ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಒಳ್ಳೆಯ ದಿನಗಳು ಬರಲಿವೆ, ಸಿಎಂ ಭರವಸೆ

By Suvarna News  |  First Published Apr 23, 2022, 10:15 PM IST

ಪಂಚಮಸಾಲಿ ಸಮುದಾಯದ ಜೊತೆ ನಾನು ಹಾಗು ಸರ್ಕಾರವಿದೆ 
  ಮೀಸಲಾತಿ ವಿಚಾರದಲ್ಲಿ ಸಮುದಾಯಕ್ಕೆ ಒಳ್ಳೆಯ ದಿನಗಳು ಬರಲಿವೆ
ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಭಾಷಣ


ವರದಿ - ವರದರಾಜ್ 

ದಾವಣಗೆರೆ, (ಏ.23):  
ಹರಿಹರ ಪೀಠ ತನ್ನದೇಯಾದ ಐತಿಹಾಸಿಕ ಪ್ರಾಮುಖ್ಯತೆ ಹೊಂದಿದೆ. ಬಸವರಾಜ  ದಿಂಡೂರು ಉಮಣ್ಣ ಎಲ್ಲಾ ಒಂದಾಗಿ ಪೀಠ ಸ್ಥಾಪನೆ ಮಾಡಿದರು. ಸಮಾಜಕ್ಕೆ ಒಂದೇ ಪೀಠ ಇರಬೇಕೆಂಬ ಸಭೆಯಲ್ಲು ನಾನು ಭಾಗವಹಿಸಿದ್ದೆ, ಸಮಾಜದ ಎಲ್ಲಾ ಸಭೆಗಳಲ್ಲು ನಾನು ಭಾಗವಹಿಸಿದ್ದೇನೆ. ನೂತನ ಮಾರ್ಗದರ್ಶನ ಮಾಡಲು , ಸಾಧಕನ ಶೋಧದಲ್ಲಿ ವಚನಾನಂದ ಶ್ರೀಗಳು ಸಿಕ್ಕರು.  ಮಠದ ಭಕ್ತರು ಗುರುವಿನ ಮಧ್ಯೆ ಅನೋನ್ಯ ಭಾವ ಇರುತ್ತದೆ. ಪರಮಪೂಜ್ಯ ರ ಆಗಾಧ ಜ್ನಾನ ಯೋಗದ ಸಾಧನೆಯಿಂದ ಒಂದು ಸಂಸ್ಕಾರ ಸೃಷ್ಟಿ ಮಾಡುವ ಶಕ್ತಿ ಇದೆ ಎಂದು ಶ್ರೀಗಳನ್ನು ಹೊಗಳಿದರು.

ಇಂದು ಹರಿಹರದ  ಸ್ವಾತಂತ್ರ್ಯ ಅಮೃತ‌ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ  ಸಿಎಂ ಬಸವರಾಜ ಬೊಮ್ಮಾಯಿ, ಜಾಗತೀಕರಣ ೨೧ ಶತಮಾನದ ಯುಗದಲ್ಲಿ ನಾವಿದ್ದೇವೆ. ಎಲ್ಲವು ಕೂಡ ಮಾರುಕಟ್ಟೆ ‌ತೀರ್ಮಾನ ಮಾಡುತ್ತದೆ ನಾವು ಕೊಳ್ಳುವ ತೆಗೆದುಕೊಳ್ಳುವ ಎಲ್ಲವನ್ನು ಮಾರುಕಟ್ಟೆ ತೀರ್ಮಾನ ಮಾಡುತ್ತದೆ. ಈ ಸಂದರ್ಭದಲ್ಲಿ ಸಂಬಂಧಗಳು ದೂರ ದೂರ ವಾಗುತ್ತಿವೆ. ಜಾಗತಿಕರಣ ಉದಾರೀಕರಣ ದ ಸಂದರ್ಭದಲ್ಲಿ ಅಂತಃಕರಣ ಬೇಕಾಗಿದೆ. ಅಂತಹ ಅಂತಃಕರಣವನ್ನು ಈ ಮಠಗಳು ಹುಟ್ಟುಹಾಕುತ್ತಿವೆ.  ಸಮಾಜದಲ್ಲಿ ಸಾಮಾಜಿಕ ನ್ಯಾಯವಿದೆ. ಸಮಾಜದಲ್ಲಿ ಒಳ್ಳೆಯ ಆದರ್ಶಗಳನ್ನು ಗುರುತಿಸುವುದಾದ್ರೆ ಒಳ್ಳೆ ಸಮಾಜ ನಿರ್ಮಾಣ ಮಾಡಬಹುದು  ಏನು ಮಾಡಬಾರದು ಎಂದು ಹೇಳುವುದಕ್ಕಿಂತ ಏನು ಮಾಡಬೇಕೆಂಬುದನ್ನು ಹೇಳಬೇಕು. ಒಳ್ಳೆದು ಕೆಟ್ಟದು ಒಂದೇ ಎಂದಾಗ ಪರಿಶುದ್ಧತೆಗೆ ಯಾರು ಪ್ರಯತ್ನಿಸುವುದಿಲ್ಲ  ತಪ್ಪು ತಪ್ಪೆಂದು ಹೇಳುವ ಗುಣ ಬರಬೇಕು  ಮಠಗಳ ಕರ್ತವ್ಯದ ವ್ಯಾಪ್ತಿ ಯನ್ನು ಈ ಮಠ ಹೆಚ್ಚಿಸಿದೆ.

ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ವಿಷಯ ಪ್ರಸ್ತಾಪಿಸಿದ ಸಿಎಂ

Tap to resize

Latest Videos

ಮೀಸಲಾತಿ ವಿಚಾರದಲ್ಲಿ ಒಳ್ಳೆಯ ದಿನಗಳು ಬರಲಿವೆ 
ಪಂಚಮಸಾಲಿ ಸಮಾಜ ಭೂಮಿ ಜೊತೆ ಅನೋನ್ಯವಾಗಿರುವ ಸಮಾಜ  ತಮ್ಮ ಹೊಟ್ಟೆಗೆ ತಣ್ಣೀರುಬಟ್ಟೆ ಕಟ್ಟಿಕೊಂಡು ಎಷ್ಟೋ ವಿದ್ಯಾವಂತರನ್ನಾಗಿ ಪೋಷಕರು ಮಾಡಿದ್ದಾರೆ. ನಮ್ಮಭೂಮಿ ಅಷ್ಟೇ ಇದೆ ಅದರ ಮೇಲೆ ಅವಲಂಬಿತರು ಜಾಸ್ತಿ ಆಗಿದೆ. ಪ್ರತಿಯೊಬ್ಬರ ಮನೆಯಲ್ಲು ಓದಬೇಕು ಕಲಿಬೇಕೆಂಬ ಮಹತ್ವಾಕಾಂಕ್ಷೆ ಸಹಜ. ಅದಕ್ಕಾಗಿ ಮೀಸಲಾತಿ ವಿಚಾರ ಚರ್ಚೆಯಾಗುತ್ತಿದೆ.  1994 ರಲ್ಲಿ ಹನುಮಾನಾಳ್ ರಿಂದ ಆರಂಭವಾದ ಮೀಸಲಾತಿ ವಿಚಾರ ಯಡಿಯೂರಪ್ಪ ನವರ ಅವಧಿಯಲ್ಲಿ ಆಯಿತು. ಜನಸಂಖ್ಯೆ ಆಧಾರದ ಮೇಲೆ‌ ರಿಸರ್ವೇಶನ್ ಕೊಡಬೇಕೆಂದು ಜಡ್ಜ್ಮೆಂಟ್ ಆಗುತ್ತಿವೆ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಬೆಕೆಂದು ಸುಪ್ರೀಂ ಜಡ್ಜ್ಮೆಂಟ್ ಆಗಿದೆ.ನಾವು ಯಡಿಯೂರಪ್ಪ ‌ಕುರಿತು ಚರ್ಚಿಸಿ ಕ್ರಮ ಕೈಗೊಂಡಿದ್ದೇವೆ. ಬ್ಯಾಕ್ ವರ್ಡ್ ಕ್ಲಾಸ್ ಗೆ ಮೀಸಲಾತಿ ನಿರ್ಣಯಿಸುವ ಮಾನ್ಯತೆ ಸಿಕ್ಕಿದೆ. ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷ ಜಯಪ್ರಕಾಶ್ ಹೆಗ್ಡೆ ವರದಿ ಬಂದ ಮೇಲೆ ಇಡೀ ಸಮಾಜದ ಹೋರಾಟಕ್ಕೆ ಒಳ್ಳೆದಿನಗಳು ಬರಲಿವೆ. ನಮ್ಮ ಕಾಲದಲ್ಲಿ ಈ ಎಲ್ಲಾ ಬೆಳವಣಿಗೆ ಆಗಿದೆ. ಎಲ್ಲಾ ಸಮಾಜವನ್ನು ಸಮಾನತೆ ನೋಡುವ ಜವಬ್ದಾರಿ ನನ್ನ ಮೇಲೆ ಇದೆ. ಶೋಷಿತ ಎಲ್ಲಾ ಸಮಾಜಗಳ ಪರಿಕಲ್ಪನೆ ನನ್ನ ಮೇಲೆ ಇದೆ. ಬ್ಯಾಕ್ವಾರ್ಡ ಕ್ಲಾಸ್ ವರದಿ ಬಂದ ಮೇಲೆ ಎಲ್ಲರ ವಿಶ್ವಾಸ ತೆಗೆದುಕೊಂಡು ಮೀಸಲಾತಿ ನಿರ್ಧರಿಸುತ್ತೇವೆ ಎಂದರು. 

