ಬಾವಿಗೆ ಬಿದ್ದು ಬಿಎಂಟಿಸಿ ಡ್ರೈವರ್‌ ಸಾವು

Kannadaprabha News   | Asianet News
Published : Nov 18, 2020, 12:50 PM ISTUpdated : Nov 18, 2020, 01:06 PM IST
ಬಾವಿಗೆ ಬಿದ್ದು ಬಿಎಂಟಿಸಿ ಡ್ರೈವರ್‌ ಸಾವು

ಸಾರಾಂಶ

ಬಾವಿಗೆ ಬಿದ್ದು ಬಿಎಂಟಿಸಿ ಡ್ರೈವರ್ ಓರ್ವರು ಮೃತಪಟ್ಟ ಘಟನೆ ನಡೆದಿದೆ. ಸ್ಥಳಕ್ಕೆ ಶಾಸಕರು ಭೇಟಿ ನಿಡಿ ಸಾಂತ್ವನ ಹೇಳಿದ್ದಾರೆ. 

ಶಿರಾ (ನ.18): ಮಾವನ ಮನೆಗೆ ಬಂದಿದ್ದ ಬಿಎಂಟಿಸಿ ಡ್ರೈವರ್‌ ಜಮೀನಿನಿಂದ ಟ್ರಾಕ್ಟರ್‌ ತರುತ್ತಿದ್ದಾಗ ಆಯತಪ್ಪಿ ಬಾವಿಗೆ ಟ್ರಾಕ್ಟರ್‌ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಹುಂಜನಾಳ್‌ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಕಾಟೇನಹಳ್ಳಿ ಗ್ರಾಮದ ವೀರಭದ್ರಯ್ಯ(40) ಮೃತ ವ್ಯಕ್ತಿ. ಇವರು ಬಿಎಂಟಿಸಿ ಡ್ರೈವರ್‌ ಕಂ ಕಂಡಕ್ಟರ್‌ ಆಗಿದ್ದಾರೆ. ದೀಪಾವಳಿ ಹಬ್ಬಕ್ಕೆ ರಜೆ ಇದ್ದರಿಂದ ಶಿರಾ ತಾಲೂಕು ಹುಂಜನಾಳ್‌ ಗ್ರಾಮದ ತನ್ನ ಮಾವನ ಮನೆಗೆ ಬಂದಿದ್ದರು. ಮಂಗಳವಾರ ಬೆಳಗ್ಗೆ ಜಮೀನಿನಲ್ಲಿದ್ದ ಟ್ರ್ಯಾಕ್ಟರ್‌ ತರಲು ಹೋಗಿ ಈ ದುರ್ಘಟನೆ ನಡೆದಿದೆ. ಈ ಬಗ್ಗೆ ಕಳ್ಳಂಬೆಳ್ಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಸಿಎಂ ಅಂಕಲ್ ಅಪ್ಪನಿಗೆ ಸಂಬಳ ಕೊಡಿ ಪ್ಲೀಸ್, ಮನೆಯಲ್ಲಿ ಹಬ್ಬವಿಲ್ಲ' .

ಶಾಸಕರ ಭೇಟಿ:  ವಿಷಯ ತಿಳಿದ ತಕ್ಷಣ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಅವರು ಟ್ರಾಕ್ಟರ್‌ ಮುಗುಚಿ ಬಿದ್ದು ಸಾವನ್ನಪ್ಪಿದ್ದ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ, ತಾ.ಪಂ. ಉಪಾಧ್ಯಕ್ಷ ರಂಗನಾಥ್‌ ಗೌಡ ಹಾಜರಿದ್ದರು.

PREV
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!