ಬೇಡಿಕೆ ಮುಂದಿಟ್ಟುಕೊಂಡು ಹಳೇ ಸ್ನೇಹಿತ ಸಚಿವ ಬೊಮ್ಮಾಯಿ ಭೇಟಿ ಮಾಡಿದ ರೇವಣ್ಣ

By Kannadaprabha News  |  First Published Jun 18, 2021, 2:25 PM IST
  • ಸಚಿವ ಬೊಮ್ಮಾಯಿ ಭೇಟಿ ಮಾಡಿದ ಎಚ್ ಡಿ ರೇವಣ್ಣ
  • ಬೇಡಿಕೆ ಮುಂದಿಟ್ಟುಕೊಂಡು ಸಚಿವ ಬೊಮ್ಮಾಯಿ ಭೇಟಿ
  • ನೀನು ನನ್ನ ಸ್ನೇಹಿತ ಆಗಿದ್ದರೆ ನಮ್ಮ ಕೆಲಸ ಮಾಡಿಕೊಡು ಎಂದ ರೇವಣ್ಣ

ಬೆಂಗಳೂರು(ಜೂ.18): ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಜೆಡಿಎಸ್‌ ಮುಖಂಡ ಎಚ್‌.ಡಿ.ರೇವಣ್ಣ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿತ್ತು. ಈ ಬಗ್ಗೆ ಸ್ವತಃ ರೇವಣ್ಣ ಸ್ಪಷ್ಟನೆ ನೀಡಿದ್ದಾರೆ. 

ಹಾಸನದಲ್ಲಿ ಗುರುವಾರ ಗೃಹ ಸಚಿವರ ಭೇಟಿ ಮಾಡಿದ ವಿಚಾರವಾಗಿ ಮಾತನಾಡಿದ ರೇವಣ್ಣ ನಮ್ಮ ಹೊಳೆನರಸೀಪುರದಲ್ಲಿ ಪೊಲೀಸ್ ಠಾಣೆ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು ಅದು ಅರ್ಧ ಕೆಲಸ ಅಗಿದೆ ಹಾಗಾಗಿ ಗೃಹ ಸಚಿವರನ್ನು ಭೇಟಿ ಮಾಡಲು ಹೋಗಿದ್ದೆನು ಎಂದರು.

Tap to resize

Latest Videos

ಗುಸುಗುಸು ಬೆನ್ನಲ್ಲೇ ರೇವಣ್ಣ ಭೇಟಿ : ಕುತೂಹಲ ಮೂಡಿಸಿದ ರಾಜಕೀಯ ...

ನೀನು ನನ್ನ ಸ್ನೇಹಿತ ಆಗಿದ್ದರೆ ನಮ್ಮ ಹೊಳೇನರಸೀಪುರದ ಪೊಲೀಸ್ ಠಾಣೆ ಕಟ್ಟಡಕ್ಕೆ ಅನುದಾನ ಮಂಜೂರು ಮಾಡಿಕೊಡು ಎಂದು ಹೇಳಿಕೊಂಡೆ ಎಂದರು.

 ಅವರ ಭೇಟಿ ವೇಳೆ ಯಾವುದೇ ರಾಜಕೀಯ ಚರ್ಚೆ  ಮಾಡೋಕೆ ನಾನೇನು ರಾಷ್ಟ್ರೀಯ ನಾಯಕನಾ? ಗೃಹ ಸಚಿವರು ಹಾಗು ನನ್ನ ಭೇಟಿ ಹಿಂದೆ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದರು.

ಗೃಹ ಸಚಿವ ಬೊಮ್ಮಾಯಿಯವರನ್ನು ಮಾಜಿ ಸಚಿವ ಎಚ್ ಡಿ ರೇವಣ್ಣ ಭೇಟಿ ಮಾಡಿದ್ದು ರಾಜ್ಯ ರಾಜಕೀಯದಲ್ಲಿ ವಿವಿಧ ರೀತಿಯ ಸುದ್ದಿಗಳು ಹುಟ್ಟಿಕೊಳ್ಲಲು ಕಾರಣವಾಗಿತ್ತು

click me!