ಸ್ವಾಮೀಜಿಗೆ ಕಿವಿ ಮಾತು ಹೇಳಿದ ಸಿಎಂ 
ವಚನಾನಂದ ಶ್ರೀಗಳಿಗೆ ನಾನು ನೇರವಾಗಿ ಕೆಲವೊಂದು ಮಾತುಗಳನ್ನು ಹೇಳುತ್ತೇನೆ.  ಭಕ್ತರನ್ನು ಒಂದುಗೂಡಿಸುವ ಕೆಲಸ ಮಾಡಬೇಕು. ಕೆಲವೊಂದು ಸಾರಿ ನೆಲ ಜಲ ಭಾಷೆ ನಾಡಿನ ವಿಚಾರ ಬಂದಾಗ  ನಮ್ಮ ರಾಜಕಾರಣದಲ್ಲಿ ಭಿನ್ನಾಭಿಪ್ರಾಯ ಮರೆತು ಒಂದಾಗುತ್ತೇವೆ. ಸಮಾಜದ ಭವಿಷ್ಯ ಬಂದಾಗ ನಾವೆಲ್ಲಾ ಒಂದಾಗಿ ಹೋಗಬೇಕು. ಪರಮಪೂಜ್ಯ ರ ಜೊತೆ ಚರ್ಚೆ ನಡೆಸಿದ್ದೇನೆ  ಒಬ್ಬ ಭಕ್ತನಾಗಿ ಬಂದು ಸಮಾಜದ ಶ್ರೇಯೋಭಿವೃದ್ದಿ ಮುಖ್ಯ  ಪರಮಪೂಜ್ಯ ರ ಕ್ರಿಯಾಶೀಲತೆಗೆ  ನನ್ನ ಸಹಕಾರ ಇದೆ. ಪರಮಪೂಜ್ಯರು ತಮ್ಮ ಮಠಕ್ಕೆ ಏನು ಕೇಳಲಿಲ್ಲ.  ಸಣ್ಣ ಸಣ್ಣ ಮಠಗಳಿಗೆ ಸಹಾಯ ಮಾಡಿ ಎಂದು ಭಿನ್ನವ ಮಾಡಿದರು. ಅದು ಅವರ ದೊಡ್ಡ ಗುಣ ಎಂದು ಸಿಎಂ ಹೊಗಳಿದರು.  ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಕಿತ್ತೂರು ಚೆನ್ನಮ್ಮ ನಮ್ಮ ಇತಿಹಾಸ ಸಂಸ್ಕಾರವನ್ನು ಸಾರುತ್ತವೆ. ಅವರ ನಡೆದುಬಂದ ದಾರಿ ಅವರ ಆದರ್ಶಗಳು ನಮ್ಮ ಭಾವನೆ ಮೇಲೆ‌ ಪರಿಣಾಮ ಬೀರುತ್ತವೆ.ಮನುಷ್ಯ ಇತಿಹಾಸದ ಭಾಗವಾಗಬೇಕು ಇಲ್ಲ ಇತಿಹಾಸ ಸೃಷ್ಟಿಸಬೇಕು ಸಾಧಕನಿಗೆ ಸಾವು ಅಂತ್ಯವಲ್ಲ ಸಾವಿನ ನಂತರವು ಸಾಧಕನ‌ ಹೆಸರಿರಬೇಕು ಎಂದರು.

