ಶೀಘ್ರವೇ ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆ: ಆನಂದ್‌ ಸಿಂಗ್‌

By Kannadaprabha News  |  First Published Jan 27, 2021, 11:09 AM IST

ವಿಜಯನಗರ ಸಂಭ್ರಮದಲ್ಲಿ ಗತ ವೈಭವ ಮರುಕಳಿಸೋಣ| ಸಿಎಂ, ಕೇಂದ್ರ ನಾಯಕರೊಂದಿಗೆ ವೈಭವದ ಸಂಭ್ರಮಾಚರಣೆ| ವಿಜಯನಗರದ ಟ್ಯಾಬ್ಲೋ ದಿಲ್ಲಿಯಲ್ಲಿ ಅನಾವರಣಗೊಂಡಿದ್ದು ನಮ್ಮ ಹೆಮ್ಮೆ|  


ಹೊಸಪೇಟೆ(ಜ.27): ವಿಜಯನಗರ ಜಿಲ್ಲೆ ಘೋಷಣೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅಂತಿಮ ಅಧಿಸೂಚನೆ ಹೊರಬೀಳಲಿದೆ. ಇಡೀ ರಾಜ್ಯವೇ ಇತ್ತ ತಿರುಗಿ ನೋಡುವಂತೆ ಸಂಭ್ರಮಾಚರಣೆ ಮಾಡೋಣ ಎಂದು ಮೂಲಭೂತ ಅಭಿವೃದ್ಧಿ ಸಚಿವ ಆನಂದ್‌ ಸಿಂಗ್‌ ಹೇಳಿದ್ದಾರೆ. 

ನಗರದಲ್ಲಿ 150 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಮಂಗಳವಾರ ಗಣರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹೊಸಪೇಟೆ ಸೇರಿದಂತೆ ಪಶ್ಚಿಮ ತಾಲೂಕುಗಳ ಜನರ ಬಹಳ ದಿನಗಳ ಬೇಡಿಕೆಯೇ ವಿಜಯನಗರ ಜಿಲ್ಲೆಯಾಗಿದೆ. ಈ ನೂತನ ಜಿಲ್ಲೆಯಿಂದ ಪಶ್ಚಿಮ ತಾಲೂಕುಗಳ ಜನರಿಗೆ ಅನುಕೂಲವಾಗಲಿದೆ. ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ ಎಂಬ ನಂಬಿಕೆ, ವಿಶ್ವಾಸ ಇದೆ ಎಂದು ಸಚಿವರು ಹೇಳಿದರು.

Tap to resize

Latest Videos

ವಿಜಯನಗರ ನೆಲದ ಇತಿಹಾಸವನ್ನು ಮತ್ತೆ ನೆನಪಿಸುವ ಕಾರ್ಯ ನಡೆಯುತ್ತಿದೆ. ಅಧಿಕೃತವಾಗಿ ವಿಜಯನಗರ ಜಿಲ್ಲೆ ರಚನೆ ಘೋಷಣೆ ಮಾಡಿದ ಬಳಿಕ ಇಡೀ ರಾಜ್ಯವೇ ತಿರುಗಿ ನೋಡುವಂತೆ ಸಂಭ್ರಮಾಚರಣೆ ಮಾಡೋಣ ಎಂದರು.
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ವಿಜಯನಗರ ವೈಭವಕ್ಕೆ ಆಹ್ವಾನಿಸೋಣ, ರಾಷ್ಟ್ರೀಯ ನಾಯಕರನ್ನು ಸಹ ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನ ಮಾಡಬೇಕು, ನಾನಿನ್ನೂ ಭೇಟಿಯಾಗಿಲ್ಲ ಎಂದರು.
ವಿಜಯನಗರದ ಟ್ಯಾಬ್ಲೋ ಇಂದು ದಿಲ್ಲಿಯಲ್ಲಿ ಅನಾವರಣಗೊಳ್ಳುತ್ತಿದೆ ಅದು ನಮ್ಮ ಹೆಮ್ಮೆ ಎಂದರು.

ಮಾರ್ಗ ಬಿಟ್ಟು ಚಲಿಸಿ ಪಕ್ಕಕ್ಕೆ ಸರಿದು ನಿಂತ ತೇರು : ಅನುಮತಿ ಇಲ್ಲದಿದ್ದರೂ ನಡೆದಿದ್ದ ರಥೋತ್ಸವ

ತ್ಯಾಗ ಬಲಿದಾನ: 

ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳು ನಡೆದಿವೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬರೆದ ಸಂವಿಧಾನದಿಂದ ಇಂದು ನಾವು ಸಮಾನವಾಗಿ ಬದುಕುತ್ತಿದ್ದೇವೆ. ದೇಶದ ಅಭಿವೃದ್ಧಿಯಲ್ಲಿ ಎಲ್ಲರೂ ಹೆಜ್ಜೆ ಹಾಕೋಣ ಎಂದರು.
ತಾಪಂ ಅಧ್ಯಕ್ಷೆ ನಾಗವೇಣಿ ಬಸವರಾಜ್‌, ಹುಡಾ ಅಧ್ಯಕ್ಷ ಅಶೋಕ್‌ ಜೀರೆ, ತಹಸೀಲ್ದಾರ್‌ ಎಚ್‌. ವಿಶ್ವನಾಥ, ಡಿವೈಎಸ್ಪಿ ವಿ. ರಘುಕುಮಾರ, ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ, ಮುಖಂಡರಾದ ಅಯ್ಯಾಳಿ ತಿಮ್ಮಪ್ಪ, ಸಾಲಿಸಿದ್ದಯ್ಯಸ್ವಾಮಿ, ಧರ್ಮೇಂದ್ರ ಸಿಂಗ್‌, ಸಂದೀಪ್‌ ಸಿಂಗ್‌, ಶಶಿಧರಯ್ಯಸ್ವಾಮಿ, ಬೋಡ ರಾಮಪ್ಪ, ನಾಗೇನಹಳ್ಳಿ ಬಸವರಾಜ್‌, ಸಣ್ಣಮಾರೆಪ್ಪ, ಬಸವರಾಜ್‌ ನಾಲತ್ವಾಡ, ಬಶೀರ್‌, ಜೀವರತ್ನ, ಕಟಿಗಿ ಜಂಬಯ್ಯ ನಾಯಕ, ಎಲ್‌.ಎಸ್‌. ಆನಂದ್‌, ಮಧುರಚನ್ನಶಾಸ್ತ್ರಿ, ಗೀತಾ ಶಂಕರ್‌ ಮತ್ತಿತರರಿದ್ದರು.

ಬಾನಂಗಳದಲ್ಲಿ ಬಲೂನ್‌ಗಳ ಚಿತ್ತಾರ: 

ಸಚಿವ ಆನಂದ್‌ ಸಿಂಗ್‌ ಅವರು ಧ್ವಜಾರೋಹಣ ನೆರವೇರಿಸುತ್ತಿದ್ದಂತೆಯೇ ಆಗಸದಲ್ಲಿ ಕೇಸರಿ, ಬಿಳಿ, ಹಸಿರು ಬಲೂನ್‌ಗಳನ್ನು ಹಾರಿಬಿಡಲಾಯಿತು. ಜತೆಗೆ ಗಣ್ಯರು ಪಾರಿವಾಳಗಳನ್ನು ಹಾರಿಬಿಟ್ಟರು. ಭಾರತಮಾತೆಯ ಜಯಘೋಷ ಮೊಳಗಿಸಲಾಯಿತು.
 

click me!