ಚುನಾವಣೆ ಸೋಲಿನ ಭೀತಿಯಿಂದ ಕಾಂಗ್ರೆಸ್‌ನಿಂದ ಕೋಮುಗಲಭೆ ಸೃಷ್ಟಿ: ಶ್ರೀರಾಮುಲು

By Girish Goudar  |  First Published Apr 24, 2022, 7:12 AM IST

*  ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದು ಖಾತ್ರಿಯಾಗಿದೆ
*  ಹಿಂದು-ಮುಸ್ಲಿಂರ ನಡುವೆ ಕೋಮುವಾದದ ವಿಷಬೀಜ ಬಿತ್ತುತ್ತಿರುವುದೇ ಕಾಂಗ್ರೆಸ್‌ ಹೊರತು ಬಿಜೆಪಿಯಲ್ಲ
* ಕಾಂಗ್ರೆಸ್ಸಿನವರ ಮಾತಿಗೆ ಯಾರೂ ಮರುಳಾಗಬಾರದು 


ಬಳ್ಳಾರಿ(ಏ.24):  ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳಿಗೆ(Communal Riots) ಕಾಂಗ್ರೆಸ್‌ ಕಾರಣ. ಚುನಾವಣೆ ವರ್ಷವಾಗಿರುವುದರಿಂದ ಕಾಂಗ್ರೆಸ್‌ನವರು ವಿನಾಕಾರಣ ರಾಜ್ಯದಲ್ಲಿ(Karnataka) ಕೋಮು ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ದೂರಿದರು.

ನಗರದಲ್ಲಿ ಸುದ್ದಿಗಾರರ ಜತೆ ಶನಿವಾರ ಮಾತನಾಡಿ, ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬುದು ಖಾತ್ರಿಯಾಗಿದೆ. ಹೀಗಾಗಿ ರಾಜ್ಯಾದ್ಯಂತ ಗಲಭೆಗಳನ್ನು ಸೃಷ್ಟಿಸುತ್ತಿದೆ. ಹಿಂದು-ಮುಸ್ಲಿಂ(Hindu-Muslim) ಸಮುದಾಯದ ನಡುವೆ ಕೋಮುವಾದದ ವಿಷಬೀಜ ಬಿತ್ತುತ್ತಿರುವುದೇ ಕಾಂಗ್ರೆಸ್‌ ಹೊರತು ಬಿಜೆಪಿಯಲ್ಲ. ಕಾಂಗ್ರೆಸ್ಸಿನವರ ಮಾತಿಗೆ ಯಾರೂ ಮರುಳಾಗಬಾರದು. ಬಿಜೆಪಿ(BJP) ಕಾರ್ಯಕರ್ತರು ಸಹ ಎಚ್ಚರಿಕೆಯಿಂದ ಇರಬೇಕು ಎಂದರು.
ಗೃಹಸಚಿವರು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿ ಕೋಮು ಗಲಭೆಗಳನ್ನು ನಿಯಂತ್ರಿಸುತ್ತಿದ್ದಾರೆ. ಕೆಜಿ ಹಳ್ಳಿ, ಡಿಜಿ ಹಳ್ಳಿ ಪ್ರಕರಣ, ಹುಬ್ಬಳ್ಳಿ ಪ್ರಕರಣ ಸೇರಿದಂತೆ ರಾಜ್ಯದ ವಿವಿಧೆಡೆ ನಡೆದ ಗಲಭೆಗಳ ಹಿಂದೆ ಕಾಂಗ್ರೆಸ್‌ ಕುಮ್ಮಕ್ಕಿದೆ. ಈ ಎಲ್ಲ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಕೂಡಲೇ ಬಂಧಿಸಲಾಗಿದೆ ಎಂದರು.