ನಾನು ಪಂಚಮಸಾಲಿ ಸಮಾಜವನ್ನು ಹೊಡೆದಿಲ್ಲ 
ಕಾರ್ಯಕ್ರಮದಲ್ಲಿ ಮಾತನಾಡಿದ ವಚನಾನಂದ ಶ್ರೀಗಳು. ಕೋವಿಡ್ ನಿಂದ ಯುವಸಮೂಹ ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕ ಪೋಷಕರು ತಮ್ಮ ಮಕ್ಕಳಿಗೆ ಉದ್ಯೋಗ ನೀಡಬೇಕೆಂದು ಮನವಿ ಮಾಡಿದ್ದಾರೆ.ಸಿಎಂ ಮೇಲೆ ವಿಶ್ವಾಸವಿದೆ ಮೀಸಲಾತಿ ನೀಡುತ್ತಾರೆ. ಪಂಚಮಸಾಲಿಗಳನ್ನು ಗುರುತಿಸಿದ್ದರೆ ಅದು ಕೇವಲ‌ ಹರಿಹರದ ಪಂಚಮಸಾಲಿ ಪೀಠದಿಂದ ಮಾತ್ರ.  ನಾನು ಬಂದ ಮೇಲೆ ಪಂಚಮಸಾಲಿ ಸಮಾಜವನ್ನು ಒಡೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ.  ಆದ್ರೆ ಸಮಾಜವನ್ನು ಒಡೆದಿಲ್ಲ  ಕೂಡಿಸಿದ್ದೇನೆ ಎಂದರು ಇಡೀ ಲಿಂಗಾಯತ ಸಮುದಾಯ ಒಂದೇ ಕೆಟಗರಿಯಲ್ಲಿ ಬರಬೇಕು  ಒಂದು ಲಿಂಗಾಯತ ಪಂಗಡ ಎಸ್ಸಿ, ಒಂದು ಪಂಗಡ 2ಎ ,ಇನ್ನೊಂದು ಪಂಗಡ 3 ಬಿ ಹೀಗೆ ಮೀಸಲಾತಿ ಪಡೆಯುತ್ತಿದೆ  ಆ ಎಲ್ಲಾ ಪಂಗಡಗಳು ಒಗ್ಗೂಡಿ ಒಂದೇ ಮೀಸಲಾತಿ ಆಗಬೇಕೆಂಬುದು ನಮ್ಮ ಆಶಯ  ಮೊದಲು ಗೆಜೆಟ್ ನಲ್ಲಿ ಪಂಚಮಸಾಲಿ ಎಂದು ಸೇರಿಸಿದ್ದು ನಮ್ಮ ಹರಿಹರ ಪೀಠ ಕೇಂದ್ರದ ಮೀಸಲಾತಿಯಲ್ಲಿ ಇಡೀ ಲಿಂಗಾಯತ  ಸಮುದಾಯ ಓಬಿಸಿಯಲ್ಲಿ ಬರಬೇಕೆಂದು ಮನವಿ ಮಾಡಿದರು. 

