ಲ್ಲೆಯ ಜನರ ಶಿಸ್ತು ಮತ್ತು ಸಂಯಮದಿಂದಾಗಿ ಕರೋನಾ ಸೋಂಕು ಸಂಪೂರ್ಣ ನಿಯಂತ್ರಣದಲ್ಲಿತ್ತು. ಆದರೆ ಹೊರರಾಜ್ಯಗಳಿಂದ ಬಂದವರಿಂದ ಜಿಲ್ಲೆಯ ಜನರ ನೆಮ್ಮದಿಗೆ ಭಂಗವುಂಟಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.
ತೀರ್ಥಹಳ್ಳಿ(ಮೇ.18): ಹೊರರಾಜ್ಯಗಳಿಂದ ಬಂದಿರುವ ವ್ಯಕ್ತಿಗಳಿಂದಾಗಿ ಹಸಿರು ವಲಯದಲ್ಲಿದ್ದ ಜಿಲ್ಲೆಯ ಜನರ ನೆಮ್ಮದಿಗೆ ಭಂಗವುಂಟಾಗಿದೆ. ಈ ಬಗ್ಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ತಾಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರೋನಾ ಸೋಂಕು ನಿಯಂತ್ರಣ ಹಾಗೂ ಇತರೆ ಅಭಿವೃದ್ದಿ ಕಾರ್ಯಗಳಿಗೆ ಸಂಭಂಧಿಸಿದಂತೆ ತಾಲೂಕಿನಲ್ಲಿ ನಡೆದಿರುವ ಕಾರ್ಯಗಳ ಬಗ್ಗೆ ವಿವರಣೆ ಪಡೆದು ಮಾತನಾಡಿದರು.
undefined
ಜಿಲ್ಲೆಯ ಜನರ ಶಿಸ್ತು ಮತ್ತು ಸಂಯಮದಿಂದಾಗಿ ಕರೋನಾ ಸೋಂಕು ಸಂಪೂರ್ಣ ನಿಯಂತ್ರಣದಲ್ಲಿತ್ತು. ಆದರೆ ಹೊರರಾಜ್ಯಗಳಿಂದ ಬಂದವರಿಂದ ಎರಡು ಪ್ರಕರಣ ಕಂಡು ಬಂದಿರುವ ಹಿನ್ನೆಲೆ ಸಹಜವಾಗಿ ಜನರು ಎಚ್ಚರಿಕೆಯಿಂದ ಇದ್ದು ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯ ಎಂದು ಅಭಿಪ್ರಾಯಿಸಿದರು.
ಗ್ರಾಪಂ ಚುನಾವಣೆ ಮುಂದಕ್ಕೆ:
ಕೊರೋನಾ ಹಿನ್ನೆಲೆಯಲ್ಲಿ ಗ್ರಾಪಂಗಳ ಚುನಾವಣೆಯನ್ನು 6 ತಿಂಗಳ ಅವಧಿಗೆ ಮುಂದೂಡಲು ಸರ್ಕಾರ ತೀರ್ಮಾನಿಸಿದ್ದು ರಾಜ್ಯ ಚುನಾವಣಾ ಆಯೋಗಕ್ಕೂ ತಿಳಿಸಲಾಗಿದೆ. ಗ್ರಾಪಂಗಳ ಆಡಳಿತಾತ್ಮಕ ನಿರ್ವಾತ ತಪ್ಪಿಸಲು ಬದಲಿ ಆಡಳಿತ ವ್ಯವಸ್ಥೆ ಮಾಡಬೇಕಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅನಿಯಮ 1993 ಪ್ರಕರಣ 8 ರಲ್ಲಿ ಆಡಳಿತ ಸಮಿತಿಗಳನ್ನು ನೇಮಿಸಲು ಜಿಲ್ಲಾಧಿಕಾರಿಗಳು ಅಕಾರ ಹೊಂದಿರುತ್ತಾರೆ. ರಾಜ್ಯದ 6021 ಗ್ರಾಪಂಗಳಿಗೆ 96 ಸಾವಿರ ಪ್ರತಿನಿಧಿಗಳನ್ನು ಹಂತಹಂತವಾಗಿ ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಮಲೆನಾಡಿಗೆ ಮುಂಬೈ ಸಂಪರ್ಕ ಅತಿ ದೊಡ್ಡ ಕಂಟಕ
ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವುದು ಅಗತ್ಯ. ಪ್ರಧಾನಿ ಆದೇಶದಂತೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಪ್ರತಿ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಬೇಕು. ಮತ್ತು ಈ ಯೋಜನೆಗೆ ಹೆಚ್ಚು ಒತ್ತು ನೀಡಬೇಕಿದ್ದು ಪ್ರಸ್ತಾವನೆ ಕಳಿಸುವಂತೆ ಸಚಿವರು ಸೂಚಿಸಿದರು. ಹಾಗೂ ರಿಂಗ್ ಬಾವಿಗಳ ನಿರ್ಮಾಣದ ಎಸ್‌ಆರ್ ದರ ಹೆಚ್ಚಿಸುವ ಭರವಸೆ ಸಹ ನೀಡಿದರು. ಅಲ್ಲದೇ ಹಣಗೆರೆ ಗ್ರಾಪಂ ವ್ಯಾಪ್ತಿಯ ಸಂಕ್ಲಾಪುರ ಹಾಗೂ ಕೊಂಬಿನಕೈ ಗ್ರಾಮದಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಅಡ್ಡಿ ಪಡಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ತಾವೇ ಖುದ್ದಾಗಿ ಮಾತನಾಡುವುದಾಗಿ ತಿಳಿಸಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಅಗ್ರಹಾರ ಹೋಬಳಿಯ ಹುಂಚದಕಟ್ಟೆವರೆಗೆ ಮತ್ತು ಆಗುಂಬೆ ಹೋಬಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ತುಂಗಾನದಿಯಿಂದ ನೀರನ್ನು ಒದಗಿಸುವ ಅಗತ್ಯವಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ನೊಣಬೂರು ಗ್ರಾಪಂ ವ್ಯಾಪ್ತಿಯ ಬಾವಿಗಳ ನೀರಿನಲ್ಲಿ ಫೊ್ಲರೈಡ್ ಅಂಶ ಕಂಡುಬಂದಿದೆ ಎಂದು ಹೇಳಿದರು. ಜಿಪಂ ಅದ್ಯಕ್ಷೆ ಜ್ಯೋತಿ ಎಸ್ ಕುಮಾರ್, ಸದಸ್ಯರಾದ ಕೆ.ಶ್ರೀನಿವಾಸ್, ಅಪೂರ್ವ, ಜಿಪಂ ಸಿಇಓ ವೈಶಾಲಿ, ತಹಶೀಲ್ದಾರ್ ಡಾ.ಎಸ್.ಬಿ.ಶ್ರೀಪಾದ, ತಾಪಂ ಇಓ ಆಶಾಲತಾ ಇತರರು ಇದ್ದರು.
ಅಂಬುತೀರ್ಥಕ್ಕೆ 3 ಕೋಟಿ ರು ಮಂಜೂರು:
ಶರಾವತಿ ನದಿಯ ಉಗಮ ಸ್ಥಾನವಾಗಿರುವ ಅಂಬುತೀರ್ಥದ ಅಭಿವೃದ್ಧಿಗೆ 3 ಕೋಟಿ ರೂ ಅನುದಾನ ಘೋಷಣೆಯಾಗಿದ್ದು, ಸಂಬಂಧಿತ ಅಧಿಕಾರಿಗಳು ಕೂಡಲೇ ಕಾಮಗಾರಿಗೆ ಕ್ರಿಯಾಯೋಜನೆ ಸಿದ್ದಪಡಿಸಬೇಕು - ಕೆ.ಎಸ್.ಈಶ್ವರಪ್ಪ, ಪಂಚಾಯತ್ ರಾಜ್ ಸಚಿವ