ಕೋಲಾರ ಚಾಕು ಇರಿತದಿಂದ ಗಾಯಗೊಂಡು ಮಾಲೂರಿನ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಆರ್‌ಎಸ್‌ಎಸ್ ಮುಖಂಡನನ್ನು ಸಚಿವ ಮುನಿರತ್ನ, ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜು ಹಾಗೂ ಸಂಸದ ಮುನಿಸ್ವಾಮಿ ಭೇಟಿಯಾದರು.
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್
ಕೋಲಾರ (ಆ.7): ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣಗಳು ನಡೆಯುತ್ತಿರುವಾಗಲೇ ಕೋಲಾರದಲ್ಲೂ ಆರ್.ಎಸ್.ಎಸ್ ಮುಖಂಡನಿಗೆ ಚಾಕು ಇರಿತದಿಂದ ನಡೆದಿದೆ. ಕ್ಷುಲಕ ಗಲಾಟೆಯಿಂದ ಜಗಳ ನಡೆದು ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಇಂದು ಆರ್ ಎಸ್ ಎಸ್ ಕಾರ್ಯಕರ್ತನ ಭೇಟಿ ಮಾಡಿದ ಸಚಿವರು ಮತ್ತು ಸಂಸದರು ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಹೀಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರ್ ಎಸ್ ಎಸ್ ಮುಖಂಡ, ಮತ್ತೊಂದಡೆ ಮುಖಂಡನ ಆರೋಗ್ಯ ವಿಚಾರಿಸಿಸುತ್ತಿರುವ ಸಚಿವರು ಮತ್ತು ಸಂಸದರು, ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದಲ್ಲಿ. ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಮಾರಿಕಾಂಭ ದೇವಾಲಯದ ಬಳಿಯಲ್ಲಿ ಆಗಸ್ಟ್ 6 ರ ಶನಿವಾರ ಆರ್.ಎಸ್.ಎಸ್ ಜಿಲ್ಲಾ ಶಾರೀರಿಕ್ ಪ್ರಮುಖ್ ರವಿ ಎಂಬುವರ ಸ್ಟೀಲ್ ಅಂಗಡಿ ಎದುರು ಇಬ್ಬರು ಮುಸ್ಲಿಂ ವ್ಯಕ್ತಿಗಳು ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದಾಗ, ರವಿ ಅವರು ಜಗಳ ಬಿಡಿಸಲು ಹೋದ ಸಂದರ್ಭದಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳು ರವಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಚಾಕು ಇರಿದು ಪರಾರಿಯಾಗಿದರು.
ಚಾಕು ಇರಿತದಿಂದ ಗಾಯಗೊಂಡು ರವಿ ಅವರು ಮಾಲೂರಿನ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ವಿಷಯ ತಿಳಿದು ಇಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜು ಹಾಗೂ ಸಂಸದ ಮುನಿಸ್ವಾಮಿ ಬೇಟಿ ನೀಡಿ ಆರ್ ಎಸ್ ಎಸ್ ಮುಂಖಡ ರವಿ ಅವರ ಆರೋಗ್ಯ ವಿಚಾರಿಸಿ, ದೈರ್ಯ ಹೇಳಿದರು. ಇನ್ನು ಕೃತ್ಯವೆಸಗಿದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ನಡೆಸಲಾಗುವುದೆಂದು ಸಚಿವರು ತಿಳಿಸಿದರು.
ಇನ್ನು ಆರ್ ಎಸ್ ಎಸ್ ಮುಖಂಡ ರವಿಗೆ ಚಾಕು ಇರಿತದಿಂದ ನಿನ್ನೆ ರಾತ್ರಿ ಪಟ್ಟಣದಲ್ಲಿ ಕೆಲ ಕಾಲ ಉದ್ರಿಕ್ತ ವಾದ ವಾತಾವರಣ ನಿರ್ಮಾಣವಾಗಿತ್ತು. ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ನಿನ್ನೆ ರಾತ್ರಿ 10:30 ರವರೆಗೆ ಹಿಂದೂ ಸಂಘಟನೆಯ ಮುಖಂಡರು ಮಾಲೂರಿನ ಪೊಲೀಸ ಠಾಣೆ ಮುಂದೆ ಜಮಾಯಿಸಿದರು. ರವಿ ಮೇಲೆ ಉದ್ದೇಶ ಪೂರ್ವಕವಾಗಿ ಹಲ್ಲೆ ನಡೆದಿದ್ದು ಆರೋಪಿಗಳನ್ನು ಬಂಧಿಸಿ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇನ್ನು ಪೊಲೀಸರು ನಿನ್ನೆಯ ಕಾರ್ಯಪ್ರವೃತ್ತರಾಗಿ ಓರ್ವ ಆರೋಪಿ ಸೈಯ್ಯದ್ ವಾಸೀಂ ಎಂಬುವನನ್ನು ಬಂಧಿಸಿದ್ದಾರೆ.
Breaking ಗಲಾಟೆ ಬಿಡಿಸಲು ಹೋದ RSS ಮುಖಂಡನಿಗೆ ಚಾಕು ಇರಿತ, ಬಿಜೆಪಿಯಿಂದ ಪ್ರತಿಭಟನೆ
ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇನ್ನು ಹಲ್ಲೆಯ ಕುರಿತು ಜಿಲ್ಲಾ ವರಿಷ್ಠಾಧಿಕಾರಿ ಡಿ.ದೇವರಾಜ್ ನೇತೃತ್ವದಲ್ಲಿ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.ಹಲ್ಲೆ ಉದ್ದೇಶ ಪೂರ್ವಕವಾಗಿ ನಡೆದಿದ್ದೀಯಾ ಅಥವಾ ಹಲ್ಲೆಯ ಹಿಂದೆ ಹಳೇ ದ್ವೇಷ ಇದ್ದೀಯಾ ಎನ್ನುವ ಕುರಿತು ಪೊಲೀಸರು ಆರೋಪಿಗಳ ಕುರಿತು ಸಮಗ್ರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಕೋಲಾರ: ಆರೆಸ್ಸೆಸ್ ಮುಖಂಡನ ಮೇಲೆ ಹಲ್ಲೆ, ಕೊಲೆಗೆ ಯತ್ನ
ಒಟ್ಟಾರೆ ರಾಜ್ಯದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಕೊಲೆಗಳು ಹಾಗೂ ಹಲ್ಲೆಗಳು ನಡೆಯುತ್ತಿದ್ದು, ಕೋಲಾರದಲ್ಲಿ ಮತ್ತೊಂದು ಹಿಂದೂ ಸಂಘಟನೆ ಮುಖಂಡನ ಮೇಲೆ ಹಲ್ಲೆಯಾಗಿರೋದು ಆತಂಕ ಮೂಡಿಸಿದ್ದು ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆಯಾಗಲಿದೆ ಎನ್ನುವ ಮಾತು ಜನ್ರಲ್ಲಿ ಕೇಳಿ ಬರುತ್ತಿದೆ.