ಚಿಕ್ಕಬಳ್ಳಾಪುರದಲ್ಲಿ ರೈತರೊಂದಿಗೊಂದು ದಿನ: ರೈತರ ಕೃಷಿ ಪದ್ಧತಿಗೆ ಬಿ.ಸಿ.ಪಾಟೀಲ್‌ ಮೆಚ್ಚುಗೆ

By Girish Goudar  |  First Published Apr 20, 2022, 8:46 AM IST

*  ಅಂರ್ತಜಲ ಪಾತಾಳಕ್ಕೆ ಇಳಿದರೂ ರೈತರು ಸಮಗ್ರ ಕೃಷಿ ನೀತಿ ಅಳವಡಿಸಿಕೊಂಡಿರುವುದು ಶ್ಲಾಘನೀಯ
*  ನಮ್ಮ 17 ಮಂದಿಯ ಬಳಗದಲ್ಲಿ ಸುಧಾಕರ್‌ ಮೇಧಾವಿ
*  ಕೆಲವರು ನಮ್ಮನ್ನು ಬಾಂಬೆ ಬಾಯ್ಸ್‌ ಅಂತ ಕರೆಯುತ್ತಾರೆ 
 


ಚಿಕ್ಕಬಳ್ಳಾಪುರ(ಏ.20):  ಇಡೀ ರಾಜ್ಯಕ್ಕೆ ಮಾದರಿಯಾಗಿ ಅವಿಭಜಿತ ಚಿಕ್ಕಬಳ್ಳಾಪುರ- ಕೋಲಾರ(Chikkaballapur-Kolar) ಜಿಲ್ಲೆಗಳ ರೈತರು ಸಮಗ್ರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌(BC Patil) ಪ್ರಶಂಸಿಸಿದ್ದಾರೆ. 

ತಾಲೂಕಿನ ಎಸ್‌.ಗೊಲ್ಲಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ರೈತರೊಂದಿಗೊಂದು ದಿನ ಸಮಾರಂಭದಲ್ಲಿ ಮಾತನಾಡಿದ ಅವರು, ಕೃಷಿಯಲ್ಲಿ(Agriculture) ಹೆಚ್ಚು ತೊಡಗಿಸಿಕೊಳ್ಳುವಷ್ಟು ಉದ್ಯೋಗ ಸೃಷ್ಟಿ ಜೊತೆಗೆ ಆರೋಗ್ಯ ಹಾಗೂ ಆರ್ಥಿಕ ಸುಧಾರಣೆ ಸಾಧ್ಯವೆಂದರು. ಇಡೀ ರಾಜ್ಯದಲ್ಲಿ(Karnataka) ರೈತರ ಆತ್ಮಹತ್ಯೆ(Farmers Suicide) ಪ್ರಕರಣಗಳು ಹೆಚ್ಚಿದ್ದರೂ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮಾತ್ರ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಬಹಳ ವಿರಳ. ಅಂರ್ತಜಲ ಪಾತಾಳಕ್ಕೆ ಇಳಿದರೂ ಈ ಭಾಗದ ರೈತರು ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಂಡಿರುವುದು ಶ್ಲಾಘನೀಯ. ಕೃಷಿಕರನ್ನು ಕೃಷಿಗೆ ಪ್ರೇರೇಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರಾಜ್ಯದಲ್ಲಿ ಆಯೋಜಿಸಲಾಗಿದೆ ಎಂದರು.

Tap to resize

Latest Videos

Gadag: ಸಚಿವ​- ಶಾಸಕರ ಗುದ್ದಾಟ: ಮರಳು ದಂಧೆ ಹಿಡಿತಕ್ಕಾಗಿ ನಡೀತಾ ಜಟಾಪಟಿ?

