ಯಾವುದೇ ಹಂತದಲ್ಲಿ ವಿಜಯನಗರ ಜಿಲ್ಲೆ ಘೋಷಣೆ: ಸಚಿವ ಆನಂದ ಸಿಂಗ್‌

By Kannadaprabha News  |  First Published Nov 18, 2020, 12:53 PM IST

ವಿಜಯನಗರ ಜಿಲ್ಲಾ ರಚನೆ ಅಧಿಕೃತ ಘೋಷಣೆ ಯಾವುದೇ ಹಂತದಲ್ಲಿ ಸರ್ಕಾರ ಮಾಡಲಿದೆ| ವಿಜಯನಗರ ಜಿಲ್ಲಾ ಘೋಷಣೆಯಾಗದಿರುವುದಕ್ಕೆ ಚುನಾವಣೆ ಸಂಬಂಧದ ನೀತಿ ಸಂಹಿತೆ ಘೋಷಣೆ ಜಾರಿಯಲ್ಲಿರುವುದು ಕಾರಣ: ಸಚಿವ ಆನಂದ ಸಿಂಗ್‌ 


ಕೊಟ್ಟೂರು(ನ.18): ವಿಜಯನಗರ ಜಿಲ್ಲಾ ರಚನೆ ಪ್ರಸ್ತಾಪದ ಪ್ರಚಾರವನ್ನು ಉಜ್ಜಯಿನಿ ಪೀಠದಿಂದಲೇ ಜಗದ್ಗುರುಗಳ ಆಶೀರ್ವಾದ ಪಡೆದು ಆರಂಭಿಸಿದ್ದನ್ನು ಸ್ಮರಿಸಿದ ಸಚಿವ ಆನಂದ ಸಿಂಗ್‌ ಅವರು, ಇದೀಗ ವಿಜಯನಗರ ಜಿಲ್ಲಾ ರಚನೆ ಅಧಿಕೃತ ಘೋಷಣೆ ಯಾವುದೇ ಹಂತದಲ್ಲಿ ಸರ್ಕಾರ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"

Tap to resize

Latest Videos

undefined

ನ. 1ರಂದು ವಿಜಯನಗರ ಜಿಲ್ಲಾ ಘೋಷಣೆಯಾಗದಿರುವುದಕ್ಕೆ ವಿಧಾನಪರಿಷತ್‌ ಚುನಾವಣೆ ಸಂಬಂಧದ ನೀತಿ ಸಂಹಿತೆ ಘೋಷಣೆ ಜಾರಿಯಲ್ಲಿರುವುದು ಕಾರಣ. ಹೀಗಾಗಿ ಘೋಷಣೆ ಹೊರಬೀಳಲಿಲ್ಲ. ಈ ಸಂಬಂಧದ ಪ್ರಸ್ತಾಪ ಕೈಬಿಟ್ಟಿಲ್ಲ ಎಂದರು. 

"

ಕೂಡ್ಲಿಗಿ: ಮದುವೆಯ ಆಸೆ ತೋರಿಸಿ ಅಪ್ರಾಪ್ತೆ ಮೇಲೆ ಕಾಮುಕನ ಅಟ್ಟಹಾಸ

ವಿಜಯನಗರ ಜಿಲ್ಲಾ ರಚನೆ ಪ್ರಸ್ತಾಪ ಸರ್ಕಾರದ ಮಟ್ಟದಲ್ಲಿ ಇಲ್ಲ ಎಂದು ಶಾಸಕ ಕರುಣಾಕರ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕರುಣಾಕರ ರೆಡ್ಡಿ ಹಿರಿಯ ಶಾಸಕರಲ್ಲಿ ಒಬ್ಬರು. ಅವರು ಯಾವ ಆಧಾರದ ಮೇಲೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಹೇಳಿ, ವಿಜಯನಗರ ಜಿಲ್ಲಾ ರಚನೆ ಆಗುವುದರಲ್ಲಿ ಯಾವುದೇ ಅನುಮಾನ ಯಾರಿಗೂ ಬೇಡ ಎಂದು ಹೇಳಿದರು. ಬಿಜೆಪಿ ಜಿಲ್ಲಾಧ್ಯಕ್ಷ ಪಿ. ಚನ್ನಬಸವನಗೌಡ, ಪಪಂ ಸದಸ್ಯ ಹೊಸಮನಿ ವಿನಯ್‌ ಇದ್ದರು.
 

click me!