Latest Videos

undefined

Karnataka Politics: 'ರೆಡ್ಡಿ ಬ್ರದರ್ ಜೊತೆಗೆ ಇದ್ರೇ ಸೋಲೇ ಇಲ್ವಂತೆ'

ಪಿಎಸ್‌ಐ ಅಕ್ರಮ ನೇಮಕಾತಿಯನ್ನು ಕಂಡು ಹಿಡಿದಿದ್ದೇ ನಮ್ಮ ಸರ್ಕಾರ. ಕಾಂಗ್ರೆಸ್ಸಿನವರು ಅಧಿಕಾರದಲ್ಲಿದ್ದಾಗ ಈ ರೀತಿಯ ಪ್ರಕರಣಗಳಿಗೆ ತನಿಖೆ ಮಾಡಿಸಲಿಲ್ಲ. ಪಿಎಸ್‌ಐ ನೇಮಕಾತಿ ಅಕ್ರಮವನ್ನು ನಾವೇ ಕಂಡು ಹಿಡಿದು ನಾವೇ ತನಿಖೆ ಮಾಡಿಸುತ್ತಿದ್ದೇವೆ ಎಂದು ಹೇಳಿದರು.

ಭಿನ್ನಾಭಿಪ್ರಾಯವಿಲ್ಲ

ರಾಜುಗೌಡ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವಿಬ್ಬರೂ ಸಹೋದರರು ಇದ್ದಂತೆ. ಜನಾರ್ದನ ರೆಡ್ಡಿ ರಾಜಕೀಯ ಮರು ಸೇರ್ಪಡೆ ಕುರಿತು ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆಯಾಗಿಲ್ಲ. ಈ ಸಂಬಂಧ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದರು.

ದಶಕದ ನಂತರ ಒಗ್ಗಟ್ಟು ಪ್ರದರ್ಶಿಸಿದ ರೆಡ್ಡಿ ಬ್ರದರ್ಸ್, ಸಾಕ್ಷಿಯಾದ ಸಿಎಂ ಬೊಮ್ಮಾಯಿ

ಸಿದ್ದು ಹೇಳಿದಂತೆ ಕಿತ್ತೆಸೆಯಲು ಬಿಜೆಪಿಯೇನು ಕೊತ್ತಂಬರಿಸೊಪ್ಪಾ?:

ಮಂಗಳೂರು: ಕಾಂಗ್ರೆಸ್‌(Congress) ಪಕ್ಷದಲ್ಲಿ ಸಿದ್ದರಾಮಯ್ಯ(Sriramulu) ಯಾರಿಗೂ ಬೇಡವಾದ ಕೂಸಾಗಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು(B Sriramulu) ವ್ಯಂಗ್ಯವಾಡಿದ್ದರು.
ಬಿಜೆಪಿಯನ್ನು(BJP) ಕಿತ್ತೊಗೆಯಿರಿ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ನಗರದಲ್ಲಿ ಏ.13 ರಂದು   ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ್ದ ಅವರು, ಕಾಂಗ್ರೆಸ್‌ನ ಪ್ರತಿಭಟನಾ ರಾರ‍ಯಲಿಯಲ್ಲಿ ಬಿಜೆಪಿಯನ್ನು

ಕಿತ್ತೊಗೆಯಲು ಹೇಳಿದ್ದರು. 

ಬಿಜೆಪಿಯನ್ನು ಕಿತ್ತೆಸೆಯೋಕೆ ಬಿಜೆಪಿ ಏನು ಕೊತ್ತಂಬರಿ ಸೊಪ್ಪಾ? ಬಿಜೆಪಿ ರಾಜ್ಯದಲ್ಲಿ, ದೇಶದಲ್ಲಿ ಆಲದ ಮರವಾಗಿ ಬೆಳೆದಿದೆ. ಬಿಜೆಪಿ ಕಾರ್ಮಿಕ ವರ್ಗಕ್ಕೆ ಶಕ್ತಿಯನ್ನು ತುಂಬಿದೆ ಎಂದರು. ಸಿಎಂ ಬೊಮ್ಮಾಯಿ(Basavaraj Bommai) ಅವರು ಚಾಣಕ್ಯನ ರೀತಿಯಲ್ಲಿ ರಾಜಕೀಯ ಮಾಡುತ್ತಾರೆ. ಪ್ರತಿಪಕ್ಷ ಗಳಿಗೆ ಇದನ್ನೆಲ್ಲಾ ತಡೆಯೋದಿಕ್ಕೆ ಆಗುತ್ತಿಲ್ಲ. ಸಿದ್ದರಾಮಯ್ಯ ತಾಳ್ಮೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದರು. 
 

click me!