ಪ್ರಧಾನಿ ನರೇಂದ್ರ ಮೋದಿ(Narendra Modi) 1 ಲಕ್ಷ ಕೋಟಿ ಕೃಷಿ ವಲಯಕ್ಕೆ ಕೊಟ್ಟಿದ್ದಾರೆ. 10 ಸಾವಿರ ಕೋಟಿ ಆತ್ಮನಿರ್ಬರ ಭಾರತ ನಿರ್ಮಾಣಕ್ಕೆನೀಡಿದ್ದಾರೆ. ತಾನು ಬೆಳೆದ ಬೆಳೆಯ ಸಂಸ್ಕರಣೆ, ಮಾರುಕಟ್ಟೆಗೆ ಒದಗಿಸಲು ಈ ಹಣ ಬಳಕೆ ಆಗುತ್ತಿದೆ. ರೈತನ ಆದಾಯ ದ್ವಿಗುಣಗೊಳಿಸಲು ರೈತ ಉತ್ಪಾದಕ ಸಂಸ್ಥೆಗಳನ್ನು ನೋಂದಣಿ ಮಾಡಿಸಿ ಶೇ.50 ರಷ್ಟುಸಾಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

ಕೃಷಿ ಇಲಾಖೆಯಲ್ಲಿ ದಿಕ್ಕಾರಗಳೇ ಜಾಸ್ತಿ

ಮೊದಲು ನನಗೆ ಯಡಿಯೂರಪ್ಪ ಅರಣ್ಯ ಇಲಾಖೆ ಕೊಟ್ಟಿದ್ದರು. ಪ್ರಾಣಿಗಳ ಜೊತೆ ಇರಲ್ಲ ಅಂತ ಹೇಳಿ ಪಟ್ಟು ಹಿಡಿದು ಕೃಷಿ ಇಲಾಖೆ ಕೊಡಿಯೆಂದು ಕೇಳಿ ಪಡೆದುಕೊಂಡೆ. ಕೃಷಿ ಇಲಾಖೆ ಸುಖದ ಸುಪ್ಪತ್ತಿಗೆ ಅಲ್ಲ. ಇಲ್ಲಿ ಜೈಕಾರಗಳಿಗಿಂತ ದಿಕ್ಕಾರಗಳೇ ಜಾಸ್ತಿ. ಸಮಸ್ಯೆಗಳು ಇರುವ ಕೃಷಿ ಇಲಾಖೆಯಲ್ಲಿ ರೈತರನ್ನು ತೃಪ್ತಿಪಡಿಸುವುದು ಬಲು ಕಷ್ಟಎಂದು ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

Farmers Suicide Cases: ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಇಳಿಕೆ: ಸಚಿವ ಪಾಟೀಲ್‌

ನಮ್ಮ 17 ಮಂದಿಯ ಬಳಗದಲ್ಲಿ ಸುಧಾಕರ್‌ ಮೇಧಾವಿ: ಬಿಸಿಪಾ

ನಮ್ಮ 17 ಮಂದಿಯ ಬಳಗದಲ್ಲಿ ಸುಧಾಕರ್‌(Dr K Sudhakar) ಬಹಳ ಬುದ್ಧಿವಂತ, ಮೇಧಾವಿ ಎನ್ನುವ ಮೂಲಕ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರು ಆರೋಗ್ಯ ಸಚಿವ ಡಾ.ಸುಧಾಕರ್‌ ಅವರನ್ನು ಹೊಗಳಿದರು. 

ಚಿಕ್ಕಬಳ್ಳಾಪುರ ತಾಲೂಕಿನ ಎಸ್‌.ಗೊಲ್ಲಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ರೈತರೊಂದಿಗೊಂದು ದಿನ ಸಮಾರಂಭದಲ್ಲಿ ಮಾತನಾಡಿದ ಅವರು, 17 ಜನ ಅಂದ್ರೆ ಯಾರು ಗೊತ್ತಲ್ಲ. ಮೊದಲು ನಮ್ಮನ್ನು ಅನರ್ಹ ಶಾಸಕರೆಂದು ಕರೆದರು. ಆ ಮೇಲೆ ನಾವು ಗೆದ್ದು ಬಂದೆವು. ಜನ ನಮ್ಮನ್ನು ಮೆಚ್ಚಿದ್ದಾರೆ. ಕೆಲವರು ಬಾಂಬೆ ಬಾಯ್ಸ್‌(Bombay Boys) ಅಂತ ನಮ್ಮನ್ನು ಕರೆಯುತ್ತಾರೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು. 
ಸಚಿವ ಸುಧಾಕರ್‌ ಈ ಭಾಗಕ್ಕೆ ಹೆಚ್‌ಎನ್‌ ವ್ಯಾಲಿ ನೀರು ಹರಿಸಿ ಜಿಲ್ಲೆಯ ರೈತರ ಬದುಕನ್ನು ಸುಧಾರಿಸಿದ್ದಾರೆ ಎಂದು ಪ್ರಶಂಸಿಸಿದರು.
 

click me!