ಪ್ರಯಾಣಿಕರ ಗಮನಕ್ಕೆ: ಈ ರೂಟ್‌ನಲ್ಲಿ ಮೆಟ್ರೋ ವ್ಯತ್ಯಯ

Kannadaprabha News   | Asianet News
Published : Feb 27, 2021, 08:16 AM IST
ಪ್ರಯಾಣಿಕರ ಗಮನಕ್ಕೆ: ಈ ರೂಟ್‌ನಲ್ಲಿ ಮೆಟ್ರೋ ವ್ಯತ್ಯಯ

ಸಾರಾಂಶ

ಎಂ.ಜಿ.ರೋಡ್‌-ಬೈಯಪ್ಪನಹಳ್ಳಿ ನಡುವೆ ನಾಳೆ ಮೆಟ್ರೋ ವ್ಯತ್ಯಯ| ಬೆಳಗ್ಗೆ 9ರಿಂದ ಈ ಮಾರ್ಗದಲ್ಲಿ ಮೆಟ್ರೋ ಓಡಾಟ ಪುನಾರಂಭ| ಉಳಿದಂತೆ ನೇರಳೆ ಮಾರ್ಗದ ಎಂ.ಜಿ.ರಸ್ತೆ ಮತ್ತು ಮೈಸೂರು ರಸ್ತೆ ಮಧ್ಯೆ ರೈಲು ಓಡಾಟ ಯಥಾ ಪ್ರಕಾರ ಇರಲಿದೆ| 

ಬೆಂಗಳೂರು(ಫೆ.27): ಟ್ರಿನಿಟಿ ಮತ್ತು ಹಲಸೂರು ಮೆಟ್ರೋ ನಿಲ್ದಾಣಗಳ ನಡುವೆ ದುರಸ್ತಿ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಭಾನುವಾರ ಫೆ.28ರಂದು ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ಎಂ.ಜಿ.ರೋಡ್‌ ಮೆಟ್ರೋ ನಿಲ್ದಾಣದ ನಡುವೆ ಮೆಟ್ರೋ ಸೇವೆ ಇರುವುದಿಲ್ಲ.

ದುರಸ್ತಿ ಕಾಮಗಾರಿ ಮುಕ್ತಾಯಗೊಂಡ ಬಳಿಕ ಅಂದರೆ ಬೆಳಗ್ಗೆ 9ರಿಂದ ಈ ಮಾರ್ಗದಲ್ಲಿ ಮೆಟ್ರೋ ಓಡಾಟ ಪುನಾರಂಭಗೊಳ್ಳಲಿದೆ. ಉಳಿದಂತೆ ನೇರಳೆ ಮಾರ್ಗದ ಎಂ.ಜಿ.ರಸ್ತೆ ಮತ್ತು ಮೈಸೂರು ರಸ್ತೆ ಮಧ್ಯೆ ರೈಲು ಓಡಾಟ ಯಥಾ ಪ್ರಕಾರ ಇರಲಿದೆ. 

ಮೆಟ್ರೋಗೆ ಆಸ್ತಿ ತೆರಿಗೆ ಬದಲು ಸೇವಾ ಶುಲ್ಕ

ಹಸಿರು ಮಾರ್ಗದಲ್ಲಿಯೂ ರೈಲು ಓಡಾಟ ಎಂದಿನಂತೆಯೇ ಇರಲಿದೆ ಎಂದು ನಮ್ಮ ಮೆಟ್ರೋ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
 

PREV
click me!

Recommended Stories

Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!
ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?