ವ್ಯಕ್ತಿ ಮೃತಪಟ್ಟ ಬಳಿಕ ಆಸ್ಪ​ತ್ರೆಗೆ ದಾಖ​ಲಾಗಲು ಕರೆ!

By Kannadaprabha NewsFirst Published Aug 27, 2020, 8:29 AM IST
Highlights

ವ್ಯಕ್ತಿಯೋರ್ವ ತೀವ್ರ ಅನಾರೋಗ್ಯದಿಂದ ಮೃತಪಟ್ಟ ಬಳಿಕ ಆತನ ಮನೆಗೆ ಕರೆ ಮಾಡಿದ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ.

ಮಂಡ್ಯ (ಆ.27): ಕೊರೋನಾ ಸೋಂಕಿನ ಜೊತೆಗೆ ಬಹು ಅಂಗಾಂಗ ವೈಫ​ಲ್ಯ​ದಿಂದ ವ್ಯಕ್ತಿಯೊಬ್ಬರು ಮೃತ​ಪಟ್ಟ3 ದಿನ​ದ ಬಳಿಕ ಆಸ್ಪ​ತ್ರೆಗೆ ದಾಖ​ಲಾ​ಗು​ವಂತೆ ಮಿಮ್ಸ್‌ ಕೋವಿಡ್‌ ಕೇಂದ್ರ​ದಿಂದ ದೂರ​ವಾಣಿ ಕರೆ ಬಂದಿರುವ ವಿಲ​ಕ್ಷಣ ಪ್ರಸಂಗ​ವೊಂದು ಜರುಗಿದೆ. 

ಕಿಡ್ನಿ, ಲಿವರ್‌ ವೈಫಲ್ಯ, ಶ್ವಾಸ​ಕೋ​ಶದ ತೊಂದ​ರೆ​ಯಿಂದ ಕಳೆದ ಬುಧ​ವಾರ ಮಂಡ್ಯದ ಶ್ರೀನಿ​ವಾ​ಸಲು ಮಿಮ್ಸ್‌ ಆಸ್ಪ​ತ್ರೆಗೆ ದಾಖ​ಲಾ​ಗಿ​ದ್ದರು. ಚಿಕಿತ್ಸೆ ಫಲ​ಕಾ​ರಿ​ಯಾ​ಗದೆ ಶನಿ​ವಾರ ಮುಂಜಾನೆ ಆಸ್ಪ​ತ್ರೆ​ಯಲ್ಲಿ ಅವರು ಮೃತ​ಪ​ಟ್ಟಿದ್ದರು. ರೋಗಿಯ ಸಂಬಂಧಿಕರು ಗಲಾಟೆ ಮಾಡಿದ ಬಳಿ​ಕ​ವಷ್ಟೇ ಸಂಜೆ ವೇಳೆಗೆ ಶವ​ವನ್ನು ನೀಡಿದರು. ತಾಲೂ​ಕಿನ ಸುಂಡ​ಹಳ್ಳಿ ಬಳಿ ಕೊರೋನಾ ಸೋಂಕಿ​ನಿಂದ ಮೃತ​ಪ​ಟ್ಟ​ವ​ರಿ​ಗಾಗಿ ಗುರು​ತಿ​ಸ​ಲಾ​ಗಿದ್ದ ಸ್ಥಳ​ದಲ್ಲಿ ಅಂತ್ಯ ​ಸಂಸ್ಕಾರವನ್ನೂ ನೆರ​ವೇ​ರಿ​ಸ​ಲಾ​ಗಿತ್ತು. 

ಬೆಂಗಳೂರು: 17 ದಿನದಲ್ಲಿ 50 ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ...

ಸೋಮ​ವಾರ ಮಧ್ಯಾಹ್ನ ಮೃತ ಶ್ರೀನಿ​ವಾ​ಸಲು ಅವರ ಮನೆ​ಯ​ವ​ರಿಗೆ ಮಿಮ್ಸ್‌ನ ಕೋವಿಡ್‌ ಸಿಬ್ಬಂದಿ ದೂರ​ವಾಣಿ ಕರೆ ಮಾಡಿ ಶ್ರೀನಿ​ವಾ​ಸಲು ಅವ​ರಿಗೆ ಸೋಂಕು ದೃಢ​ಪ​ಟ್ಟಿದೆ. ತಕ್ಷಣವೇ ಕೋವಿಡ್‌ ಆಸ್ಪ​ತ್ರೆಗೆ ದಾಖ​ಲಾ​ಗು​ವಂತೆ ಸೂಚಿ​ಸಿ​ದ್ದು ಅಚ್ಚ​ರಿಗೆ ಕಾರ​ಣ​ವಾ​ಯಿತು.

ಇದ​ರಿಂದ ಸಿಡಿ​ಮಿ​ಡಿ​ಗೊಂಡ ಮನೆ​ಯ​ವರು ಅವ​ರಾ​ಗಲೇ ಮೃತಪಟ್ಟು ಮೂರು ದಿನ ಕಳೆ​ದಿದೆ. ಈಗ ಎಲ್ಲಿಂದ ಕರೆ​ತಂದು ಆಸ್ಪ​ತ್ರೆಗೆ ದಾಖಲು ಮಾಡು​ವುದು ಎನ್ನು​ವ​ಷ್ಟ​ರಲ್ಲಿ ಸಿಬ್ಬಂದಿ ಮೊಬೈಲ್‌ ಸಂಪರ್ಕ ಕಡಿ​ತ​ಗೊ​ಳಿ​ಸಿ​ದರು.

ಸೆಪ್ಟಂಬರ್‌ ಅಂತ್ಯದೊಳಗೆ ರಾಜ್ಯದಲ್ಲಿ ಕೊರೋನಾ ಸೋಂಕಿರ ಸಂಖ್ಯೆ 6 ಲಕ್ಷಕ್ಕೆ?

"

click me!