* ಬಿಎಸ್‌ವೈ ಭ್ರಷ್ಟರಿದ್ದು ಅವರ ಪುತ್ರ ಮುಖ್ಯಮಂತ್ರಿಯಂತೆ ಕೆಲಸ ಮಾಡುತ್ತಿದ್ದಾರೆ
* ಸಿಎಂ ಬದಲಾವಣೆ ಕುರಿತು ದೆಹಲಿ ಯಾತ್ರೆ ನಡೆಸಿದ ಅರವಿಂದ ಬೆಲ್ಲದ
* ಈಶ್ವರಪ್ಪ ತಮ್ಮದು ಶಿಸ್ತಿನ ಪಕ್ಷ ಎನ್ನುತ್ತಿರುವುದು ಸೋಜಿಗದ ಸಂಗತಿ
ರಾಣಿಬೆನ್ನೂರು(ಜೂ.18): ಸಿಎಂ ವಿರುದ್ಧ ಬಹಿರಂಗ ಬಂಡಾಯ, ಶಾಸಕರ ಪರಸ್ಪರ ಕೆಸರೆರಚಾಟ ನಡೆಯುತ್ತಿದ್ದರೂ ತಮ್ಮದು ಶಿಸ್ತಿನ ಪಕ್ಷವೆಂದು ಬಡಾಯಿ ಕೊಚ್ಚಿಕೊಳ್ಳುವ ಸಚಿವ ಕೆ.ಎಸ್. ಈಶ್ವರಪ್ಪನವರಿಗೆ ನೈತಿಕತೆಯಿದೆಯೇ ಎಂದು ಕೆಪಿಸಿಸಿ ಶಿಕ್ಷಕರ ಮತ್ತು ಪದವೀಧರರ ಘಟಕದ ರಾಜ್ಯಾಧ್ಯಕ್ಷ ಡಾ. ಆರ್.ಎಂ. ಕುಬೇರಪ್ಪ ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಆಡಳಿತ ಪಕ್ಷದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಭ್ರಷ್ಟರಿದ್ದು ಅವರ ಪುತ್ರ ಮುಖ್ಯಮಂತ್ರಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಾನಗಲ್ ಬೈ ಎಲೆಕ್ಷನ್ ದಿನಾಂಕ ಘೋಷಣೆ ಮುನ್ನವೆ ಅಭ್ಯರ್ಥಿ ಪ್ರಕಟಿಸಿದ ಜೆಡಿಎಸ್?
ಮತ್ತೊಬ್ಬ ಸಚಿವ ಸಿ.ಪಿ. ಯೋಗಿಶ್ವರ್ ಇದು ಮೂರು ಪಕ್ಷಗಳ ಸರ್ಕಾರ ಎಂದು ಹೇಳುತ್ತಾರೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಶಾಸಕ ಅರವಿಂದ ಬೆಲ್ಲದ ದೆಹಲಿ ಯಾತ್ರೆ ನಡೆಸಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮದು ಶಿಸ್ತಿನ ಪಕ್ಷ ಎನ್ನುತ್ತಿರುವುದು ಸೋಜಿಗದ ಸಂಗತಿಯಾಗಿದ್ದು ಇನ್ನಾದರೂ ಅವರು ಆತ್ಮವಂಚನೆಯ ಕೆಲಸ ಬಿಡಬೇಕೆಂದು ಕುಬೇರಪ್ಪ ಆಗ್ರಹಿಸಿದ್ದಾರೆ.