ನೆಚ್ಚಿನ ನಾಯಕ ಆನಂದ್ ಸಿಂಗ್ ಜತೆ ಬೆಂಗಳೂರಿಗೆ ಹೆಲಿಕಾಪ್ಟರ್‌ನಲ್ಲಿ ಹೋಗಬೇಕು ಎಂಬ ಕನಸು ಕಂಡಿದ್ದ ಜೋಗಿ ತಾಯಪ್ಪ ಹಾಗೂ ಆಂಥೋನಿದಾಸ್| ತಮ್ಮ ಕನಸು ಈಡೇರಿಸಿಕೊಂಡು ಸಂತಸದಲ್ಲಿರುವ ಅಭಿಮಾನಿಗಳು|
ಬಳ್ಳಾರಿ(ನ.12): ಹೆಲಿಕಾಪ್ಟರ್‌ನಲ್ಲಿ ಹೋಗಬೇಕು ಎಂಬ ಅಭಿಮಾನಿಗಳಿಬ್ಬರ ಕನಸನ್ನು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಈಡೇರಿಸಿದ್ದಾರೆ.
ನೆಚ್ಚಿನ ನಾಯಕ ಆನಂದ್ ಸಿಂಗ್ ಜತೆ ಬೆಂಗಳೂರಿಗೆ ಹೆಲಿಕಾಪ್ಟರ್‌ನಲ್ಲಿ ಹೋಗಬೇಕು ಎಂಬ ತಮ್ಮ ಕನಸನ್ನು ಸಚಿವ ಸಿಂಗ್‌ರ ಅಪ್ಪಟ ಅಭಿಮಾನಿಗಳಾದ ಹೊಸಪೇಟೆಯ ಜೋಗಿ ತಾಯಪ್ಪ ಹಾಗೂ ಆಂಥೋನಿದಾಸ್ ಅವರು ಸಚಿವರ ಮುಂದೆ ಬಿಚ್ಚಿಟ್ಟಿದ್ದರು.
ಹೊಸಪೇಟೆ: ಆನಂದ್ ಸಿಂಗ್‌ಗೆ ಡಬಲ್ ಶಾಕ್; ಏಕಾಂಗಿಯಾದ್ರಾ ಮೈನಿಂಗ್ ಲಾರ್ಡ್?
ಈಚೆಗೆ ಹಂಪಿ ವಿವಿ ಹೆಲಿಪ್ಯಾಡ್‌ನಿಂದ ಬೆಂಗಳೂರಿಗೆ ತೆರಳುವ ವೇಳೆ ಇಬ್ಬರನ್ನು ಕರೆದೊಯ್ದಿದ್ದಾಲ್ಲದೆ, ಬರುವಾರ ತಮ್ಮ ಕಾರಿನಲ್ಲಿಯೇ ಹೊಸಪೇಟೆಗೆ ಕರೆತಂದಿದ್ದಾರೆ. ತಮ್ಮ ಕನಸು ಈಡೇರಿಸಿಕೊಂಡ ಅಭಿಮಾನಿಗಳು ಸಂತಸದಲ್ಲಿದ್ದಾರೆ. ಅಲ್ಲದೆ ಹೆಲಿಕಾಪ್ಟರ್‌ನಲ್ಲಿ ಶಾಸಕರ ಜತೆ ತೆಗೆಸಿಕೊಂಡ ಸೆಲ್ಫಿಗಳನ್ನು ಎಲ್ಲರಿಗೂ ಕಳಿಸಿ ಅಭಿಮಾನ ವ್ಯಕ್ತಪಡಿಸಿದ್ದಾರೆ.