'ಯಡಿಯೂರಪ್ಪಗೆ ಧಮ್‌ ಇರೋದಕ್ಕೆ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದು'

By Kannadaprabha News  |  First Published Jun 21, 2020, 1:42 PM IST

ಯಡಿಯೂರಪ್ಪನವರ ಧಮ್‌ ಏನು ಎನ್ನುವುದು ಸಿದ್ದರಾಮಯ್ಯನವರಿಗೆ ಈಗಾಗಲೇ ಗೊತ್ತಾಗಿದೆ| BSY ಧಮ್‌ ನಿಂದಲೇ 17 ಶಾಸಕರು ಬಿಜೆಪಿಗೆ ಬಂದಿದ್ದು, 12 ಜನ ಗೆದ್ದಿದ್ದು ಅವರಲ್ಲಿ 10 ಜನ ಮಂತ್ರಿ, ಇಬ್ಬರು ಎಂಎಲ್‌ಸಿಗಳಾಗಿದ್ದಾರೆ| ಖಂಡ್ರೆ ಕಲ್ಪನಾ ಕತೆಯನ್ನು ಕಟ್ಟಿಕೊಳ್ಳುತ್ತಿದ್ದಾರೆ|
 


ಹಾವೇರಿ(ಜೂ.21): ಯಡಿಯೂರಪ್ಪನವರಿಗೆ ಧಮ್‌ ಇರೋದರಿಂದಲೇ ಇಂದು ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರು ತಿರುಗೇಟು ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ಧಮ್‌ ಏನು ಎನ್ನುವುದು ಸಿದ್ದರಾಮಯ್ಯನವರಿಗೆ ಈಗಾಗಲೇ ಗೊತ್ತಾಗಿದೆ. ಅವರ ಧಮ್‌ನಿಂದಲೇ 17 ಶಾಸಕರು ಬಿಜೆಪಿಗೆ ಬಂದಿದ್ದು, 12 ಜನ ಗೆದ್ದಿದ್ದು ಅವರಲ್ಲಿ 10 ಜನ ಮಂತ್ರಿಯಾಗಿದ್ದಾರೆ. ಇಬ್ಬರು ಎಂಎಲ್‌ಸಿಗಳಾಗಿದ್ದಾರೆ. ಯಡಿಯೂರಪ್ಪನವರಿಗೆ ಧಮ್‌ ಇರುವುದರಿಂದ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾರೆ. ಇಲ್ಲದಿದ್ದರೆ ಸಿದ್ದರಾಮಯ್ಯ ಏನೂ ಆಗುತ್ತಿರಲಿಲ್ಲ ಎಂದು ಟಾಂಗ್‌ ನೀಡಿದ್ದಾರೆ. 

Tap to resize

Latest Videos

'ಧಮ್' ಪದ ಬಳಕೆ: ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಈಶ್ವರಪ್ಪ

ರಮೇಶ್‌ ಜಾರಕಿಹೊಳಿ ಕಾಂಗ್ರೆಸ್‌ ಸೇರಲು ಉತ್ಸುಕರಾಗಿದ್ದಾರೆ ಎಂಬ ಈಶ್ವರ ಖಂಡ್ರೆ ಅವರ ಹೇಳಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಖಂಡ್ರೆ ಕಲ್ಪನಾ ಕತೆಯನ್ನು ಕಟ್ಟಿಕೊಳ್ಳುತ್ತಿದ್ದಾರೆ. ಯಾವುದೇ ಭ್ರಮೆಯಲ್ಲಿ ಅವರು ಮಾತನಾಡಿದ್ದಾರೆ. ಕಾಂಗ್ರೆಸ್‌ನವರು ಸರಿಯಿದ್ದಿದ್ದರೆ ಯಾರು ಹೊರಬರುತ್ತಿರಲಿಲ್ಲ ಎಂದು ಹೇಳಿದ್ದಾರೆ. 
 

click me!