್ ಪಾರ್ಕ್ ಎರಡನ್ನೂ ಸಂಪರ್ಕಿಸುವ ವಾಕ್‌ವೇ ಅನ್ನು  ಕೂಡ ಬಿಎಂಆರ್‌ಸಿಎಲ್ ಪ್ರಕಟಿಸಿದೆ.

ಪ್ರಸ್ತಾವನೆಯ ಪ್ರಕಾರ, ಹೊಸ ಮೆಟ್ರೋ ಮಾರ್ಗ ನಿರ್ಮಾಣದ ನಕ್ಷೆ ಇಂತಿದೆ. (ಎ) ಹಳೆ ವಿಮಾನ ನಿಲ್ದಾಣ ರಸ್ತೆ, ಎಂಜಿ ರಸ್ತೆಯಿಂದ ಮಾರತಹಳ್ಳಿ ಮತ್ತು ವೈಟ್‌ಫೀಲ್ಡ್/ಐಟಿ ಕಾರಿಡಾರ್ ಮೂಲಕ ಹೋಪ್ ಫಾರ್ಮ್, ಮತ್ತು (ಬಿ) ನಾಗವಾರ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಥಣಿಸಂದ್ರ/ ಭಾರತೀಯ ನಗರ. ಇನ್ನು  ವಿಸ್ತರಿಸಲಾಗುವ ಮೆಟ್ರೋ ಎಂದರೆ  - (ಎ) ಕಾಟಮನಲ್ಲೂರು/ಹೊಸಕೋಟೆಯ ವಿಸ್ತರಣೆ, ಮತ್ತು (ಬಿ) ಬನ್ನೇರುಘಟ್ಟದಿಂದ ಜಿಗಣಿಯವರೆಗೆ ವಿಸ್ತರಣೆ.

ಸಿಲ್ಕ್‌ ಬೋರ್ಡ್ ಟು ಹೆಬ್ಬಾಳ ರಸ್ತೆಯ ಟ್ರಾಫಿಕ್‌ಗೆ ಮುಕ್ತಿ: ಸರ್ವಿಸ್‌ ರೋಡ್‌ ಸಂಪೂರ್ಣ ಬಳಕೆ

ಈ 13 ಕಿಲೋಮೀಟರ್ ಮೆಟ್ರೋ ಮಾರ್ಗದ 12 ನಿಲ್ದಾಣಗಳು ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯ ಸಾಯಿ ಆಸ್ಪತ್ರೆ, ನಲ್ಲೂರು ಹಳ್ಳಿ, ಕುಂದನಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ಪಾಳ್ಯ, ಮಹದೇವಪುರ ಮತ್ತು ಕೆಆರ್ ಪುರಂ ನಡುವೆ ಇರಲಿದೆ.

ಚಾಲಕ ರಹಿತ ಮೆಟ್ರೋ ಸೇವೆಯಿಂದ ಕ್ರಾಂತಿಕಾರಕ ಬದಲಾವಣೆ ತರಲಿದೆ ಚೆನ್ನೈ ಮೆಟ್ರೋ!

ವೈಟ್‌ಫೀಲ್ಡ್ ಬಳಿ ಇರುವ ಟೆಕ್ ಪಾರ್ಕ್‌ನಿಂದ ಮೆಟ್ರೋ ಮಾರ್ಗಕ್ಕೆ ನೇರ ಪ್ರವೇಶಕ್ಕಾಗಿ ಬಿಎಂಆರ್‌ಸಿಎಲ್ ಮತ್ತು ಐಟಿಪಿಎಲ್ (ಇನ್‌ಫರ್ಮೇಷನ್ ಟೆಕ್ನಾಲಜಿ ಪಾರ್ಕ್ ಲಿಮಿಟೆಡ್) ನಡುವೆ  ಒಪ್ಪಂದ ಪತ್ರಕ್ಕೆ ಸಹಿ ಮಾಡಲಾಗಿದೆ. ಈ ಹೊಸ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ಪ್ರಾರಂಭವಾದಾಗ ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣ ಮತ್ತು ಟೆಕ್ ಪಾರ್ಕ್ ಎರಡನ್ನೂ ಸಂಪರ್ಕಿಸುವ ವಾಕ್‌ವೇ ಅನ್ನು  ಕೂಡ ಬಿಎಂಆರ್‌ಸಿಎಲ್ ಪ್ರಕಟಿಸಿದೆ.

click me!