ಡಾ ಅಶ್ವಥನಾರಾಯಣ್ ಹೇಳಿಕೆ
ಸ್ವಾತಂತ್ರ್ಯ ದ ಅಮೃತ ಮಹೋತ್ಸವ ವೇದಿಕೆಯನ್ನುದ್ದೇಶಿಸಿ ಮಾತನಾಡಿದ ಡಾ ಅಶ್ವತ್ ನಾರಾಯಣ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿತು. ಅದನ್ನು ಅನುಷ್ಠಾನಗೊಳಿಸಿದ್ದು ಕರ್ನಾಟಕ ರಾಜ್ಯ  ಮಾತ್ರ.  21 ನೇ ಶತಮಾನ ಜ್ನಾನಾಧಾರಿತ ಯುಗ  ನಮ್ಮ‌ ನಾಡಿನ ಜನತೆಗೆ ಉತ್ತಮ ಭವಿಷ್ಯ ಕೊಡಬೇಕು.  ಇಡೀ ವಿಶ್ವದಲ್ಲಿಯೇ ಉತ್ತಮವಾದ ಸ್ಥಳ ನಮ್ಮ ರಾಜ್ಯವಾಗಿದೆ ಎಂದರು.

ರಾಜ್ಯ ಸರ್ಕಾರದಲ್ಲಿ ಹೊಸದಾಗಿ 5 ಯುನಿವರ್ಸಿಟಿ ಪ್ರಾರಂಭ ಮಾಡಿದ್ದೇವೆ ಇನ್ನು ಹೊಸ 7 ವಿವಿಗಳು ಘೋಷಣೆ ಮಾಡಿ ಅವುಗಳ ಅಭಿವೃದ್ಧಿಯಾಗುತ್ತದೆ.  ಪ್ರತಿ ಜಿಲ್ಲೆಯಲ್ಲು ವಿವಿಗಳು ಆರಂಭವಾಗಬೇಕೆಂಬುದು ನಮ್ಮ ಸರ್ಕಾರದ ಆಶಯ.  ಪ್ರತಿಯೊಬ್ಬರಿಗು ಗುಣಮಟ್ಟದ ಶಿಕ್ಷಣ ನೀಡಬೇಕು ಈಗೀರುವ 14 ಇಂಜಿನಿಯರಿಂಗ್ ‌ಕಾಲೇಜ್ ಗಳಲ್ಲಿ 7 ನ್ನು ಐಐಟಿ ಮಾದರಿಯಲ್ಲಿ ರೂಪಿಸುತ್ತೇವೆ.  ಸ್ಮಾರ್ಟ್ ಇ ಗರ್ವನನ್ಸ್ ಮೂಲಕ ಡಿಜಿಟಿಲ್  ಕಲಿಕೆಗೆ ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ. ದೇಶದಲ್ಲಿ ಮಾದರಿ ಕಲಿಕೆಗೆ ರಹದಾರಿ ಹಾಕಿದ್ದೇವೆ  ಯುವಕರಿಗೆ  ಉದ್ಯೋಗ ನೀಡುವುದು ನಮ್ಮ ಗುರಿ. ಐದು ಸಾವಿರ ಕೋಟಿ ಖರ್ಚು ಮಾಡಿ ಐಟಿಐ ಸಂಸ್ಥೆಗಳನ್ನು ಉನ್ನತೀಕರಣ ಮಾಡಿದೆ. ಇದಕ್ಕೆ ದೇಶ ಮಟ್ಟದಲ್ಲಿ ಪ್ರಶಸ್ತಿ ಬಂದಿದೆ ಬಡ ಮಕ್ಕಳು ಅಮೆರಿಕಾದಲ್ಲಿ ಓದಲಿಕೆ ಪಾಲಿಟೆಕ್ನಿಕ್ ಪಠ್ಯ ಉನ್ನತೀಕರಣ  ಬದಲಿಸಲಾಗಿದೆ. ಇಲ್ಲಿವರೆಗು ಇದ್ದ ವ್ಯವಸ್ಥೆಯಲ್ಲಿ ಎರಡುವರೆ ಲಕ್ಷ ಮಕ್ಕಳು ತಾಂತ್ರಿಕ ಶಿಕ್ಷಣ ಕಲಿಕೆಗೆ ಪೂರಕವಾದ ವಾತವರಣ ನಿರ್ಮಾಣ ಮಾಡಿದ್ದೇವೆ ಎಂದು ಅಭಿಪ್ರಾಯಪಟ್ಟರು.

click me!