ಹಾಲು ಉತ್ಪಾದಕರಿಗೆ ಬಂಪರ್, 8ರಿಂದ ಹಾಲಿನ ದರ ಹೆಚ್ಚಳ

By Kannadaprabha NewsFirst Published Feb 6, 2020, 10:53 AM IST
Highlights

ಹಾಲು ಉತ್ಪಾದಕರಿಗೆ ಫೆ.8ರಿಂದ ಲೀಟರ್‌ಗೆ 1ರು. ಹೆಚ್ಚಳ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಒಕ್ಕೂಟ ಮತ್ತು ಉತ್ಪಾದಕರ ಹಿತ ದಷ್ಟಿಯನ್ನು ಗಮನಸಿ ಹಾಲಿನ ದರ ಮತ್ತಷ್ಟು ಹೆಚ್ಚಿಸುವುದಾಗಿ ಕೋಚಿಮೂಲ್ ಒಕ್ಕೂಟದ ತಾಲೂಕು ನಿರ್ದೇಶಕ ಡಿ.ವಿ. ಹರೀಶ್ ಹೇಳಿದ್ದಾರೆ.

ಕೋಲಾರ(ಫೆ.06): ಕೋಲಾರ ತಾಲೂಕು ಹರಟಿ ಹಾ.ಉ.ಸ.ಸಂಘದ ಮೊದಲ ಅಂತಸ್ಥಿನ ಕಟ್ಟಡ ’ಅಮತ ಭವನ’ ಉದ್ಘಾಟನೆಯನ್ನು ಕೋಚಿಮೂಲ್ ಒಕ್ಕೂಟದ ತಾಲೂಕು ನಿರ್ದೇಶಕ ಡಿ.ವಿ. ಹರೀಶ್ ರವರು ನೇರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನೂತನ ಕಟ್ಟಡ ಕಟ್ಟಲು ಒಕ್ಕೂಟದಿಂದ 3 ಲಕ್ಷ ರು. ಸಹಾಯಧನ ನೀಡಿದ್ದು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯಿಂದ 1 ಲಕ್ಷ ರು. ಗಳನ್ನು ನೀಡಲು ಶಿಫಾರಸು ಮಾಡಲಾಗಿದೆ ಎಂದಿದ್ದಾರೆ.

8ರಿಂದ ಲೀಟರ್‌ಗೆ ₹1 ಹೆಚ್ಚಳ:

ಹಾಲು ಉತ್ಪಾದಕರಿಗೆ ಫೆ.8ರಿಂದ ಲೀಟರ್‌ಗೆ 1ರು. ಹೆಚ್ಚಳ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಒಕ್ಕೂಟ ಮತ್ತು ಉತ್ಪಾದಕರ ಹಿತ ದಷ್ಟಿಯನ್ನು ಗಮನಸಿ ಹಾಲಿನ ದರ ಮತ್ತಷ್ಟು ಹೆಚ್ಚಿಸುವುದಾಗಿ ಭರವಸೆ ನೀಡಿದ ಅವರು, ರಿಯಾಯಿತಿ ದರದಲ್ಲಿ ಎ.ಟಿ. ಜೋಳ ಮತ್ತು ಎಸ್.ಎಸ್.ಜಿ. ಜೋಳ ಲಭ್ಯವಿದ್ದು ಉತ್ಪಾದಕರು ಉಪಯೋಗಿಸಿಕೊಳ್ಳಬೇಕು ಎಂದಿದ್ದಾರೆ.

3 ವರ್ಷಗಳಲ್ಲಿ 30 ಸಾವಿರ ಶಿಕ್ಷಕರ ನೇಮಕ

ದಿನೇ ದಿನೇ ಹಾಲು ಶೇಖರಣೆ ಕಡಿಮೆ ಯಾಗುತ್ತಿದ್ದು ಗಂಭೀರ ಪರಿಣಾಮ ಬೀರುತ್ತಿದೆ. ಅದ್ದರಿಂದ ಹಾಲು ಉತ್ಪಾದಕರು ಹೆಚ್ಚು ಹಾಲು ಉತ್ಪಾದಿಸುವ ಮೂಲಕ ಹೈನೋದ್ಯಮವನ್ನು ಉಳಿಸಿಕೊಳ್ಳುವಂತೆ ತಿಳಿಸಿದರು. ಗುಣಮಟ್ಟಕ್ಕೆ ತಕ್ಕಂತೆ ದರ: ಶಿಬಿರದ ಉಪವ್ಯವಸ್ಥಾಪಕ ಡಾ.ಎ.ಸಿ. ಶ್ರೀನಿವಾಸಗೌಡ ಹಾಲು ಉತ್ಪಾದಕರಿಗೆ ಗುಣಮಟ್ಟಕ್ಕೆ ತಕ್ಕಂತೆ ದರ ನೀಡಿ. ಗುಣಮಟ್ಟದ ಹಾಲು ಸಂಘಕ್ಕೆ ನೀಡುವುದರಿಂದ ಸಂಘದ ಮತ್ತು ಉತ್ಪಾದಕರ ಸರ್ವತೋಮುಖ ಅಭಿವದ್ದಿಗೆ ಸಾಧ್ಯವೆಂದು ತಿಳಿಸಿದರು.

click me!